Ranji Trophy: ಬರೋಬ್ಬರಿ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಪಡೆದ ಶ್ರೀಶಾಂತ್..!
TV9 Web | Updated By: ಪೃಥ್ವಿಶಂಕರ
Updated on:
Feb 17, 2022 | 4:34 PM
Ranji Trophy: ಶ್ರೀಶಾಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ, ಆದರೆ ಈ ಬೇಟೆ ಅವರ ಅಭಿಮಾನಿಗಳಿಗೆ ಮತ್ತು ಸ್ವತಃ ಈ ವೇಗದ ಬೌಲರ್‌ಗೆ ತುಂಬಾ ವಿಶೇಷವಾಗಿದೆ. ವಾಸ್ತವವಾಗಿ ಶ್ರೀಶಾಂತ್ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದಿದ್ದಾರೆ.
1 / 5
ಎಸ್ ಶ್ರೀಶಾಂತ್ ಅವರ ವೇಗ ಮತ್ತು ಆಕ್ರಮಣಕಾರಿ ವರ್ತನೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಯಾರ ಸ್ವಿಂಗ್ ಬೌಲಿಂಗ್ ಹೆಚ್ಚಾಗಿ ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ಶರಣಾಗುವಂತೆ ಮಾಡಿತ್ತೋ, ಅದೇ ಹುಮ್ಮಸ್ಸು ಮತ್ತೊಮ್ಮೆ ಕಂಡುಬಂದಿದೆ. ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡುತ್ತಿರುವ ಎಸ್ ಶ್ರೀಶಾಂತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೇಘಾಲಯ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಎಸ್ ಶ್ರೀಶಾಂತ್ 2 ವಿಕೆಟ್ ಪಡೆದು ಮಿಂಚಿದ್ದಾರೆ.
2 / 5
ಶ್ರೀಶಾಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್ ಪಡೆದಿದ್ದಾರೆ, ಆದರೆ ಈ ಬೇಟೆ ಅವರ ಅಭಿಮಾನಿಗಳಿಗೆ ಮತ್ತು ಸ್ವತಃ ಈ ವೇಗದ ಬೌಲರ್‌ಗೆ ತುಂಬಾ ವಿಶೇಷವಾಗಿದೆ. ವಾಸ್ತವವಾಗಿ ಶ್ರೀಶಾಂತ್ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದಿದ್ದಾರೆ.
3 / 5
ಶ್ರೀಶಾಂತ್ 2013 ರಲ್ಲಿ ಇರಾನಿ ಕಪ್‌ನಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ರೆಸ್ಟ್ ಆಫ್ ಇಂಡಿಯಾ ಪರ ಆಡಿದ ಶ್ರೀಶಾಂತ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ವಾಸಿಂ ಜಾಫರ್ ವಿಕೆಟ್ ಪಡೆದಿದ್ದರು.
4 / 5
ಶ್ರೀಶಾಂತ್
5 / 5
ಶ್ರೀಶಾಂತ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾಗಿದ್ದರು. ಶ್ರೀಶಾಂತ್ 7 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಶಿಕ್ಷೆ ಮುಗಿದ ನಂತರ ಅವರು 2020 ರಲ್ಲಿ ಕ್ರಿಕೆಟ್ಗೆ ಮರಳಿದರು. ಶ್ರೀಶಾಂತ್ ಕೇರಳದ ಪರವಾಗಿ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಆಡಿದ್ದಾರೆ.