- Kannada News Photo gallery Cricket photos PCB Najam Sethi shakes up PCB by announcing withdrawal from chairmanship race
PCB: ನಜಮ್ ಸೇಥಿ ಅಧಿಕಾರಾವಧಿ ಅಂತ್ಯ; ಪಾಕ್ ಕ್ರಿಕೆಟ್ನ ನೂತನ ಅಧ್ಯಕ್ಷ ಯಾರು ಗೊತ್ತಾ?
PCB: ನಜಮ್ ಸೇಥಿ ಅವರು ಜೂನ್ 20ರ ಮಂಗಳವಾರ ಟ್ವೀಟ್ ಮಾಡಿದ್ದು, ಪಿಸಿಬಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ.
Updated on: Jun 21, 2023 | 8:48 AM

ಇಷ್ಟು ದಿನ ಏಷ್ಯಾಕಪ್ ಆಯೋಜನೆ ಹಾಗೂ ವಿಶ್ವಕಪ್ ಆಡುವ ವಿಚಾರದಲ್ಲಿ ವಿಶ್ವ ಕ್ರಿಕೆಟ್ನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ವಿಚಾರಕ್ಕೆ ಸಂಬಂಧಿಸಿದಂತೆ ಸದ್ದು ಮಾಡುತ್ತಿದೆ. ಬಿಸಿಸಿಐ ವಿರುದ್ಧ ಮುರಿದುಬಿದ್ದಿದ್ದ ಪಿಸಿಬಿಯ ಹಂಗಾಮಿ ಅಧ್ಯಕ್ಷ ನಜಮ್ ಸೇಥಿ ಅವರ ಅಧಿಕಾರಾವಧಿಯು ಮುಗಿದಿದ್ದು, ಈ ಸ್ಥಾನಕ್ಕೆ ಹೊಸಬರ ಆಯ್ಕೆಯಾಗುತ್ತಿದೆ.

ನಜಮ್ ಸೇಥಿ ಅವರು ಜೂನ್ 20ರ ಮಂಗಳವಾರ ಟ್ವೀಟ್ ಮಾಡಿದ್ದು, ಪಿಸಿಬಿ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದ ನಜಮ್ ಸೇಥಿ ಅವರ ಪಿಸಿಬಿ ಅಧ್ಯಕ್ಷ ಹುದ್ದೆ ಬುಧವಾರ ಕೊನೆಗೊಳ್ಳುತ್ತಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ನಜಮ್ ಸೇಥಿ ಬದಲಿಗೆ ಝಕಾ ಅಶ್ರಫ್ ಪಿಸಿಬಿಯ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಝಾಕಾ ಅಶ್ರಫ್ ಈ ಹಿಂದೆಯೂ ಪಿಸಿಬಿಯ ಅಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಮುಂಬೈ ದಾಳಿಯ ನಂತರ 2012ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಆ ಸರಣಿಯನ್ನು ಪೂರ್ಣಗೊಳಿಸುವಲ್ಲಿ ಆ ಸಮಯದಲ್ಲಿ ಪಿಸಿಬಿ ಅಧ್ಯಕ್ಷರಾಗಿದ್ದ ಝಾಕಾ ಅಶ್ರಫ್ ಅವರ ಕೊಡುಗೆ ದೊಡ್ಡದು.

ಅಂದಹಾಗೆ, ಅಶ್ರಫ್ ಅವರು ಪಿಸಿಬಿ ಅಧ್ಯಕ್ಷರಾಗಿ ದೀರ್ಘಕಾಲ ಉಳಿಯುವುದು ಕಷ್ಟ ಸಾಧ್ಯ. ಏಕೆಂದರೆ ಅಕ್ಟೋಬರ್‌ನಲ್ಲಿ ಮತ್ತೆ ಪಿಸಿಬಿ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.




