IPL ನಡುವೆ ಪಾಕಿಸ್ತಾನ್ ಟಿ20 ಸರಣಿ: ನ್ಯೂಝಿಲೆಂಡ್ ಆಟಗಾರರ ಮುಂದಿನ ನಡೆಯೇನು?
TV9 Web | Updated By: ಝಾಹಿರ್ ಯೂಸುಫ್
Updated on:
Mar 14, 2024 | 1:09 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17 ರಲ್ಲಿ ನ್ಯೂಝಿಲೆಂಡ್ನ 8 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಈ ಆಟಗಾರರು ಇದೀಗ ಪಾಕಿಸ್ತಾನ್ ವಿರುದ್ಧದ ಟಿ20 ಸರಣಿ ಆಡಬೇಕಿದೆ. ಏಪ್ರಿಲ್ 18 ರಿಂದ ಪಾಕಿಸ್ತಾನ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಶುರುವಾಗಲಿದ್ದು, ಈ ಸರಣಿಗಾಗಿ ನ್ಯೂಝಿಲೆಂಡ್ ಆಟಗಾರರು ಐಪಿಎಲ್ ತೊರೆಯಲಿದ್ದಾರಾ ಕಾದು ನೋಡಬೇಕಿದೆ.
1 / 6
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯಂತೆ ಏಪ್ರಿಲ್ 18 ರಿಂದ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಇದರಿಂದ ಕಿವೀಸ್ ಆಟಗಾರರು ಈ ಬಾರಿಯ ಐಪಿಎಲ್ಗೆ (IPL 2024) ಗೈರಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
2 / 6
ಏಕೆಂದರೆ ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದ್ದು, ಮೇ ಅಂತ್ಯದ ವೇಳೆ ಮುಕ್ತಾಯವಾಗಲಿದೆ. ಇತ್ತ ಐಪಿಎಲ್ನ ಬಹುತೇಕ ತಂಡಗಳಲ್ಲಿ ನ್ಯೂಝಿಲೆಂಡ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗೆ ಕಾಣಿಸಿಕೊಂಡಿರುವ 8 ಆಟಗಾರರು ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಖಾಯಂ ಸದಸ್ಯರು.
3 / 6
ಇದೀಗ ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗೆ ಡೇಟ್ ಫಿಕ್ಸ್ ಆಗಿರುವ ಕಾರಣ ಏಪ್ರಿಲ್ನ ಮೂರನೇ ವಾರದಲ್ಲಿ ನ್ಯೂಝಿಲೆಂಡ್ ಆಟಗಾರರು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕಾಗಿದೆ. ಹೀಗಾಗಿಯೇ ಈ ಬಾರಿ ನ್ಯೂಝಿಲೆಂಡ್ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
4 / 6
ಅತ್ತ ಪಾಕಿಸ್ತಾನ್ ಆಟಗಾರರಿಗೆ ಐಪಿಎಲ್ನಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ ಈ ವೇಳಾಪಟ್ಟಿಯನ್ನು ಬದಲಿಸುವಂತೆ ಪಾಕ್ ಕ್ರಿಕೆಟ್ ಬೋರ್ಡ್ಗೆ ಬಿಸಿಸಿಐ ಸೂಚಿಸುವಂತಿಲ್ಲ. ಇನ್ನು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ಸೂಚಿಸಿದರೂ, ಪಾಕ್ ಕ್ರಿಕೆಟ್ ಮಂಡಳಿ ದಿನಾಂಕ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.
5 / 6
ಹೀಗಾಗಿ ಐಪಿಎಲ್ನಲ್ಲಿ ಭಾಗವಹಿಸಲಿರುವ ನ್ಯೂಝಿಲೆಂಡ್ನ ಆಟಗಾರರ ಮುಂದಿನ ನಡೆಯೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಒಂದು ವೇಳೆ ಐಪಿಎಲ್ನಲ್ಲಿರುವ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದರೆ, ನ್ಯೂಝಿಲೆಂಡ್ ದ್ವಿತೀಯ ದರ್ಜೆಯ ತಂಡವನ್ನು ಪಾಕ್ಗೆ ಕಳುಹಿಸಲಿದೆ. ಅದರಂತೆ ಅತ್ತ ಪಾಕ್ ವಿರುದ್ಧ ಸರಣಿ, ಇತ್ತ ಉಳಿದ ಆಟಗಾರರಿಗೆ ಐಪಿಎಲ್ ಆಡಲು ಅವಕಾಶ ಮಾಡಿಕೊಡಬಹುದು. ಇಲ್ಲದಿದ್ದರೆ ಏಪ್ರಿಲ್ ಮಧ್ಯಭಾಗದಲ್ಲಿ ನ್ಯೂಝಿಲೆಂಡ್ ಆಟಗಾರರು ಐಪಿಎಲ್ ತೊರೆಯಬೇಕಾಗುತ್ತದೆ.
6 / 6
ಐಪಿಎಲ್ನಲ್ಲಿರುವ ನ್ಯೂಝಿಲೆಂಡ್ ಆಟಗಾರರು: ಆಟಗಾರರೆಂದರೆ ಡೆವೊನ್ ಕಾನ್ವೆ (CSK), ಡೇರಿಲ್ ಮಿಚೆಲ್ (CSK), ರಚಿನ್ ರವೀಂದ್ರ (CSK), ಮಿಚೆಲ್ ಸ್ಯಾಂಟ್ನರ್ (CSK), ಕೇನ್ ವಿಲಿಯಮ್ಸನ್ (GT), ಲಾಕಿ ಫರ್ಗುಸನ್ (RCB), ಟ್ರೆಂಟ್ ಬೌಲ್ಟ್ (RR), ಗ್ಲೆನ್ ಫಿಲಿಪ್ಸ್ (SRH).