PBKS vs RCB, IPL 2023: ಆರ್​ಸಿಬಿ-ಪಂಜಾಬ್ ಕಿಂಗ್ಸ್ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ

|

Updated on: Apr 21, 2023 | 9:38 AM

Virat Kohli: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯತ್ವದ ಜವಾಬ್ದಾರಿ ಹೊತ್ತಿದ್ದರು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬರೋಬ್ಬರಿ 137 ರನ್​ಗಳ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

1 / 7
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಪ್ರದರ್ಶನ ತೋರಿ ಗೆಲುವಿನ ಲಯಕ್ಕೆ ಮರಳಿತು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೀಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್​ನಲ್ಲಿ ಬೆಂಗಳೂರು 24 ರನ್​ಗಳ ಜಯ ಸಾಧಿಸಿತು.

2 / 7
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯತ್ವದ ಜವಾಬ್ದಾರಿ ಹೊತ್ತಿದ್ದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿಗೆ ಓಪನರ್​ಗಳಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬರೋಬ್ಬರಿ 137 ರನ್​ಗಳ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

3 / 7
ಕೊಹ್ಲಿ 47 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್​ ಮೂಲಕ 59 ರನ್​ ಗಳಿಸಿದರೆ, ಡುಪ್ಲೆಸಿಸ್​ ಕೇವಲ 56 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಮೂಲಕ 84 ರನ್​ ಗಳಿಸಿ ರಿಟಾರ್ಡ್ ಆದರು. ಆರ್​ಸಿಬಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 174 ರನ್ ಗಳಿಸಿತು.

4 / 7
ಸವಾಲಿನ ಟಾರ್ಗೆಟ್ ಬೆನ್ನತ್ತಿದ ಪಂಜಾಬ್​ ಆರಂಭಿಕ ಆಘಾತ ಎದುರಿಸಿತು. ಅಥರ್ವ 4 ರನ್​ ಗಳಿಸಿ ಔಟಾದರೆ, ಮ್ಯಾಥ್ಯೂ ಶಾರ್ಟ್ 8, ಲಿಯಾಮ್ ಲಿವಿಂಗ್​ಸ್ಟೋನ್ 2, ಹರ್ಪ್ರೀತ್ ಸಿಂಗ್ 13, ನಾಯಕ ಸ್ಯಾಮ್ ಕುರ್ರನ್ 10 ರನ್ ಹೀಗೆ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು.

5 / 7
ಪ್ರಭ್​ ಸಿಮ್ರಾನ್​ ಸಿಂಗ್​ 30 ಎಸೆತದಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ ಮೂಲಕ 46 ರನ್​​ ಗಳಿಸಿದರೆ ಜಿತೇಶ್ ಶರ್ಮ 27 ಎಸೆತದಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಮೂಲಕ 41 ರನ್ ಪೇರಿಸಿದರು. ಆದರೆ, 18.2 ಓವರ್​ಗಳಲ್ಲಿ 150 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಂಡಿತು.

6 / 7
ಬೆಂಗಳೂರು ಪರ ಮೊಹಮ್ಮದ್​​ ಸಿರಾಜ್​ 21 ರನ್​​ ನೀಡಿ 4 ವಿಕೆಟ್​​ ಪಡೆದರೆ, ವನಿಂದು ಹಸರಂಗ 39 ರನ್​​ ನೀಡಿ 2 ವಿಕೆಟ್​ ಪಡೆದರು. ವಿಜಯ್​ಕುಮಾರ್​ ವೈಶಾಖ್​ ಮತ್ತು ಹರ್ಷಲ್​ ಪಟೇಲ್​​ ತಲಾ 1 ವಿಕೆಟ್​​ ಕಿತ್ತು ಮಿಂಚಿದರು.

7 / 7
ಪಂದ್ಯ ಮುಗಿದ ಬಳಿಕ ಪಂಜಾಬ್ ಕಿಂಗ್ಸ್ ಮಾಲಕಿ ಜೊತೆ ಮಾತುಕತೆ ನಡೆಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್.

Published On - 9:38 am, Fri, 21 April 23