17 ಭರ್ಜರಿ ಸಿಕ್ಸ್, 9 ಫೋರ್​: ಟಿ20 ಲೀಗ್​ನಲ್ಲಿ ತೂಫಾನ್ ಶತಕ..!

| Updated By: ಝಾಹಿರ್ ಯೂಸುಫ್

Updated on: Feb 21, 2023 | 10:30 PM

Prabhsimran Singh: ಡಿವೈ ಪಾಟೀಲ್ ಕಪ್​ನ ಗ್ರೂಪ್ ಸಿ ಪಂದ್ಯದಲ್ಲಿ ಸಿಎಜಿ ಹಾಗೂ ಇನ್​ಕಮ್ ಟ್ಯಾಕ್ಸ್​ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

1 / 6
ಬರೋಬ್ಬರಿ 17 ಸಿಕ್ಸ್ ಹಾಗೂ 9 ಫೋರ್​ಗಳು...ಇದು ಡಿವೈ ಪಾಟೀಲ್ ಕಪ್​ನಲ್ಲಿ ಆಟಗಾರರೊಬ್ಬರ ಬ್ಯಾಟ್​ನಿಂದ ಮೂಡಿಬಂದ ಬೌಂಡರಿಗಳು. ಅಷ್ಟೇ ಅಲ್ಲದೆ ಈ ಬೌಂಡರಿಗಳ ನೆರವಿನಿಂದ ಭರ್ಜರಿ ಶತಕವನ್ನೂ ಕೂಡ ಸಿಡಿಸಿ ಅಬ್ಬರಿಸಿದರು.

2 / 6
ಹೌದು, ದೇಶೀಯ ಅಂಗಳದಲ್ಲಿ ಇಂತಹದೊಂದು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನ ಹೆಸರು ಪ್ರಭ್​ಸಿಮ್ರಾನ್ ಸಿಂಗ್. ಡಿವೈ ಪಾಟೀಲ್ ಕಪ್​ನ ಗ್ರೂಪ್ ಸಿ ಪಂದ್ಯದಲ್ಲಿ ಸಿಎಜಿ ಹಾಗೂ ಇನ್​ಕಮ್ ಟ್ಯಾಕ್ಸ್​ ತಂಡಗಳು ಮುಖಾಮುಖಿಯಾಗಿತ್ತು.

3 / 6
ಈ ಪಂದ್ಯದಲ್ಲಿ ಸಿಎಜಿ ಪರ ಆರಂಭಿಕನಾಗಿ ಆಡಿದ ಪ್ರಭ್​ಸಿಮ್ರಾನ್ ಸಿಂಗ್ ಅಕ್ಷರಶಃ ಅಬ್ಬರಿಸಿದರು. ಐಟಿ ತಂಡ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಸಿಮ್ರಾನ್ ಸಿಕ್ಸ್​ಗಳ ಸುರಿಮಳೆಗೈದರು. ಪರಿಣಾಮ ಯುವ ದಾಂಡಿಗನ ಬ್ಯಾಟ್​ನಿಂದ ಸ್ಪೋಟಕ ಶತಕ ಮೂಡಿಬಂತು.

4 / 6
ಭರ್ಜರಿ ಸೆಂಚುರಿ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಪ್ರಭ್​ಸಿಮ್ರಾನ್ 17 ಸಿಡಿಲಬ್ಬರದ ಸಿಕ್ಸ್ ಹಾಗೂ 9 ಫೋರ್​ಗಳನ್ನು ಬಾರಿಸಿದರು. ಈ ಮೂಲಕ ಕೇವಲ 55 ಎಸೆತಗಳಲ್ಲಿ 161 ರನ್​ ಚಚ್ಚಿದರು. ಪರಿಣಾಮ ಸಿಎಜಿ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್​ ಕಲೆಹಾಕಿತು.

5 / 6
268 ರನ್​ಗಳ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿದ ಐಟಿ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಜಿ ತಂಡವು 115 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ 161 ರನ್​ ಬಾರಿಸಿ ಮಿಂಚಿದ್ದ ಪ್ರಭ್​ಸಿಮ್ರಾನ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

6 / 6
ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿರುವ ಪ್ರಭ್​ಸಿಮ್ರಾನ್ ಸಿಂಗ್ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಇದೀಗ ಐಪಿಎಲ್​ ಆರಂಭಕ್ಕೂ ಮುನ್ನ ಅಬ್ಬರಿಸುವ ಮೂಲಕ ಈ ಬಾರಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.