- Kannada News Photo gallery Cricket photos Adidas to replace Killer Jeans as a new kit sponsor for Team India
ಟೀಂ ಇಂಡಿಯಾಕ್ಕೆ ಹೊಸ ಕಂಪನಿಯ ಪ್ರಾಯೋಜಕತ್ವ; 5 ವರ್ಷಕ್ಕೆ 350 ಕೋಟಿ ರೂ. ಒಪ್ಪಂದ..!
Team India: ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಅಡಿಡಾಸ್ ನಡುವೆ ಒಪ್ಪಂದ ನಡೆಯುತ್ತಿದ್ದು, ಅದರ ಅಡಿಯಲ್ಲಿ ಈ ಜರ್ಮನ್ ಕಂಪನಿ 5 ವರ್ಷಕ್ಕೆ ಬಿಸಿಸಿಐಗೆ 350 ಕೋಟಿ ರೂ. ನೀಡಲಿದೆ.
Updated on:Feb 22, 2023 | 2:33 PM

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಜೊತೆ ಜರ್ಮನ್ ಕ್ರೀಡಾ ಸಾಮಗ್ರಿಗಳ ಕಂಪನಿ ಅಡಿಡಾಸ್ ಶೀಘ್ರದಲ್ಲೇ ಒಪ್ಪಂದವೊಂದಕ್ಕೆ ಸಹಿ ಹಾಕಲು ಮುಂದಾಗಿದೆ.

ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಅಡಿಡಾಸ್ ನಡುವೆ ಒಪ್ಪಂದ ನಡೆಯುತ್ತಿದ್ದು, ಅದರ ಅಡಿಯಲ್ಲಿ ಈ ಜರ್ಮನ್ ಕಂಪನಿ 5 ವರ್ಷಕ್ಕೆ ಬಿಸಿಸಿಐಗೆ 350 ಕೋಟಿ ರೂ. ನೀಡಲಿದೆ. ಈ ಒಪ್ಪಂದದ ಪ್ರಕಾರ ಟೀಂ ಇಂಡಿಯಾ ಆಟಗಾರರು ತೊಡುವ ಜೆರ್ಸಿಯ ಮೇಲೆ ಅಡಿಡಾಸ್ ಕಂಪನಿಯ ಲೋಗೋ ಇರಲಿದೆ.

ಈ ಒಪ್ಪಂದದ ಪ್ರಕಾರ ಟೀಂ ಇಂಡಿಯಾ ಯಾವುದೇ ಪಂದ್ಯ ಆಡಲಿ ಅಡಿಡಾಸ್ ಕಂಪನಿ ತಂಡಕ್ಕೆ 65 ಲಕ್ಷ ರೂಪಾಯಿ ನೀಡಲಿದೆ. ಈ ಒಪ್ಪಂದವು ಐದು ವರ್ಷಗಳವರೆಗೆ ಇರಲಿದ್ದು, ಇದರಡಿಯಲ್ಲಿ ಬಿಸಿಸಿಐ ಪ್ರತಿ ವರ್ಷ 70 ಕೋಟಿ ರೂ. ಪಡೆಯಲಿದೆ.

ಇತ್ತೀಚೆಗೆ ಎಂಪಿಎಲ್ ಕಂಪನಿ, ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಮಧ್ಯದಲ್ಲಿ ಮುರಿದುಕೊಂಡಿತ್ತು. ಇದರ ನಂತರ ಕಿಲ್ಲರ್ ಜೀನ್ಸ್ ಕಂಪನಿ ಸ್ವಲ್ಪ ಸಮಯದವರೆಗೆ ಟೀಂ ಇಂಡಿಯಾದ ಜೆರ್ಸಿಯ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಆದರೆ ಈಗ ಅಡಿಡಾಸ್ ಈ ಒಪ್ಪಂದವನ್ನು ಪಡೆದುಕೊಳ್ಳಲಿದೆ.

2020 ರ ವರೆಗೆ, ನೈಕ್ ಕಂಪನಿಯು ಟೀಮ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭಾರತ ತಂಡ ಮತ್ತು ನೈಕ್ ನಡುವಿನ ಒಡನಾಟ 14 ವರ್ಷಗಳ ಕಾಲ ನಡೆಯಿತು. ಇದರಡಿಯಲ್ಲಿ ಪ್ರತಿ ಪಂದ್ಯಕ್ಕೆ ನೈಕ್ ಕಂಪನಿ 85 ಲಕ್ಷ ರೂಪಾಯಿಗಳನ್ನು ಬಿಸಿಸಿಐಗೆ ಪಾವತಿಸುತ್ತಿತ್ತು.
Published On - 1:32 pm, Wed, 22 February 23




