AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashwin: ಆತನಿಗೆ ನನ್ನ ಮೇಲೆ ಕ್ರಶ್ ಇತ್ತೆಂದು ಇಡೀ ಶಾಲೆಗೆ ತಿಳಿದಿತ್ತು: ಅಶ್ವಿನ್ ಜೊತೆಗಿನ ಲವ್ ​ಸ್ಟೋರಿ ಬಿಚ್ಚಿಟ್ಟ ಪ್ರೀತಿ

Prithi Ashwin: ಅಶ್ವಿನ್ ಕ್ರಿಕೆಟ್ ಜಗತ್ತಿನ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದೀಗ ಅವರ ಪತ್ನಿ ಪ್ರೀತಿ, ಅಶ್ವಿನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Vinay Bhat
|

Updated on:May 05, 2023 | 1:16 PM

Share
ರವಿಚಂದ್ರನ್ ಅಶ್ವಿನ್ ಅವರು ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುವ ಆರ್. ಅಶ್ವಿನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವರ್ಷಕ್ಕೆ ಕಾಲಿಟ್ಟಿರುವ ಸ್ಪಿನ್ ಮಾಂತ್ರಿಕನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

1 / 8
ಅಶ್ವಿನ್ ಕ್ರಿಕೆಟ್ ಜಗತ್ತಿನ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಪತ್ನಿ ಪ್ರೀತಿ, ಅಶ್ವಿನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಕೆಲ ವಿಚಾರಗಳನ್ನು ಇತ್ತೀಚೆಗಷ್ಟೆ ಹಂಚಿಕೊಂಡಿದ್ದರು. ಅವರು ಏನು ಹೇಳಿದ್ದಾರೆ ನೋಡಿ.

2 / 8
ನಾವು ಚಿಕ್ಕಂದಿನಿಂದಲೂ ಜೊತೆಗೇ ಇದ್ದೆವು, ಒಂದೇ ಸ್ಕೂಲ್​ನಲ್ಲಿ ಓದಿದೆವು ಎಂಬ ಗುಟ್ಟನ್ನು ಪ್ರೀತಿ ಅಶ್ವಿನ್ ಅವರು ಜಿಯೋ ಸಿನಿಮಾದ ಹ್ಯಾಂಗೌಟ್ ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ.

3 / 8
ಸಣ್ಣವರಿದ್ದಾಗ ನಾವು ಒಂದೇ ಶಾಲೆಗೆ ಹೋಗುತ್ತಿದ್ದೆವು. ಮದುವೆಗೂ ಮುನ್ನ ನಮ್ಮಿಬ್ಬರ ನಡುವೆ ಪರಿಚಯವಿತ್ತು. ಶಾಲಾ ದಿನಗಳಿಂದ ಹಿಡಿದು ವಯಸ್ಕರಾಗುವವರೆಗೂ ನಾವು ಜತೆಯಾಗಿಯೇ ಬೆಳೆದೆವು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ.

4 / 8
ಅಶ್ವಿನ್ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕ್ರಶ್‌ ಇತ್ತು. ಈ ವಿಚಾರ ಇಡೀ ಶಾಲೆಗೆ ತಿಳಿದಿತ್ತು. ಆಮೇಲೆ ಅವರು ಕ್ರಿಕೆಟ್‌ ಕಡೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಬೇರೆಡೆ ತೆರಳಿದರು. ಹೀಗಿದ್ದರೂ ನಾವಿಬ್ಬರು ಹುಟ್ಟುಹಬ್ಬ, ಫ್ಯಾಮಿಲಿ ಕಾರ್ಯಕ್ರಮದಲ್ಲಿ ಆಗಾಗ ಭೇಟಿ ಆಗುತ್ತಿದ್ದೆವು - ಪ್ರೀತಿ.

5 / 8
ತುಂಬಾ ಸಮಯದ ಬಳಿಕ ಅಶ್ವಿನ್ ನನ್ನನ್ನು ಒಂದು ದಿನ ಭೇಟಿ ಆದರು. ಆಗ ನಾನು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಹೀಗೆ ಅಲ್ಲಿಂದ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿ ಆಯಿತು ಎಂದು ಹೇಳಿದ್ದಾರೆ.

6 / 8
ಇನ್ನು ಅಶ್ವಿನ್ ಪ್ರಪೋಸ್ ಮಾಡಿದ ಬಗ್ಗೆಯೂ ಪ್ರೀತಿ ಅವರು ತಿಳಿಸಿದ್ದು, ನನ್ನನ್ನು ಅಶ್ವಿನ್ ಒಂದು ದಿನ ನೇರವಾಗಿ ಕ್ರಿಕೆಟ್‌ ಗ್ರೌಂಡ್‌ಗೆ ಕರೆದುಕೊಂಡು ಹೋದರು. ನಾನು ನಿನ್ನನ್ನು ಈ ಜೀವ ಇರುವವರೆಗೆ ಇಷ್ಟಪಡಲು ಬಯಸುತ್ತೇನೆ. ನಮ್ಮಿಬ್ಬರ ಪರಿಚಯವಾಗಿ 10 ವರ್ಷಗಳಾದರೂ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿ ಪ್ರಪೋಸ್ ಮಾಡಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ.

7 / 8
ಅಶ್ವಿನ್ ಅವರ ಪ್ರಪೋಸಲ್​ಗೆ ಯೆಸ್ ಎಂದ ಪ್ರೀತಿ ನವೆಂಬರ್ 13, 2011ರಂದು ಮದುವೆ ಆದರು. ಇದೀಗ ಇವರಿಬ್ಬರಿಗೆ ಅಖಿರಾ ಹಾಗೂ ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಶ್ವಿನ್ ಸದ್ಯ ಭಾರತ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್​ನಲ್ಲಿ ರಾಜಸ್ಥಾನ್ ತಂಡದ ಪರ ಆಡುತ್ತಾರೆ.

8 / 8

Published On - 1:10 pm, Fri, 5 May 23