Punjab Kings: ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಆಟಗಾರನ ಎಂಟ್ರಿ..!
TV9 Web | Updated By: ಝಾಹಿರ್ ಯೂಸುಫ್
Updated on:
Sep 11, 2021 | 6:03 PM
IPL 2021: ವೈಯುಕ್ತಿಕ ಕಾರಣಗಳನ್ನು ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೈರ್ಸ್ಟೋ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ರಿಸ್ ವೋಕ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಡೇವಿಡ್ ಮಲಾನ್ ಐಪಿಎಲ್ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ.
1 / 6
ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.
2 / 6
ವೈಯುಕ್ತಿಕ ಕಾರಣಗಳನ್ನು ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೈರ್ಸ್ಟೋ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ರಿಸ್ ವೋಕ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಡೇವಿಡ್ ಮಲಾನ್ ಐಪಿಎಲ್ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ.
3 / 6
ಇತ್ತ ಡೇವಿಡ್ ಮಲಾನ್ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅತ್ತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬದಲಿ ಆಟಗಾರರನ್ನು ಪರಿಚಯಿಸಿದೆ. ಅದರಂತೆ ಮಲಾನ್ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಐಡೆನ್ ಮಾರ್ಕ್ರಮ್ ಅವಕಾಶ ಪಡೆದಿದ್ದಾರೆ.
4 / 6
ದಕ್ಷಿಣ ಆಫ್ರಿಕಾ ಪರ 13 ಟಿ20 ಪಂದ್ಯಗಳನ್ನಾಡಿರುವ ಐಡೆನ್ ಮಾರ್ಕ್ರಮ್ 150.00 ಸ್ಟ್ರೈಕ್ ರೇಟ್‌ನಲ್ಲಿ 405 ರನ್ ಗಳಿಸಿದ್ದಾರೆ. ಹಾಗೆಯೇ ಒಟ್ಟಾರೆಯಾಗಿ ಮಾರ್ಕ್ರಮ್ 57 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 1403 ರನ್ ಮತ್ತು 8 ವಿಕೆಟ್ ಪಡೆದಿದ್ದಾರೆ.
5 / 6
ಈ ಹಿಂದೆ ಐಪಿಎಲ್ 2021ರ ಹರಾಜಿನಲ್ಲಿ ಕೇವಲ 20 ಲಕ್ಷ ಮೂಲ ಬೆಲೆಯೊಂದಿಗೆ ಹೆಸರು ನೊಂದಾಯಿಸಿಕೊಂಡಿದ್ದರು ಫ್ರಾಂಚೈಸಿಗಳು ಐಡೆನ್ ಮಾರ್ಕ್ರಮ್ ಖರೀದಿಗೆ ಆಸಕ್ತಿ ತೋರಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
6 / 6
ಐಪಿಎಲ್ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.