Ashwin: ಟೀಮ್ ಇಂಡಿಯಾಗೆ ಗುಡ್​ ನ್ಯೂಸ್: ತಂಡಕ್ಕೆ ಮರಳಿದ ಅಶ್ವಿನ್

| Updated By: ಝಾಹಿರ್ ಯೂಸುಫ್

Updated on: Feb 18, 2024 | 10:57 AM

Ravichandran Ashwin: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟಕ್ಕೆ ರವಿಚಂದ್ರನ್ ಅಶ್ವಿನ್ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ 10+1 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಅಂದರೆ ಅಶ್ವಿನ್ ಬದಲಿಗೆ ಕಣಕ್ಕಿಳಿದ ದೇವದತ್ ಪಡಿಕ್ಕಲ್​ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವ ಅವಕಾಶ ಇರಲಿಲ್ಲಿ.

1 / 6
ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಂದು ಅಲಭ್ಯರಾಗಿದ್ದ ರವಿಚಂದ್ರನ್ ಅಶ್ವಿನ್ (Ravichandran Ashwin) ಇದೀಗ ತಂಡಕ್ಕೆ ಮರಳಿದ್ದಾರೆ. ಬಲ್ಲಮೂಲಗಳ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಅಶ್ವಿನ್ ಚೆನ್ನೈನಿಂದ ರಾಜ್​ಕೋಟ್​ಗೆ ತೆರಳಿದ್ದಾರೆ. ಅಲ್ಲದೆ ಮಧ್ಯಾಹ್ನದ ವೇಳೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

2 / 6
ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ 2ನೇ ದಿನದಾಟದ ಮುಕ್ತಾಯದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಚೆನ್ನೈಗೆ ತೆರಳಿದ್ದರು. ತಾಯಿಯ ಅನಾರೋಗ್ಯದ ನಿಮಿತ್ತ ಅವರು ತಂಡದಿಂದ ಹೊರಗುಳಿದಿದ್ದರು.

3 / 6
ಹೀಗಾಗಿ ಮೂರನೇ ದಿನದಾಟದಲ್ಲಿ ಅಶ್ವಿನ್ ಅವರ ಬದಲಿಗೆ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದರು. ಇದೀಗ ನಾಲ್ಕನೇ ದಿನದಾಟದ ವೇಳೆ ರವಿ ಅಶ್ವಿನ್ ತಂಡವನ್ನು ಕೂಡಿಕೊಳ್ಳಲಿದ್ದು, ಹೀಗಾಗಿ ಭಾರತ ತಂಡದ 2ನೇ ಇನಿಂಗ್ಸ್ ಬೌಲಿಂಗ್​ ವೇಳೆ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

4 / 6
ಅಶ್ವಿನ್ ಅವರ ವಾಪಾಸಾತಿಯು ಭಾರತ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಲಿದೆ. ಏಕೆಂದರೆ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವು ನಾಲ್ವರು ಬೌಲರ್​ಗಳನ್ನು ಮಾತ್ರ ಬಳಸಿಕೊಂಡಿತ್ತು. ಇದೀಗ ಅವರ ರಿಎಂಟ್ರಿಯಿಂದಾಗಿ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಐವರು ಬೌಲರ್​ಗಳನ್ನು ಬಳಸಿಕೊಳ್ಳಬಹುದಾಗಿದೆ.

5 / 6
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅಶ್ವಿನ್ ಝಾಕ್ ಕ್ರಾಲಿ ಅವರ ವಿಕೆಟ್ ಪಡೆದಿದ್ದರು. ಈ ವಿಕೆಟ್​ನೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

6 / 6
ಅಷ್ಟೇ ಅಲ್ಲದೆ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್​ಗಳನ್ನು ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆ ಪಟ್ಟಿಯಲ್ಲಿ 87 ಪಂದ್ಯಗಳಿಂದ ಈ ಸಾಧನೆ ಮಾಡಿದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದರೆ, 98 ಟೆಸ್ಟ್ ಪಂದ್ಯಗಳ ಮೂಲಕ ಐನೂರು ವಿಕೆಟ್ ಪೂರೈಸಿರುವ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ.