RCB: 2 ವಿಶೇಷ ದಾಖಲೆಗಳ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ
TV9 Web | Updated By: ಝಾಹಿರ್ ಯೂಸುಫ್
Updated on:
Sep 20, 2021 | 4:27 PM
RCB captain Virat Kohli: ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ, ದೆಹಲಿ (ದೇಶೀಯ ಕ್ರಿಕೆಟ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಒಟ್ಟು 311 ಟಿ20 ಪಂದ್ಯಗಳನ್ನು ಆಡಿದ್ದಾರೆ.
1 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಕೋಲ್ಕತಾ ನೈಟ್ ರೈಡರ್ಸ್ (ಆರ್‌ಸಿಬಿ ವಿರುದ್ಧ ಕೆಕೆಆರ್) ವಿರುದ್ಧದ ಪಂದ್ಯದ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಮೂಲಕ ಕೊಹ್ಲಿ ಆರ್‌ಸಿಬಿ ಪರ 200 ಪಂದ್ಯವನ್ನಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
2 / 5
ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಪಾಲಾಗಲಿದೆ. ಈ ಮೈಲಿಗಲ್ಲನ್ನು ಸಾಧಿಸಲು ಕೊಹ್ಲಿಗೆ ಬೇಕಿರುವುದು ಕೇವಲ 71 ರನ್ ಮಾತ್ರ. ಹೀಗಾಗಿ ಕೆಕೆಆರ್ ವಿರುದ್ದ 71 ರನ್ ಬಾರಿಸಿದರೆ ಅಂತಾರಾಷ್ಟ್ರೀಯ, ದೇಶೀಯ ಮತ್ತು ಟಿ20 ಲೀಗ್ನಲ್ಲಿ ಒಟ್ಟು 10 ಸಾವಿರ ರನ್ ಪೂರೈಸಿದ ರನ್ ಸರದಾರರ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಲಿದ್ದಾರೆ.
3 / 5
ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ, ದೆಹಲಿ (ದೇಶೀಯ ಕ್ರಿಕೆಟ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಒಟ್ಟು 311 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 9929 ರನ್ ಗಳಿಸಿದ್ದಾರೆ. ಇದೇ ವೇಳೆ ಕೊಹ್ಲಿ ಬ್ಯಾಟ್ನಿಂದ 5 ಶತಕ ಮತ್ತು 72 ಅರ್ಧ ಶತಕಗಳು ಮೂಡಿ ಬಂದಿವೆ. ಹಾಗೆಯೇ 879 ಬೌಂಡರಿ ಮತ್ತು 315 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
4 / 5
ಇದೀಗ ಐಪಿಎಲ್ನ ದ್ವಿತಿಯಾರ್ಧದಲ್ಲಿ ಕೆಕೆಆರ್ ವಿರುದ್ದ ಕಣಕ್ಕಿಳಿಯಲಿರುವ ಕೊಹ್ಲಿ 71 ರನ್ ಕಲೆಹಾಕಿದ್ರೆ ಟಿ20 ಕ್ರಿಕೆಟ್ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಐದನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಲಿದ್ದಾರೆ.
5 / 5
ಈಗಾಗಲೇ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ (11174 ರನ್), ಪಾಕಿಸ್ತಾನದ ಶೋಯೆಬ್ ಮಲಿಕ್ (10808) ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (10017) ಟಿ20 ಯಲ್ಲಿ 10,000 ರನ್ ಕಲೆಹಾಕಿದ್ದಾರೆ. ಅದರಲ್ಲೂ 446 ಟಿ20 ಪಂದ್ಯಗಳಿಂದ 14,261 ರನ್ ಕಲೆಹಾಕುವ ಮೂಲಕ ಕ್ರಿಸ್ ಗೇಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದೀಗ ಈ ಎಲೈಟ್ ಗ್ರೂಪ್ಗೆ ಪ್ರವೇಶಿಸುವ ಹೊಸ್ತಿಲಲ್ಲಿ ಕೊಹ್ಲಿ ಇದ್ದು, ಕೆಕೆಆರ್ ವಿರುದ್ದದ ಪಂದ್ಯದ ಮೂಲಕ ಈ ಸಾಧನೆ ಮೆರೆಯಲಿದ್ದಾರಾ ಕಾದು ನೋಡಬೇಕಿದೆ.
Published On - 4:26 pm, Mon, 20 September 21