IPL 2024: ಐಪಿಎಲ್​ ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚು ಹಣ ಪಡೆದ ಸ್ಟಾರ್ಕ್, ಕಮಿನ್ಸ್

|

Updated on: May 27, 2024 | 10:30 AM

IPL 2024 KKR vs SRH: ಐಪಿಎಲ್ 2024 ರ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಚೆನ್ನೈನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿ ಮೂರನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ಕೆಕೆಆರ್ 2012 ಮತ್ತು 2014 ರಲ್ಲಿ ಪ್ರಶಸ್ತಿ ಜಯಸಿತ್ತು.

1 / 6
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಕ್ಕೆ ತೆರೆ ಬಿದ್ದಿದೆ. ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ (KKR)​ ತಂಡ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿ ಕೆಕೆಆರ್ 3ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ.

2 / 6
ಈ ಟ್ರೋಫಿಯೊಂದಿಗೆ ಬಹುಮಾನ ಮೊತ್ತವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಕೋಟಿ ರೂ. ಪಡೆದುಕೊಂಡಿದೆ. ಹಾಗೆಯೇ ರನ್ನರ್ ಅಪ್ ತಂಡ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 12.5 ಕೋಟಿ ರೂ. ಲಭಿಸಿದೆ.

3 / 6
ವಿಶೇಷ ಎಂದರೆ ಈ ಎರಡು ತಂಡಗಳಿಗೆ ಸಿಕ್ಕ ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚು ಹಣವನ್ನು ಉಭಯ ಫ್ರಾಂಚೈಸಿಗಳು ಇಬ್ಬರು ಆಟಗಾರರಿಗೆ ನೀಡಿದೆ. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆದ ಇಬ್ಬರು ಆಟಗಾರರು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

4 / 6
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಇದೀಗ ಸ್ಟಾರ್ಕ್ 24.75 ಪಡೆದುಕೊಂಡರೆ, ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್ ತಂಡಕ್ಕೆ ಸಿಕ್ಕಿರುವುದು 20 ಕೋಟಿ ರೂ. ಮಾತ್ರ.

5 / 6
ಇನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪ್ಯಾಟ್ ಕಮಿನ್ಸ್ ಖರೀದಿಗಾಗಿ ವ್ಯಯಿಸಿದ್ದು ಬರೋಬ್ಬರಿ 20.50 ಕೋಟಿ ರೂ. ಅದೇ ಎಸ್​ಆರ್​ಹೆಚ್ ತಂಡಕ್ಕೆ ಸಿಕ್ಕ ಪ್ರಶಸ್ತಿ ಮೊತ್ತ 12.50 ಕೋಟಿ ರೂ. ಮಾತ್ರ.

6 / 6
ಅಂದರೆ ಉಭಯ ತಂಡಗಳು ಇಬ್ಬರು ಆಟಗಾರರಿಗೆ ವ್ಯಯಿಸಿದ ಮೊತ್ತಕ್ಕಿಂತ ಐಪಿಎಲ್ ಪ್ರಶಸ್ತಿ ಹಣ ಕಡಿಮೆ ಇರುವುದು ವಿಶೇಷ. ಹೀಗಾಗಿಯೇ ಮುಂಬರುವ ಸೀಸನ್​ಗಳಲ್ಲಿ ಐಪಿಎಲ್ ಪ್ರೈಸ್ ಮನಿ ಹೆಚ್ಚಿಸಬೇಕೆಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.