- Kannada News Photo gallery Cricket photos RCB Playing XI Kedar Jadhav may feature in the playing XI for today's match against Delhi Capitals
RCB Playing XI vs DC: ಅನುಜ್ ರಾವತ್ ಹೊರಕ್ಕೆ: ಆರ್‌ಸಿಬಿ ಪರ ಇಂದು ಈ ಹೊಸ ಬ್ಯಾಟರ್ ಕಣಕ್ಕೆ
DC vs RCB, IPL 2023: ಇಂದು ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಈ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ.
Updated on: May 06, 2023 | 8:47 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಮೊದಲ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗಲಿದೆ. ನಂತರ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಗೆಲುವು, ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್ರೇಟ್ ಹೊಂದಿದೆ. ಹೀಗಾಗಿ ಇಂದಿನ ಪಂದ್ಯ ಬೆಂಗಳೂರಿಗೆ ಮಹತ್ವದ್ದಾಗಿದೆ.

ಆರ್‌ಸಿಬಿ ಪರ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ದಿನೇಶ್ ಕಾರ್ತಿಕ್ ಈ ಸೀಸನ್ ಮಂಕಾಗಿದ್ದಾರೆ.

ಅನುಜ್ ರಾವತ್, ಸುಯೇಶ್ ಪ್ರಭುದೇಸಾಯಿ, ಮಹಿಪಾಲ್ ಲುಮ್ರೂರ್, ಶಹ್ಬಾಜ್ ಅಹ್ಮದ್ ನೆರವಾಗುತ್ತಿಲ್ಲ. ಹೀಗಾಗಿ ಇಂದು ಹೊಸ ಬ್ಯಾಟರ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಡೇವಿಡ್ ವಿಲ್ಲಿ ಬದಲಿಗೆ ಆರ್‌ಸಿಬಿ ತಂಡ ಸೇರಿರುವ ಕೇದಾರ್ ಜಾಧವ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ದಟ್ಟವಾಗಿದೆ. ಅನುಜ್ ರಾವತ್ ಬದಲಿಗೆ ಆಯ್ಕೆ ಆಗಬಹುದು. 38 ವರ್ಷದ ಕೇದಾರ್ ಜಾಧವ್ ಅಭ್ಯಾಸದ ವೇಳೆ ಫೋರ್, ಸಿಕ್ಸರ್ ಸಿಡಿಸಿ ತಾನಿನ್ನೂ ಫಿಟ್ ಆಗಿದ್ದೇನೆ, ನನ್ನಲ್ಲೂ ಕ್ರಿಕೆಟ್ ಆಡುವ ಶಕ್ತಿಯಿದೆ ಎಂದು ತೋರಿಸಿದ್ದಾರೆ.

ಕೇದರ್ ಜಾಧವ್ ಆರ್‌ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಸದ್ಯ ಬೆಂಗಳೂರು ತಂಡದಲ್ಲಿ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಬಿಟ್ಟರೆ ಇತರೆ ಯಾವ ಬ್ಯಾಟರ್ ಕೂಡ ಅಬ್ಬರಿಸುತ್ತಿಲ್ಲ. ಹೀಗಾಗಿ ಜಾಧವ್ 4 ಅಥವಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ಸಂತಸದ ಸಂಗತಿ. ಜೋಶ್ ಹೇಜ್ಲೆವುಡ್ ಹಾಗೂ ಮೊಹಮ್ಮದ್ ಸಿರಾಜ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಹಸರಂಗ, ಕರ್ಣ್ ಶರ್ಮಾ ಇರುವ ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ.

ಆರ್‌ಸಿಬಿ-ಡೆಲ್ಲಿ ಮುಖಾಮುಖಿ ನೋಡಿದರೆ ಐಪಿಎಲ್ ವೇದಿಕೆಯಲ್ಲಿ ಉಭಯ ತಂಡಗಳು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 19 ಬಾರಿ ಗೆದ್ದಿದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.



















