ವಿದೇಶಿ ಟಿ20 ಲೀಗ್​ಗೆ ಹೆಸರು ನೋಂದಾಯಿಸಲು ಮುಂದಾದ ಆರ್ ಅಶ್ವಿನ್

Updated on: Aug 31, 2025 | 9:49 PM

Ravichandran Ashwin: ಐಪಿಎಲ್​ನಿಂದ ನಿವೃತ್ತಿ ಹೊಂದಿದ ರವಿಚಂದ್ರನ್ ಅಶ್ವಿನ್, ತಮ್ಮ ದೇಹದ ಸ್ಥಿತಿಯನ್ನು ಉಲ್ಲೇಖಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಅವರು ಯುಎಇಯ ILT20 ಲೀಗ್ ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದು, ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈ ಲೀಗ್‌ನ ಹರಾಜಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್ 10 ಆಗಿದೆ.

1 / 6
ಕಳೆದ ವರ್ಷದ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆ ಬಳಿಕ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಈ ಸೀಸನ್ ಆಡಿ ಮುಗಿಸಿದ್ದ ಅಶ್ವಿನ್ ಇದೀಗ ಈ ಮಿಲಿಯನ್ ಡಾಲರ್ ಟೂರ್ನಿಗೂ ವಿದಾಯ ಹೇಳಿದ್ದಾರೆ.

ಕಳೆದ ವರ್ಷದ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆ ಬಳಿಕ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಈ ಸೀಸನ್ ಆಡಿ ಮುಗಿಸಿದ್ದ ಅಶ್ವಿನ್ ಇದೀಗ ಈ ಮಿಲಿಯನ್ ಡಾಲರ್ ಟೂರ್ನಿಗೂ ವಿದಾಯ ಹೇಳಿದ್ದಾರೆ.

2 / 6

ಐಪಿಎಲ್​ನಿಂದ ನಿವೃತ್ತಿಯಾಗಲು ನಿಜವಾದ ಕಾರಣ ತಿಳಿಸಿದ್ದ ಅಶ್ವಿನ್ ‘ಮೂರು ತಿಂಗಳ ಕಾಲ ನಡೆಯುವ ಐಪಿಎಲ್​ನಲ್ಲಿ ಇನ್ನು ಮುಂದೆ ಆಡಲು ಸಾಧ್ಯವಾಗುವುದಿಲ್ಲ. ನನ್ನ ದೇಹವು ನನಗೆ ಬೆಂಬಲಿಸುತ್ತಿಲ್ಲ. ಐಪಿಎಲ್​ನಲ್ಲಿ ಆಡಲು ನೀವು ಸಂಪೂರ್ಣವಾಗಿ ಫಿಟ್ ಆಗಿರಬೇಕು. ಆದರೆ ನನಗೆ ಅಷ್ಟು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.

3 / 6

ಆದರೆ ನಿವೃತ್ತಿ ಘೋಷಿಸುವಾಗಲೇ ವಿಶ್ವದಾದ್ಯಂತ ನಡೆಯುತ್ತಿರುವ ಟಿ20 ಲೀಗ್​ಗಳಲ್ಲಿ ಆಡುವುದನ್ನು ಮುಂದುವರೆಸುವುದಾಗಿ ಹೇಳಿದ್ದ ಅಶ್ವಿನ್, ತಮ್ಮ ಹೇಳಿಕೆಯಂತೆಯೇ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲ್ಲಿರುವ ಐಎಲ್‌ಟಿ 20 ಲೀಗ್​ನತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ.

4 / 6

ಕ್ರಿಕ್‌ಬಜ್ ವರದಿಯ ಪ್ರಕಾರ, ಅಶ್ವಿನ್ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆಯಲಿರುವ ಈ ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ವರದಿಯ ಪ್ರಕಾರ, ಅಶ್ವಿನ್ ಅವರು ಐಎಲ್‌ಟಿ 20 ಆಯೋಜಕರೊಂದಿಗೆ ಮಾತನಾಡುತ್ತಿರುವುದಾಗಿ ಮತ್ತು ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಮುಂದಾಗಿದ್ದಾರೆ.

5 / 6

ಈ ಲೀಗ್‌ನ ಹರಾಜಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್ 10 ಆಗಿದೆ. ಆ ಬಳಿಕ ಈ ಲೀಗ್​ನ ಹರಾಜು ಸೆಪ್ಟೆಂಬರ್ 30 ರಂದು ನಡೆಯಲಿದೆ. ಈ ಲೀಗ್ ಅನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಯೋಜಿಸುತ್ತಿದ್ದು, 2023 ರಿಂದ ನಡೆಸಿಕೊಂಡು ಬರಲಾಗುತ್ತಿದೆ.

6 / 6

ಈ ಹರಾಜಿನಲ್ಲಿ ಅಶ್ವಿನ್ ಅವರನ್ನು ಖರೀದಿಸಿದರೆ, ಅವರು ILT20 ನಲ್ಲಿ ಆಡಿದ ಮೂರನೇ ಭಾರತೀಯ ಆಟಗಾರರಾಗುತ್ತಾರೆ. ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರರು 2023 ರಲ್ಲಿ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್. ಈ ಇಬ್ಬರೂ ಆಟಗಾರರು ದುಬೈ ಕ್ಯಾಪಿಟಲ್ಸ್ ಪರ ಆಡಿದ್ದರು.

Published On - 9:47 pm, Sun, 31 August 25

Loading...
Unable to load recommendations.
Follow Us