ಮತ್ತೆ ಬಂದ ಕ್ವಿಂಟನ್ ಡಿಕಾಕ್: ಪಾಕ್ ವಿರುದ್ಧ ಕಣಕ್ಕೆ
Quinton De Kock: ಕ್ವಿಂಟನ್ ಡಿಕಾಕ್ ಸೌತ್ ಆಫ್ರಿಕಾ ಪರ ಈವರೆಗೆ 155 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 21 ಶತಕ ಹಾಗೂ 30 ಅರ್ಧಶತಕಗಳೊಂದಿಗೆ ಒಟ್ಟು 6770 ರನ್ ಕಲೆಹಾಕಿದ್ದಾರೆ. ಇದೀಗ 2 ವರ್ಷಗಳ ಬಳಿಕ ಮತ್ತೆ ಏಕದಿನ ಕ್ರಿಕೆಟ್ನಲ್ಲಿ ಕಣಕ್ಕಿಳಿಯಲು 32 ವರ್ಷದ ಎಡಗೈ ದಾಂಡಿಗ ಸಜ್ಜಾಗಿದ್ದಾರೆ.
Updated on: Sep 23, 2025 | 10:31 AM

ಸೌತ್ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ (Quinton De Kock) ಏಕದಿನ ಕ್ರಿಕೆಟ್ ನಿವೃತ್ತಿಯನ್ನು ಹಿಂತೆಗೆದುಕೊಂಡಿದ್ದಾರೆ. 2023 ರ ಏಕದಿನ ವಿಶ್ವಕಪ್ನೊಂದಿಗೆ ಒಡಿಐ ಕ್ರಿಕೆಟ್ಗೆ ವಿದಾಯ ಹೇಳಿದ್ದ ಡಿಕಾಕ್ ಇದೀಗ 2 ವರ್ಷಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

ಇತ್ತ ಏಕದಿನ ಕ್ರಿಕೆಟ್ ನಿವೃತ್ತಿಯಿಂದ ಹಿಂದೆ ಸರಿಯುತ್ತಿದ್ದಂತೆ ಕ್ವಿಂಟನ್ ಡಿಕಾಕ್ಗೆ ಸೌತ್ ಆಫ್ರಿಕಾ ಒಡಿಐ ತಂಡದಲ್ಲಿ ಸ್ಥಾನ ಲಭಿಸಿದೆ. ಅಕ್ಟೋಬರ್ 12 ರಿಂದ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಸರಣಿಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕ್ವಿಂಟನ್ ಡಿಕಾಕ್ ಕಾಣಿಸಿಕೊಂಡಿದ್ದಾರೆ.

ಇದರೊಂದಿಗೆ ಏಕದಿನ ಕ್ರಿಕೆಟ್ಗೆ ಕ್ವಿಂಟನ್ ಡಿಕಾಕ್ ಕಂಬ್ಯಾಕ್ ಕೂಡ ಖಚಿತವಾಗಿದೆ. ಸೌತ್ ಆಫ್ರಿಕಾ ಹಾಗೂ ಪಾಕಿಸ್ತಾನ್ ನಡುವೆ 2 ಟೆಸ್ಟ್, 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯು ಅಕ್ಟೋಬರ್ 12 ರಿಂದ ಪ್ರಾರಂಭವಾಗಲಿದ್ದು, ಮೊದಲಿಗೆ ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಇದಾದ ಬಳಿಕ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಸೌತ್ ಆಫ್ರಿಕಾ ತಂಡ ಈ ಕೆಳಗಿನಂತಿದೆ...

ಸೌತ್ ಆಫ್ರಿಕಾ ಟೆಸ್ಟ್ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಝೋರ್ಝಿ, ಜುಬೇರ್ ಹಮ್ಝ, ಸೈಮನ್ ಹಾರ್ಮರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ (ಎರಡನೇ ಟೆಸ್ಟ್ಗೆ ಮಾತ್ರ), ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಬ್ರೆನ್, ಟ್ರಿಸ್ಟಾನ್ ಸ್ಟಬ್ಸ್, ಪ್ರೆನೆಲನ್ ಸುಬ್ರಾಯನ್, ಕೈಲ್ ವೆರೆನ್ನೆ.

ಸೌತ್ ಆಫ್ರಿಕಾ ಟಿ20 ತಂಡ: ಡೇವಿಡ್ ಮಿಲ್ಲರ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೀರಾ, ರೀಝ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಆಂಡಿಲೇಡ್ ಸಿಮ್ಲೇನಿಯಸ್, ಲಿಝಾಡ್ ವಿಲಿಯಮ್ಸ್.

ಸೌತ್ ಆಫ್ರಿಕಾ ಏಕದಿನ ತಂಡ: ಮ್ಯಾಥ್ಯೂ ಬ್ರೀಟ್ಝ್ಕೆ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಝಿ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ಡೊನೊವನ್ ಫೆರೆರಾ, ಜಾರ್ನ್ ಫೋರ್ಚುಯಿನ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಸಿನೆಥೆಂಬಾ ಕೆಶಿಲೆ.




