ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್: ಇರ್ಫಾನ್ ಪಠಾಣ್
TV9 Web | Updated By: Digi Tech Desk
Updated on:
Feb 14, 2024 | 3:05 PM
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗವನ್ನು ಸಂಪಾದಿಸಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಕಪ್ ಗೆಲ್ಲದಿದ್ದರೂ ಇಷ್ಟೊಂದು ಫ್ಯಾನ್ಸ್ ಬೇಸ್ ಉಳಿಸಿಕೊಳ್ಳುವುದು ಸುಲಭವಲ್ಲ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
1 / 7
16 ವರ್ಷಗಳು...ಒಂದೇ ಒಂದು ಕಪ್ ಗೆದ್ದಿಲ್ಲ...ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ...ಕೊನೆಗೆ ನೋವಿನ ವಿದಾಯ...ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸ, ಕಪ್ ಕೈ ತಪ್ಪಿದ್ದರೆ ಮುಂದಿನ ವರ್ಷ ನಮ್ದೆ ಎನ್ನುವ ಭರವಸೆ.
2 / 7
ಹೀಗಾಗಿಯೇ ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೊಂಡಾಡಿರುವುದು. ಅಂತಹದೊಂದು ವಿಶೇಷ ಅಭಿಮಾನಿಗಳ ಬಳಗವನ್ನೇ ಆರ್ಸಿಬಿ ಸಂಪಾದಿಸಿಕೊಂಡಿದೆ.
3 / 7
ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ಆರ್ಸಿಬಿ ತಂಡಕ್ಕೆ ಇರುವಂತಹ ಅಭಿಮಾನಿಗಳ ಬಳಗವನ್ನು ಈವರೆಗೆ ನಾನೆಲ್ಲೂ ನೋಡಿಲ್ಲ. ನನ್ನ ಪ್ರಕಾರ, ಇಂತಹ ಫ್ಯಾನ್ ಬೇಸ್ ವಿಶ್ವದ ಯಾವುದೇ ತಂಡಕ್ಕಿಲ್ಲ. ಅಂತಹದೊಂದು ಅಭಿಮಾನಿಗಳ ಬಳಗವನ್ನು ಆರ್ಸಿಬಿ ತಂಡ ಹೊಂದಿದೆ.
4 / 7
ಆರ್ಸಿಬಿ ತಂಡವು ಇದುವರೆಗೆ ಕಪ್ ಗೆದ್ದಿಲ್ಲ ಎಂಬುದು ನಿಜ. ಆದರೂ ಅಭಿಮಾನಿಗಳ ಬಳಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳೆಂದರೆ ಅದು ಆರ್ಸಿಬಿ ಫ್ಯಾನ್ಸ್ ಮಾತ್ರ. ಒಂದು ವೇಳೆ ಆರ್ಸಿಬಿ ಕಪ್ ಗೆದ್ದರೆ ಅದುವೇ ಐಪಿಎಲ್ ಇತಿಹಾಸದ ಅತೀ ದೊಡ್ಡ ಮೂಮೆಂಟ್ ಆಗಿರಲಿದೆ ಎಂದು ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ.
5 / 7
2016 ರಲ್ಲಿ ಆರ್ಸಿಬಿ ಕಪ್ ಗೆಲ್ಲುವ ಸನಿಹಕ್ಕೆ ಬಂದಿತ್ತು. ನಾನು ಆ ವರ್ಷ ಕಪ್ ಆರ್ಸಿಬಿ ತಂಡದ್ದೇ ಎಂದುಕೊಂಡಿದ್ದೆ. ಆದರೆ ಅಂತಿಮ ಹಂತದಲ್ಲಿ ಎಡವಿತು. ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ ಅದುವೇ ಹೊಸ ಇತಿಹಾಸವಾಗಲಿದೆ. ಅದುವೇ ಐಪಿಎಲ್ನ ಅತೀ ದೊಡ್ಡ ಕ್ಷಣವಾಗಲಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
6 / 7
ಈ ಬಾರಿಯ ಐಪಿಎಲ್ಗಾಗಿ ಆರ್ಸಿಬಿ ತಂಡವು 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ತಂಡದಲ್ಲಿ ಹೊಸದಾಗಿ ಅಲ್ಝಾರಿ ಜೋಸೆಫ್, ಲಾಕಿ ಫರ್ಗುಸನ್, ಟಾಮ್ ಕರನ್ನಂತಹ ಸ್ಟಾರ್ ಆಟಗಾರರ ಎಂಟ್ರಿಯಾಗಿದೆ. ಹೀಗಾಗಿ ಈ ಬಾರಿ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್ಸಿಬಿ ಅಭಿಮಾನಿಗಳು.
7 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.
Published On - 8:17 am, Tue, 13 February 24