Sanju Samson: ಕ್ರಿಕೆಟ್ ಬಿಟ್ಟು ಗಾಲ್ಫ್ನತ್ತ ಒಲವು ತೋರಿದ್ರಾ ಸಂಜು ಸ್ಯಾಮ್ಸನ್? ಫೋಟೋ ನೋಡಿ
TV9 Web | Updated By: ಪೃಥ್ವಿಶಂಕರ
Updated on:
Jan 29, 2022 | 9:13 PM
Sanju Samson: ಸೋಶಿಯಲ್ ಮೀಡಿಯಾದಲ್ಲಿ ಸಂಜು ಹಂಚಿಕೊಂಡಿರುವ ಇತ್ತೀಚಿನ ಫೋಟೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ತಮ್ಮ ಗಾಲ್ಫ್ ಪ್ರತಿಭೆಯನ್ನು ತೋರಿಸುತ್ತಿದ್ದಾರೆ .
1 / 4
ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಸಂಜು ಸ್ಯಾಮ್ಸನ್ ಕ್ರೀಡೆಯ ಹೊರತಾಗಿ ಆಗಾಗ್ಗೆ ಮುನ್ನಲೆಗೆ ಬರುತ್ತಾರೆ. ಕೆಲವೊಮ್ಮೆ ಅವರ ನಡವಳಿಕೆಯಿಂದಾಗಿ ಮತ್ತು ಕೆಲವೊಮ್ಮೆ ಅವರ ನೃತ್ಯದಿಂದಾಗಿ. ಆದರೆ ಈ ಬಾರಿ ಅವರು ಮತ್ತೊಂದು ಆಟದಿಂದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸ್ಯಾಮ್ಸನ್ ಕ್ರಿಕೆಟ್‌ನ ಮಾಸ್ಟರ್ ಮಾತ್ರವಲ್ಲ, ಬದಲಿಗೆ ಅವರು ಗಾಲ್ಫ್ ಆಡುವುದು ಹೇಗೆ ಎಂದು ಚೆನ್ನಾಗಿ ತಿಳಿದಿದ್ದಾರೆ.
2 / 4
ಸೋಶಿಯಲ್ ಮೀಡಿಯಾದಲ್ಲಿ ಸಂಜು ಹಂಚಿಕೊಂಡಿರುವ ಇತ್ತೀಚಿನ ಫೋಟೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ತಮ್ಮ ಗಾಲ್ಫ್ ಪ್ರತಿಭೆಯನ್ನು ತೋರಿಸುತ್ತಿದ್ದಾರೆ .
3 / 4
ಸಂಜು ಸ್ಯಾಮ್ಸನ್ ಈ ಚಿತ್ರದಲ್ಲಿ ಗಾಲ್ಫ್ ಸ್ಟಿಕ್ ಅನ್ನು ಅದ್ಭುತವಾಗಿ ಬೀಸುತ್ತಿರುವುದನ್ನು ಕಾಣಬಹುದು. ಹೊಡೆತದ ಬಂಗಿಯಲ್ಲಿ ಅವರು ವೃತ್ತಿಪರತೆಯನ್ನು ನಾವು ಕಾಣ ಬಹುದಾಗಿದೆ.
4 / 4
ಸಂಜು ಸ್ಯಾಮ್ಸನ್ ಈಗ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಮರಳುವ ಅವಕಾಶವನ್ನು ಹೊಂದಿದ್ದಾರೆ. ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಉಳಿಸಿಕೊಂಡಿರುವ ಮೂವರು ಆಟಗಾರರಲ್ಲಿ ಸ್ಯಾಮ್ಸನ್ ಒಬ್ಬರು.
Published On - 8:50 pm, Sat, 29 January 22