Updated on: Feb 17, 2022 | 6:33 PM
ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಐಪಿಎಲ್ 2022 ಹರಾಜಿನಲ್ಲಿ ಕೇವಲ 20 ಲಕ್ಷ ರೂಪಾಯಿಗಳನ್ನು ಪಡೆದಿರಬಹುದು ಆದರೆ ಅವರ ಪ್ರತಿಭೆಯನ್ನು ಈ ಮೊತ್ತದಿಂದ ತೂಗಲಾಗುವುದಿಲ್ಲ. ಸರ್ಫರಾಜ್ ಖಾನ್ ಮತ್ತೆ ತಮ್ಮ ಪ್ರತಿಭೆಯ ಅಟ್ಟಹಾಸ ಮೆರೆದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಗುರುವಾರ ಸೌರಾಷ್ಟ್ರ ವಿರುದ್ಧ ಅದ್ಭುತ ಶತಕ ಗಳಿಸಿದರು. ಸರ್ಫರಾಜ್ ಖಾನ್ ಬಹಳ ನಿಧಾನವಾಗಿ ಆರಂಭಿಸಿ 60 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದರು ಆದರೆ ನಂತರ ಅವರು ಅದ್ಭುತವಾಗಿ ಬೌಲರ್‌ಗಳ ಮೇಲೆ ದಾಳಿ ಮಾಡಿದರು.
ಈ ಬಲಗೈ ಬ್ಯಾಟ್ಸ್‌ಮನ್ ತನ್ನ ಪ್ರಥಮ ದರ್ಜೆ ವೃತ್ತಿಜೀವನದ ಐದನೇ ಶತಕವನ್ನು ಗಳಿಸಿದರು. ಅಚ್ಚರಿಯ ಸಂಗತಿ ಎಂದರೆ ಸರ್ಫರಾಜ್ ಕಳೆದ 5 ರಣಜಿ ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಇದರಲ್ಲಿ ಅವರು ಅಜೇಯ ತ್ರಿಶತಕ ಮತ್ತು ಅಜೇಯ ದ್ವಿಶತಕ ಗಳಿಸಿದ್ದಾರೆ.
ಸುದ್ದಿ ಬರೆಯುವ ಹೊತ್ತಿಗೆ ಅಜಿಂಕ್ಯ ರಹಾನೆ ಕೂಡ ಶತಕ ಬಾರಿಸಿದ್ದರು. ಟೀಂ ಇಂಡಿಯಾದಲ್ಲಿ ರಹಾನೆ ಅವರ ಫಾರ್ಮ್ ತುಂಬಾ ಕೆಟ್ಟದಾಗಿತ್ತು. ಹೀಗಾಗಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಆದರೂ ಇದೀಗ ಈ ಬ್ಯಾಟ್ಸ್‌ಮನ್ ಫಾರ್ಮ್‌ಗೆ ಮರಳುವ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಪಂದ್ಯದಲ್ಲಿ ಮುಂಬೈನ ಆರಂಭ ಕಳಪೆಯಾಗಿತ್ತು. ನಾಯಕ ಪೃಥ್ವಿ ಶಾ ಕೇವಲ 1 ರನ್ ಗಳಿಸಿ ಔಟಾದರು. ಡ್ರೂ ಗೋಮೆಲ್ 8 ಮತ್ತು ಎಸ್‌ಎಂ ಯಾದವ್ 19 ರನ್ ಗಳಿಸಿ ಔಟಾದರು. ಇದಾದ ಬಳಿಕ ಅಜಿಂಕ್ಯ ರಹಾನೆ ಜತೆಗಿನ 200ಕ್ಕೂ ಹೆಚ್ಚು ರನ್ ಗಳ ಜೊತೆಯಾಟದೊಂದಿಗೆ ಸರ್ಫರಾಜ್ ಮುಂಬೈ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದರು.
ಸರ್ಫರಾಜ್ ಖಾನ್ ಕಳೆದ ರಣಜಿ ಋತುವಿನಲ್ಲಿ ಕೇವಲ 6 ಪಂದ್ಯಗಳಲ್ಲಿ 928 ರನ್ ಗಳಿಸಿದ್ದರು. ಅವರ ಬ್ಯಾಟಿಂಗ್ ಸರಾಸರಿ 154 ಕ್ಕಿಂತ ಹೆಚ್ಚಿತ್ತು ಮತ್ತು ಅವರು 112 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳನ್ನು ಹೊಡೆಯುವಲ್ಲಿ ಯಶಸ್ವಿಯಾದರು. ಸರ್ಫರಾಜ್ ಖಾನ್ ಕೂಡ ಅಬ್ಬರದಿಂದಲೇ ಈ ಸೀಸನ್ ಆರಂಭಿಸಿದ್ದಾರೆ.