Asia Cup 2022: 10 ವರ್ಷಗಳ ಏಷ್ಯಾಕಪ್ ಬರವನ್ನು ಈ ವರ್ಷವಾದರೂ ಕೊನೆಗೊಳಿಸುತ್ತಾ ಪಾಕ್ ತಂಡ?

| Updated By: ಪೃಥ್ವಿಶಂಕರ

Updated on: Sep 11, 2022 | 5:22 PM

Asia Cup 2022: ಕಳೆದ 10 ವರ್ಷಗಳಿಂದ ಒಮ್ಮೆಯೂ ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿರಲಿಲ್ಲ. 2012ರಲ್ಲಿ ಕೊನೆಯ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿದ್ದರು.

1 / 5
ಏಷ್ಯಾ ಕಪ್-2022 ರ ಅಂತಿಮ ಪಂದ್ಯ ಭಾನುವಾರ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಈ ಪಂದ್ಯದ ನಂತರ ಏಷ್ಯಾ ತನ್ನ ಹೊಸ ಚಾಂಪಿಯನ್ ತಂಡವನ್ನು ಪಡೆಯಲಿದೆ. ಪಾಕಿಸ್ತಾನಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ತಂಡಕ್ಕೆ 10 ವರ್ಷಗಳ ಬರ ನೀಗಿಸುವ ಅವಕಾಶವಿದೆ.

2 / 5
ಕಳೆದ 10 ವರ್ಷಗಳಿಂದ ಒಮ್ಮೆಯೂ ಏಷ್ಯಾಕಪ್ ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿರಲಿಲ್ಲ. 2012ರಲ್ಲಿ ಕೊನೆಯ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿದ್ದರು. ಇದಾದ ಬಳಿಕ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ನಿರಾಸೆ ಮಾತ್ರ ಕಂಡಿದ್ದಾರೆ.

3 / 5
2012ರಲ್ಲಿ ಪಾಕಿಸ್ತಾನ ಏಷ್ಯಾಕಪ್ ಗೆದ್ದಾಗ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು. ಅಂದಿನಿಂದ 2018ರವರೆಗೆ ಒಮ್ಮೆಯೂ ಫೈನಲ್ ತಲುಪಿರಲಿಲ್ಲ.

4 / 5
ಈ ಬಾರಿ ಪಾಕಿಸ್ತಾನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ನಾಯಕ ಬಾಬರ್ ಅಜಮ್ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಏಷ್ಯಾಕಪ್ ಟ್ರೋಫಿಯನ್ನು ಪಾಕಿಸ್ತಾನಕ್ಕೆ ನೀಡಲು ಬಯಸಿದ್ದಾರೆ.

5 / 5
ಇದುವರೆಗಿನ ಏಷ್ಯಾಕಪ್ ಇತಿಹಾಸದಲ್ಲಿ ಪಾಕಿಸ್ತಾನ ಎರಡು ಬಾರಿ ಮಾತ್ರ ಈ ಟೂರ್ನಿಯನ್ನು ಗೆಲ್ಲಲು ಸಾಧ್ಯವಾಗಿದೆ. 2012 ರ ಮೊದಲು, ಪಾಕ್ ತಂಡ 2000 ರಲ್ಲಿ ಈ ಪಂದ್ಯಾವಳಿಯನ್ನು ಗೆದ್ದಿತ್ತು, ಜೊತೆಗೆ ಎರಡು ಬಾರಿ ರನ್ನರ್ ಅಪ್ ಕೂಡ ಆಗಿತ್ತು. ಆ ವೇಳೆ 1986 ರಲ್ಲಿ ಹಾಗೂ 2014 ರಲ್ಲಿ ಪಾಕಿಸ್ತಾನ, ಲಂಕಾ ಎದುರು ಫೈನಲ್​ನಲ್ಲಿ ಸೋತು ಚಾಂಪಿಯನ್ ಪಟ್ಟ ಮಿಸ್ ಮಾಡಿಕೊಂಡಿತ್ತು

Published On - 5:22 pm, Sun, 11 September 22