PAK vs ENG: 35ನೇ ಟೆಸ್ಟ್ ಶತಕ ಸಿಡಿಸಿ ನಾಲ್ವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದ ಜೋ ರೂಟ್..!
Joe Root Breaks Brian Lara Record: 35ನೇ ಟೆಸ್ಟ್ ಶತಕದೊಂದಿಗೆ ಜೋ ರೂಟ್ ಇದೀಗ ವೆಸ್ಟ್ ಇಂಡೀಸ್ನ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಸೇರಿದಂತೆ ನಾಲ್ವರು ಕ್ರಿಕೆಟ್ ದಿಗ್ಗಜರ ಅಧಿಕ ಟೆಸ್ಟ್ ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ರೂಟ್, ಲಾರಾ ಹೊರತುಪಡಿಸಿ ಸುನಿಲ್ ಗವಾಸ್ಕರ್, ಯೂನಿಸ್ ಖಾನ್ ಮತ್ತು ಮಾಹೇಲಾ ಜಯವರ್ಧನೆಯನ್ನು ಸಹ ಹಿಂದಿಕ್ಕಿದ್ದಾರೆ. ಈ ನಾಲ್ವರು ಮಾಜಿ ಕ್ರಿಕೆಟಿಗರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ತಲಾ 34 ಶತಕಗಳನ್ನು ಸಿಡಿಸಿದ್ದರು.