Ranji Trophy 2022: 14 ಬೌಂಡರಿ, 11 ಸಿಕ್ಸರ್; ರಣಜಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ..!

| Updated By: ಪೃಥ್ವಿಶಂಕರ

Updated on: Dec 28, 2022 | 5:12 PM

Ranji Trophy 2022: ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 186 ಎಸೆತಗಳನ್ನು ಎದುರಿಸಿದ ಪಾಂಡೆ 14 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ 208 ರನ್ ಬಾರಿಸಿದ್ದಾರೆ.

1 / 6
ಕರ್ನಾಟಕ ತಂಡದ ಸ್ಟಾರ್ ಬ್ಯಾಟ್ಸ್​ಮನ್ ಮನೀಶ್ ಪಾಂಡೆ, ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

2 / 6
ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 186 ಎಸೆತಗಳನ್ನು ಎದುರಿಸಿದ ಪಾಂಡೆ 14 ಬೌಂಡರಿ ಹಾಗೂ 11 ಸಿಕ್ಸರ್  ಸಹಿತ 208 ರನ್ ಬಾರಿಸಿದ್ದಾರೆ.

3 / 6
ಪಾಂಡೆ ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 603 ರನ್ ಗಳಿಸಿದೆ. ಪಾಂಡೆ ಹೊರತಾಗಿ ಆರಂಭಿಕ ಆಟಗಾರ ಆರ್ ಸಮರ್ಥ್ ಕೂಡ 140 ರನ್‌ಗಳ ಭರ್ಜರಿ ಇನ್ನಿಂಗ್ಸ್‌ ಆಡಿದರು.

4 / 6
ಇದು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮನೀಶ್ ಪಾಂಡೆ ಅವರ 22 ನೇ ಶತಕವಾಗಿದ್ದು ಈ ಸೀಸನ್​ನ ಮೊದಲ ಶತಕವೂ ಆಗಿದೆ.

5 / 6
 ದೇಶೀ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮನೀಶ್ ಅವರನ್ನು ಕೆಲವು ದಿನಗಳ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ದೆಹಲಿ ಕ್ಯಾಪಿಟಲ್ಸ್ 2.4 ಕೋಟಿಗೆ ಖರೀದಿಸಿತು. ಆದರೆ ಕಳೆದ ಸೀಸನ್​ಗೆ ಹೋಲಿಸಿದರೆ, ಮನೀಶ್​ ಪಾಂಡೆ ಮೌಲ್ಯ 2.2 ಕೋಟಿಯಷ್ಟು ಕುಸಿದಿದೆ.

6 / 6
ವಾಸ್ತವವಾಗಿ ಕಳೆದ ಸೀಸನ್​ನಲ್ಲಿ ಪಾಂಡೆ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್‌ ತಂಡ ಬರೋಬ್ಬರಿ 4.6 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇಡೀ ಸೀಸನ್​ನಲ್ಲಿ ಪಾಂಡೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರಿಂದ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು.

Published On - 5:10 pm, Wed, 28 December 22