ಹೃದಯಾಘಾತದಿಂದ ಸಾವನ್ನಪ್ಪಿದ 36 ವರ್ಷದ ಪಾಕಿಸ್ತಾನ ಕ್ರಿಕೆಟರ್ ಶಹಜಾದ್ ಅಜಮ್

| Updated By: ಪೃಥ್ವಿಶಂಕರ

Updated on: Sep 30, 2022 | 6:52 PM

ಶಹಜಾದ್ ಅಜಮ್ ರಾಣಾ ತಮ್ಮ ವೃತ್ತಿ ಜೀವನದಲ್ಲಿ 496 ವಿಕೆಟ್‌ಗಳನ್ನು ಕಬಳಿಸಿದ್ದು, ಪ್ರಥಮ ದರ್ಜೆಯಲ್ಲಿ 388 ವಿಕೆಟ್‌ಗಳನ್ನು ಪಡೆದಿದ್ದರು.

1 / 5
ಪಾಕಿಸ್ತಾನದ ವೇಗದ ಬೌಲರ್ ಶಹಜಾದ್ ಅಜಮ್ ರಾಣಾ ತಮ್ಮ 36 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅಜಮ್ ಅವರ ಹಠಾತ್ ನಿದನದಿಂದ ಅವರ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.

2 / 5
ಸಿಯಾಲ್‌ಕೋಟ್‌ನವರಾದ ಶಹಜಾದ್ ಅಜಮ್ ರಾಣಾ ಅವರು ಬಲಗೈ ವೇಗದ ಬೌಲರ್ ಆಗಿದ್ದರು. 95 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅಜಮ್, 58 ಲಿಸ್ಟ್ ಎ ಮತ್ತು 29 ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ.

3 / 5
ಶಹಜಾದ್ ಅಜಮ್ ರಾಣಾ ತಮ್ಮ ವೃತ್ತಿ ಜೀವನದಲ್ಲಿ 496 ವಿಕೆಟ್‌ಗಳನ್ನು ಕಬಳಿಸಿದ್ದು, ಪ್ರಥಮ ದರ್ಜೆಯಲ್ಲಿ 388 ವಿಕೆಟ್‌ಗಳನ್ನು ಪಡೆದಿದ್ದರು. ಅದೇ ಸಮಯದಲ್ಲಿ, ಅವರು ಲಿಸ್ಟ್ ಎ ನಲ್ಲಿ 81 ಮತ್ತು ಟಿ 20 ಕ್ರಿಕೆಟ್‌ನಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನೊಂದು ಕುತೂಹಲಕಾರಿಯಾದ ಸಂಗತಿಯೆಂದರೆ ಶಹಜಾದ್, ಈಗಿನ ಪಾಕ್ ತಂಡದ ನಾಯಕ ಬಾಬರ್ ಅಜಮ್ ಜೊತೆ ಕ್ರಿಕೆಟ್ ಆಡಿದ್ದರು.

4 / 5
2018 ರಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯವನ್ನು ಆಡಿದ್ದ ಶಹಜಾದ್ ಅಜಮ್, ಕೊನೆಯ ಲಿಸ್ಟ್ ಎ ಪಂದ್ಯದಲ್ಲಿ ಅಜಮ್ 5 ವಿಕೆಟ್ ಪಡೆದಿದ್ದರು. ಜೊತೆಗೆ 2020 ರಲ್ಲಿ ಅಜಮ್ ತಮ್ಮ ಕೊನೆಯ T20 ಪಂದ್ಯವನ್ನು ಆಡಿದ್ದರು.

5 / 5
ಇಸ್ಲಾಮಾಬಾದ್ ಪರ 2017-18ರಲ್ಲಿ ಆಡಿದ ಶಹಜಾದ್ ಸಖತ್ ಸುದ್ದಿಯಾಗಿದ್ದರು. ಈ ವೇಗದ ಬೌಲರ್ ಇಸ್ಲಾಮಾಬಾದ್ ಪರ 7 ಪಂದ್ಯಗಳಲ್ಲಿ ಒಟ್ಟು 26 ವಿಕೆಟ್ ಪಡೆದಿದ್ದರು. ಇದರ ನಂತರ, ಅವರು 2018-19 ODI ಕಪ್‌ನಲ್ಲಿ ಇಸ್ಲಾಮಾಬಾದ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆಯನ್ನು ಸಹ ಮಾಡಿದ್ದರು.