IPL 2023: ಐಪಿಎಲ್ಗೆ ಆಯ್ಕೆಯಾಗಿರುವ ಪಾಕ್ ಮೂಲದ 3 ಕ್ರಿಕೆಟಿಗರು ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Dec 27, 2022 | 9:23 PM
IPL 2023 Kannada: 2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಐಪಿಎಲ್ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಹೀಗಾಗಿ ಪಾಕ್ ಆಟಗಾರರು ಐಪಿಎಲ್ನಲ್ಲಿ ಅವಕಾಶ ಕಾಣಿಸಿಕೊಳ್ಳುತ್ತಿಲ್ಲ.
1 / 5
ಐಪಿಎಲ್ ಸೀಸನ್ 16 ಗಾಗಿ ಎಲ್ಲಾ ತಂಡಗಳು ಫೈನಲ್ ಆಗಿವೆ. ಈ ಬಾರಿ ನಡೆದ ಹರಾಜಿನ ಮೂಲಕ ಒಟ್ಟು 80 ಆಟಗಾರರು ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಹರಾಜಿನ ಮೂಲಕ ಇಬ್ಬರು ಪಾಕ್ ಮೂಲದ ಕ್ರಿಕೆಟಿಗರು ಸಹ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಇವರು ಪಾಕ್ ರಾಷ್ಟ್ರೀಯ ತಂಡದ ಸದಸ್ಯರಲ್ಲ ಎಂಬುದು ವಿಶೇಷ.
2 / 5
ಅಂದರೆ 2008 ರಲ್ಲಿ ಭಾರತದ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಐಪಿಎಲ್ನಲ್ಲಿ ಪಾಕಿಸ್ತಾನದ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಹೀಗಾಗಿ ಪಾಕ್ ಆಟಗಾರರು ಐಪಿಎಲ್ನಲ್ಲಿ ಅವಕಾಶ ಕಾಣಿಸಿಕೊಳ್ಳುತ್ತಿಲ್ಲ. ಇದಾಗ್ಯೂ ಬೇರೆ ದೇಶದ ಪರ ಆಡುತ್ತಿರುವ ಪಾಕ್ ಮೂಲದ ಆಟಗಾರರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಮೂವರು ಪಾಕ್ ಮೂಲದ ಆಟಗಾರರು ಐಪಿಎಲ್ನಲ್ಲಿದ್ದಾರೆ. ಅವರೆಂದರೆ....
3 / 5
ಮೊಯೀನ್ ಅಲಿ: ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ ಅವರ ಕುಟುಂಬಸ್ಥರು ಪಾಕ್ ಮೂಲದವರು. ಆದರೆ ಅವರು ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಇಂಗ್ಲೆಂಡ್ ಪರ. ಈ ಹಿಂದೆ ಆರ್ಸಿಬಿ ಪರ ಕಾಣಿಸಿಕೊಂಡಿದ್ದ ಮೊಯೀನ್ ಅಲಿ ಇದೀಗ ಸಿಎಸ್ಕೆ ತಂಡದಲ್ಲಿದ್ದಾರೆ.
4 / 5
ಸಿಕಂದರ್ ರಾಜಾ: ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸುವ ಸಿಕಂದರ್ ರಾಜಾ ಪಾಕ್ ಮೂಲದವರು. ರಾಜಾ ಅವರು ಹುಟ್ಟಿದ್ದು ಪಾಕಿಸ್ತಾನದ ಸಿಯಾಲ್‌ಕೋಟ್ ನಗರದಲ್ಲಿ. ಬಾಲ್ಯದಲ್ಲಿ ಪಾಕ್ನಲ್ಲೇ ಅಭ್ಯಾಸ ಆರಂಭಿಸಿದ್ದ ಸಿಕಂದರ್ ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ಜಿಂಬಾಬ್ವೆ ಪರ ಎಂಬುದು ವಿಶೇಷ. ಇತ್ತ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಸಿಕಂದರ್ ರಾಜಾ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 50 ಲಕ್ಷ ರೂ.ಗೆ ಖರೀದಿಸಿದೆ.
5 / 5
ಆದಿಲ್ ರಶೀದ್: ಇಂಗ್ಲೆಂಡ್ ತಂಡದ ಸ್ಪಿನ್ನರ್ ಆದಿಲ್ ರಶೀದ್ ಕುಟುಂಬಸ್ಥರು ಕೂಡ ಪಾಕಿಸ್ತಾನ್ ಮೂಲದವರಾಗಿದ್ದಾರೆ. ಇದೀಗ ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಆದಿಲ್ ಅವರನ್ನು ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2 ಕೋಟಿ ರೂ. ಖರೀದಿಸಿದೆ.