Babar Azam: ಮತ್ತೆ ಬಾಬರ್ ಆಝಂ ಹಿಂದೆ ಬಿದ್ದ ಪಾಕ್ ಮಂಡಳಿ

|

Updated on: Mar 27, 2024 | 6:47 PM

Babar Azam: 2023 ರ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವ ಕಳೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಆಝಂ ಮತ್ತೊಮ್ಮ ತಂಡದ ಚುಕ್ಕಾಣಿ ಹಿಡಿಯಲ್ಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

1 / 10
2023 ರ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವ ಕಳೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಆಝಂ ಮತ್ತೊಮ್ಮ ತಂಡದ ಚುಕ್ಕಾಣಿ ಹಿಡಿಯಲ್ಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

2 / 10
ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್​ನಲ್ಲಿ ಪಾಕ್ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆ ಬಳಿಕ ಪಾಕ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಅದರಂತೆ ಮಂಡಳಿ ಅಧ್ಯಕ್ಷರಿಂದ ಹಿಡಿದು, ಕೋಚಿಂಗ್ ಸಿಬ್ಬಂಧಿ ಹಾಗೂ ನಾಯಕತ್ವದಲ್ಲೂ ಬದಲಾವಣೆ ಆಗಿತ್ತು.

3 / 10
ಬಾಬರ್ ಆಝಂರನ್ನು ಪಾಕ್ ಕ್ರಿಕೆಟ್ ತಂಡದ ಮೂರು ಮಾದರಿಗಳ ನಾಯಕತ್ವದಿಂದ ಕೆಳಗಿಳಿದ ಬಳಿಕ ಟಿ20 ತಂಡದ ನಾಯಕತ್ವವನ್ನು ತಂಡದ ವೇಗಿ ಶಾಹೀನ್ ಅಫ್ರಿದಿಗೆ ಹಾಗೂ ಟೆಸ್ಟ್ ತಂಡದ ನಾಯಕತ್ವವನ್ನು ಶಾನ್ ಮಸೂದ್​ಗೆ ಹಸ್ತಾಂತರಿಸಲಾಗಿತ್ತು.

4 / 10
ಆದರೆ ತಂಡದ ನಾಯಕ ಬದಲಾದರೂ ಪ್ರದರ್ಶನ ಮಾತ್ರ ಕುಸಿಯುತ್ತಲೆ ಸಾಗಿದೆ. ಕಳೆದ ಏಷ್ಯಾಕಪ್​ನಿಂದ ಹಿಡಿದು ಇಲ್ಲಿಯವರೆಗೆ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ನೂತನ ನಾಯಕರೂ ಸಹ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿಲ್ಲ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಮತ್ತೆ ಹಳೆಯ ನಾಯಕನತ್ತ ದೃಷ್ಟಿ ನೆಟ್ಟಿದೆ.

5 / 10
ಬಾಬರ್ ಆಝಂ ಅವರನ್ನು ಮತ್ತೆ ನಾಯಕನನ್ನಾಗಿ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂಬ ಸುದ್ದಿ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದೆ. ಅದರಂತೆ ಪ್ರಸ್ತುತ ಟಿ20 ತಂಡದ ನಾಯಕ  ಶಾಹೀನ್ ಅಫ್ರಿದಿ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

6 / 10
ಆರಂಭದಲ್ಲಿ ಟಿ20 ತಂಡದ ನಾಯಕತ್ವಕ್ಕೆ ಮೊಹಮ್ಮದ್ ರಿಜ್ವಾನ್ ಹೆಸರು ಕೇಳಿಬಂದಿತ್ತು. ಆದರೆ ಈಗ ಮತ್ತೆ ಬಾಬರ್ ಆಝಂ ಹೆಸರು ಚರ್ಚೆಗೆ ಬಂದಿದೆ. ಪಿಸಿಬಿ ಅಧಿಕಾರಿಗಳು ಈ ನಿರ್ಧಾರವನ್ನು ಯಾವುದೇ ಸಮಯದಲ್ಲಿ ಪ್ರಕಟಿಸಬಹುದು ಎಂದು ಇತ್ತೀಚಿನ ವರದಿಗಳು ಹೇಳಿವೆ.

7 / 10
ವಾಸ್ತವವಾಗಿ ಬಾಬರ್ ಆಝಂ ನಾಯಕತ್ವ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಗ್ರಾಫ್ ಮತ್ತಷ್ಟು ವೇಗವಾಗಿ ಕುಸಿಯಿತು. ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಮೂರು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿತು. ಇದರ ನಂತರ, ತಂಡವು ನ್ಯೂಜಿಲೆಂಡ್ ವಿರುದ್ಧ 1-4 ರಿಂದ ಟಿ20 ಸರಣಿಯನ್ನು ಕಳೆದುಕೊಂಡಿತು.

8 / 10
ಇದೀಗ ಪಾಕ್ ಮಂಡಳಿ ನೂತನ ಅಧ್ಯಕ್ಷರಾಗಿರುವ ನಖ್ವಿ ಇತ್ತೀಚೆಗೆ ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದರು. ಮಾಹಿತಿಯ ಪ್ರಕಾರ ಆರಂಭದಲ್ಲಿ ಬಾಬರ್ ಮತ್ತೆ ನಾಯಕತ್ವವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು.

9 / 10
ಏಕೆಂದರೆ ಅವರನ್ನು ಈ ಹಿಂದೆ ನಾಯಕತ್ವದಿಂದ ಕೆಳಗಿಳಿಸುವ ವೇಳೆ ಮಂಡಳಿ ಅವರೊಂದಿಗೆ ನಡೆದುಕೊಂಡ ರೀತಿ ಬಾಬರ್​ಗೆ ನೋವು ತರಿಸಿತ್ತು. ಆದರೀಗ ಪಾಕ್ ಮಂಡಳಿಗೆ ಕೆಲವು ಷರತ್ತುಗಳನ್ನು ಹಾಕಿರುವ ಬಾಬರ್ ಮತ್ತೆ ನಾಯಕತ್ವವಹಿಸಿಕೊಳ್ಳಲು ಸಿದ್ದರಾಗಿದ್ದಾರೆ ಎಂದು ವರದಿಯಾಗಿದೆ.

10 / 10
ಏತನ್ಮಧ್ಯೆ, ಇಮಾದ್ ವಾಸಿಂ ಮತ್ತು ಮೊಹಮ್ಮದ್ ಅಮೀರ್ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಬಾಬರ್ ಬಂದರೆ ಇಬ್ಬರಿಗೂ ಸ್ಥಾನ ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಇದಕ್ಕೂ ಮೊದಲು ಹಲವಾರು ಸಂದರ್ಭಗಳಲ್ಲಿ ಇಮಾದ್ ಮತ್ತು ಅಮೀರ್ ಟಿವಿಯಲ್ಲಿ ಬಾಬರ್ ಅವರನ್ನು ಟೀಕಿಸಿದ್ದರು.