ಬಾಬರ್ ಪರ ಧ್ವನಿ ಎತ್ತಿದ್ದ ಫಖರ್​ ಝಮಾನ್​ಗೆ ನೋಟಿಸ್ ನೀಡಿದ ಪಾಕ್ ಕ್ರಿಕೆಟ್ ಮಂಡಳಿ

PCB: ಬಾಬರ್ ಆಝಂ ಪರ ಬ್ಯಾಟ್ ಬೀಸಿದ್ದ ಫಖರ್ ಝಮಾನ್ ಅವರ ಹೇಳಿಕೆಯಿಂದ ಕೋಪಗೊಂಡಿರುವ ಪಿಸಿಬಿ ಅಧಿಕಾರಿಗಳು, ಫಖರ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಫಖರ್ ಅವರ ಸೋಶಿಯಲ್ ಪೋಸ್ಟ್‌ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ.

|

Updated on: Oct 14, 2024 | 10:03 PM

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಮುಲ್ತಾನ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಅದರಂತೆ ಎರಡನೇ ಟೆಸ್ಟ್​ ಪಂದ್ಯಕ್ಕಾಗಿ ಹಲವು ಯುವ ಪ್ರತಿಭೆಗಳನ್ನು ಕಟ್ಟಿಕೊಂಡು ಪಾಕ್ ತಂಡ ಅಖಾಡಕ್ಕಿಳಿಯುತ್ತಿದೆ. ಈ ನಡುವೆ ಪಾಕ್ ಕ್ರಿಕೆಟ್ ಮಂಡಳಿ ತನ್ನದೇ ಆಟಗಾರನಿಗೆ ನೋಟಿಸ್ ಕಳುಹಿಸಿದೆ.

1 / 8
ವಾಸ್ತವವಾಗಿ ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಪಾಕ್ ಪಡೆ 556 ರನ್ ಬಾರಿಸಿದ ಹೊರತಾಗಿಯೂ ಸೋತಿತ್ತು. ಈ ಪಂದ್ಯದಲ್ಲಿ ಮಾಜಿ ನಾಯಕ ಬಾಬರ್ ಆಝಂ ಅವರ ಬ್ಯಾಟ್ ಸದ್ದು ಮಾಡಿರಲಿಲ್ಲ. ಹೀಗಾಗಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಬಾಬರ್​ ಅವರನ್ನು ಸರಣಿಯಿಂದ ಕೈಬಿಡಲಾಗಿತ್ತು.

2 / 8
ಪಾಕ್ ಮಂಡಳಿಯ ಈ ನಡೆಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇನ್ನು ಕೆಲವರು ಮಂಡಳಿಯನ್ನು ಟೀಕಿಸಿದ್ದರು. ಅವರಲ್ಲಿ ತಂಡದ ಆರಂಭಿಕ ಆಟಗಾರ ಫಖರ್​ ಝಮಾನ್ ಕೂಡ ಒಬ್ಬರು. ಬಾಬರ್​ ಅವರನ್ನು ತಂಡದಿಂದ ಹೊರಹಾಕಿದ ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಫಖರ್, ಬಾಬರ್ ಅಜಮ್ ಅವರನ್ನು ತಂಡದಿಂದ ಕೈಬಿಡುವ ಅಭಿಪ್ರಾಯವು ತುಂಬಾ ಕಳವಳಕಾರಿಯಾಗಿದೆ ಎಂದಿದ್ದರು.

3 / 8
ಇದಕ್ಕೆ ವಿರಾಟ್ ಕೊಹ್ಲಿಯ ಉದಾಹರಣೆ ನೀಡಿದ್ದ ಫಖರ್, ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾಗ ಅವರನ್ನು ಭಾರತ ಕೈಬಿಡಲಿಲ್ಲ. 2020 ಮತ್ತು 2023 ರ ನಡುವೆ ವಿರಾಟ್ ಕೊಹ್ಲಿ ಅವರ ಸರಾಸರಿ 19.33, 28.21 ಮತ್ತು 26.50 ಆಗಿತ್ತು. ಆದಾಗ್ಯೂ ಅವರಿಗೆ ಅವಕಾಶಗಳನ್ನು ನೀಡಲಾಗಿತ್ತು. ಆದರೆ ನಮ್ಮ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊರಗಿಡಲು ನಾವು ಯೋಚಿಸುತ್ತಿದ್ದರೆ, ಅದು ತಂಡಕ್ಕೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದಿದ್ದರು.

4 / 8
ಇದೀಗ ಬಾಬರ್ ಆಝಂ ಪರ ಬ್ಯಾಟ್ ಬೀಸಿದ್ದ ಫಖರ್ ಝಮಾನ್ ಅವರ ಹೇಳಿಕೆಯಿಂದ ಕೋಪಗೊಂಡಿರುವ ಪಿಸಿಬಿ ಅಧಿಕಾರಿಗಳು, ಫಖರ್ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಫಖರ್ ಅವರ ಸೋಶಿಯಲ್ ಪೋಸ್ಟ್‌ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ.

5 / 8
ಇದೀಗ ಪಾಕ್ ಮಂಡಳಿ ನೀಡಿರುವ ನೋಟಿಸ್​ಗೆ ಫಖರ್ ಝಮಾನ್ ಉತ್ತರ ನೀಡಲೇಬೇಕಿದೆ. ಅಥವಾ ತನ್ನ ಹೇಳಿಕೆಯನ್ನು ಹಿಂಪಡೆದು, ಮಂಡಳಿಯ ಮುಂದೆ ಕ್ಷಮೆಯಾಚಿಸಬೇಕೆದೆ. ಒಂದು ವೇಳೆ ಫಖರ್ ಈ ರೀತಿ ಮಾಡದಿದ್ದರೆ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆಗಳಿವೆ.

6 / 8
ಅಂದಹಾಗೆ, ಆಶ್ಚರ್ಯಕರ ಸಂಗತಿಯೆಂದರೆ, ಬಾಬರ್ ಅವರನ್ನು ತಂಡದಿಂದ ಕೈಬಿಟ್ಟ ನಂತರ, ಸ್ಪಷ್ಟೀಕರಣ ನೀಡಿದ್ದ ತಂಡದ ಕೋಚ್ ಅಜರ್ ಮಹಮೂದ್, ಬಾಬರ್ ಅವರನ್ನು ತಂಡದಿಂದ ಕೈಬಿಡಲಾಗಿಲ್ಲ. ಬದಲಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

7 / 8
ವಾಸ್ತವವಾಗಿ ಬಾಬರ್ ಆಝಂಗೆ ಕಳೆದ 18 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬಾಬರ್ ಅವರನ್ನು ತಂಡದಿಂದ ಕೈಬಿಟ್ಟು, ಯುವ ಪ್ರತಿಭಾವಂತರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು. ಅದರಂತೆ ಇದೀಗ ಅವರನ್ನು ತಂಡದಿಂದ ಕೈಬಿಡಲಾಗಿದೆ.

8 / 8
Follow us
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ

ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ

ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ

ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್

ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ

ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್

ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ

ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ

ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!

ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ