Ravindra Jadeja: ಭಾರತದ ನೆಲದಲ್ಲಿ ಶತಕದ ಸಾಧನೆ ಮಾಡಿದ ರವೀಂದ್ರ ಜಡೇಜಾ..!

Updated on: Oct 16, 2023 | 8:32 AM

ICC World Cup 2023: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ಜಡೇಜಾ, ಈ ಎರಡು ವಿಕೆಟ್‌ಗಳೊಂದಿಗೆ ಭಾರತದ ನೆಲದಲ್ಲಿ 100 ಏಕದಿನ ವಿಕೆಟ್‌ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಏಕದಿನದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಎಡಗೈ ಬೌಲರ್ ಎನಿಸಿಕೊಂಡರು.

1 / 7
ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 191 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ 80 ರನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಏಳು ವಿಕೆಟ್​ಗಳ ಜಯ ಸಾಧಿಸಿತು.

ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 191 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ 80 ರನ್ ಸಿಡಿಸಿದ ಅರ್ಧಶತಕದ ನೆರವಿನಿಂದ ಏಳು ವಿಕೆಟ್​ಗಳ ಜಯ ಸಾಧಿಸಿತು.

2 / 7

ಪಾಕಿಸ್ತಾನವನ್ನು ಅಲ್ಪ ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಟೀಂ ಇಂಡಿಯಾದ ಎಲ್ಲಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅದರಲ್ಲಿ ಪ್ರಮುಖ ಎರಡು ವಿಕೆಟ್ ಪಡೆದ ರವೀಂದ್ರ ಜಡೇಜಾ ದೊಡ್ಡ ದಾಖಲೆಯನ್ನು ನಿರ್ಮಿಸಿದರು.

3 / 7

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಪಡೆದ ಜಡೇಜಾ, ಈ ಎರಡು ವಿಕೆಟ್‌ಗಳೊಂದಿಗೆ ಭಾರತದ ನೆಲದಲ್ಲಿ 100 ಏಕದಿನ ವಿಕೆಟ್‌ ಪಡೆದ ಸಾಧನೆ ಮಾಡಿದರು.

4 / 7

ಇದರೊಂದಿಗೆ ಏಕದಿನದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಎಡಗೈ ಬೌಲರ್ ಎನಿಸಿಕೊಂಡ ಜಡೇಜಾ, ಏಕದಿನ ಕ್ರಿಕೆಟ್‌ನಲ್ಲಿ 94 ವಿಕೆಟ್ ಪಡೆದಿದ್ದ ಜಹೀರ್ ಖಾನ್ ಅವರನ್ನು ಹಿಂದಿಕ್ಕಿದರು.

5 / 7

ಇದಲ್ಲದೆ, ಜಡೇಜಾ ಭಾರತದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ.

6 / 7

ಜಡೇಜಾಗಿಂತ ಮೊದಲು ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಅಜಿತ್ ಅಗರ್ಕರ್, ಜಾವಗಲ್ ಶ್ರೀನಾಥ್ ಮತ್ತು ಕಪಿಲ್ ದೇವ್ ತವರು ನೆಲದಲ್ಲಿ ಭಾರತದ ಪರ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

7 / 7

ಕುಂಬ್ಳೆ 126, ಹರ್ಭಜನ್ ಸಿಂಗ್ 110, ಅಜಿತ್ ಅಗರ್ಕರ್ 109, ಜಾವಗಲ್ ಶ್ರೀನಾಥ್ 103 ಮತ್ತು ಕಪಿಲ್ ದೇವ್ 100 ವಿಕೆಟ್ ಪಡೆದಿದ್ದಾರೆ.

Loading...
Unable to load recommendations.
Follow Us