IPL 2023: RCB ಸೋಲುತ್ತಿದ್ದಂತೆ ಕಣ್ಣೀರಿಟ್ಟ ಹುಡುಗಿಯ ಫೋಟೋ ಫುಲ್ ವೈರಲ್
TV9 Web | Updated By: ಝಾಹಿರ್ ಯೂಸುಫ್
Updated on:
Apr 11, 2023 | 11:30 PM
IPL 2023 Kannada: ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಆಡಲಿದೆ. ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.
1 / 8
IPL 2023: ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿತ್ತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್ನಿಂದ ಜಯಗಳಿಸಿತ್ತು.
2 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (59) ಅವರ ಅಬ್ಬರದೊಂದಿಗೆ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 212 ರನ್ ಕಲೆಹಾಕಿತು. ಇತ್ತ ಆರ್ಸಿಬಿ ಅಭಿಮಾನಿಗಳು ಈ ಪಂದ್ಯ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರು.
3 / 8
213 ರನ್ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 23 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ 1 ರನ್ ಓಡಿ ಲಕ್ನೋ ಸೂಪರ್ ಜೈಂಟ್ಸ್ ಜಯ ಸಾಧಿಸಿತು.
4 / 8
ಇತ್ತ ಅಂತಿಮ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಆರ್ಸಿಬಿ ಸೋಲುತ್ತಿದ್ದಂತೆ ಅಭಿಮಾನಿಗಳು ಕಣ್ಣೀರಿಟ್ಟದ್ದರು. ಅದರಲ್ಲೂ ಆರ್ಸಿಬಿ ಮಹಿಳಾ ಅಭಿಮಾನಿಯೊಬ್ಬರು ಅಳುತ್ತಿರುವುದನ್ನು ಕ್ಯಾಮೆರಾಮ್ಯಾನ್ ಸೆರೆ ಹಿಡಿದಿದ್ದರು.
5 / 8
ಆರ್ಸಿಬಿಯ ಸೋಲನ್ನು ಅರಗಿಸಿಕೊಳ್ಳಲಾಗದೇ ಕಣ್ಣೀರಿಡುತ್ತಾ ಭಾವುಕಳಾದ ಅಭಿಮಾನಿಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಯಾರೀಕೆ? ಎಲ್ಲಿಯವರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
6 / 8
ಈ ಪ್ರಶ್ನೆಗಳಿಗೆ ಸದ್ಯ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಇದಾಗ್ಯೂ ಈಕೆ ಆಟೋ ಡ್ರೈವರ್ರೊಬ್ಬರ ಮಗಳು. ಆರ್ಸಿಬಿ ತಂಡದ ಪಂದ್ಯ ವೀಕ್ಷಿಸಲೆಂದು 657 ಕಿಮೀ ದೂರದಿಂದ ಬೆಂಗಳೂರಿಗೆ ಆಗಮಿಸಿದ್ದಳು. ತನ್ನ ನೆಚ್ಚಿನ ತಂಡದ ಸೋಲಿನ ನೋವಿನಲ್ಲಿ ಅಳುತ್ತಿದ್ದ ಈಕೆಯನ್ನೂ ಕೂಡ ನೀವು ಟ್ರೋಲ್ ಮಾಡುತ್ತಿದ್ದೀರಿ. ನೀವೆಲ್ಲಾ ಯಾಕೆ ಇಷ್ಟೆಲ್ಲಾ ಕೀಳು ಮಟ್ಟಕ್ಕಿಳಿದ್ದೀರಿ ಎಂದು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಇದರ ಹೊರತಾಗಿ ಆರ್ಸಿಬಿ ಫ್ಯಾನ್ ಗರ್ಲ್ ಬಗ್ಗೆ ಯಾವುದೇ ಮಾಹಿತಿಯಿಲ್ಲ.
7 / 8
ಈ ಪ್ರಶ್ನೆಗಳಿಗೆ ಸದ್ಯ ಸ್ಪಷ್ಟ ಉತ್ತರವಂತು ಸಿಕ್ಕಿಲ್ಲ. ಇದಾಗ್ಯೂ ಈಕೆ ಆಟೋ ಡ್ರೈವರ್ರೊಬ್ಬರ ಮಗಳು. ಆರ್ಸಿಬಿ ತಂಡದ ಪಂದ್ಯ ವೀಕ್ಷಿಸಲೆಂದು 657 ಕಿಮೀ ದೂರದಿಂದ ಬೆಂಗಳೂರಿಗೆ ಆಗಮಿಸಿದ್ದಳು. ತನ್ನ ನೆಚ್ಚಿನ ತಂಡದ ಸೋಲಿನ ನೋವಿನಲ್ಲಿ ಅಳುತ್ತಿದ್ದ ಈಕೆಯನ್ನೂ ಕೂಡ ನೀವು ಟ್ರೋಲ್ ಮಾಡುತ್ತಿದ್ದೀರಿ. ನೀವೆಲ್ಲಾ ಯಾಕೆ ಇಷ್ಟೆಲ್ಲಾ ಕೀಳು ಮಟ್ಟಕ್ಕಿಳಿದ್ದೀರಿ ಎಂದು ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಿಜನಾ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.
8 / 8
ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 15 ರಂದು ಆಡಲಿದೆ. ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.