ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Jan 21, 2025 | 8:30 AM
Rinku Singh: ರಿಂಕು ಸಿಂಗ್ ಸದ್ಯ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದಾರೆ. ಜನವರಿ 22 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳಲ್ಲಿ ರಿಂಕು ಸಿಂಗ್ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರೆ. ಇನ್ನು ಈ ಸರಣಿಯ ಬಳಿಕ ರಿಂಕು ಐಪಿಎಲ್ 2025 ಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಿದ್ದಾರೆ.
1 / 5
ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್ ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಒಂದೆಡೆ ಮದುವೆ ವಿಷಯದಿಂದ ಸದ್ದು ಮಾಡಿದರೆ, ಮತ್ತೊಂದೆಡೆ ಹೊಸ ಮನೆ ಖರೀದಿಸಿ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಇದೀಗ ತಂದೆಗೆ ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
2 / 5
ರಿಂಕು ಸಿಂಗ್, ತಂದೆ ಖಂಚಂದ್ ಸಿಂಗ್ ಅವರಿಗೆ ಬರೋಬ್ಬರಿ 3.19 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಖಂಚಂದ್ ಸಿಂಗ್ ಅವರು ನಿಂಜಾ ಬೈಕ್ ಅನ್ನು ಓಡಿಸುತ್ತಿರುವ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ ರಿಂಕು ಸಿಂಗ್ ಅವರ ತಂದೆ ಈ ಹಿಂದೆ ಸಿಲಿಂಡರ್ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಕೆಲಸದೊಂದಿಗೆ ಮಗನನ್ನು ಕ್ರಿಕೆಟಿಗನಾಗಿ ಬೆಳೆಸಿದ್ದರು. ಇದೀಗ ಸ್ಟಾರ್ ಆಟಗಾರನಾಗಿ ಬೆಳೆದಿರುವ ರಿಂಕು ಸಿಂಗ್ ತಂದೆಯ ಆಸೆ ಪೂರೈಸುವತ್ತ ಗಮನಹರಿಸಿದ್ದಾರೆ. ಅದರ ಭಾಗವಾಗಿ ಇದೀಗ ತಂದೆಗೆ ಕವಾಸಕಿ ನಿಂಜಾ ಬೈಕ್ ಕೊಡಿಸಿದ್ದಾರೆ.
4 / 5
ಇದಕ್ಕೂ ಮುನ್ನ ರಿಂಕು ಸಿಂಗ್ ಅಲಿಗಢದಲ್ಲಿ 3.5 ಕೋಟಿ ರೂ. ಬೆಲೆಯ ಮನೆ ಖರೀದಿ ಮಾಡಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಪ್ರಿಯಾ ಸರೋಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಒಟ್ಟಿನಲ್ಲಿ ಕಳೆದ ಕೆಲ ದಿನಗಳಿಂದ ರಿಂಕು ಸಿಂಗ್ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿದ್ದಾರೆ. (ಎಐ ಫೋಟೋ)
5 / 5
ಅಂದಹಾಗೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಿಂಕು ಸಿಂಗ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬರೋಬ್ಬರಿ 13 ಕೋಟಿ ರೂ. ರಿಟೈನ್ ಮಾಡಿಕೊಂಡಿದೆ. ಅದರಂತೆ ಕೆಕೆಆರ್ ಆಟಗಾರ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಈ ಕೋಟಿ ಮೊತ್ತವನ್ನು ವಿವಿಧೆಡೆ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಇದೀಗ ತಮ್ಮ ಬಹುಕಾಲದ ಕನಸಾಗಿರುವ ಮನೆಯನ್ನು ಖರೀದಿಸಿದ್ದಾರೆ. ಇದರ ಜೊತೆಗೆ ತಂದೆಗೂ ಬೈಕ್ ಗಿಫ್ಟ್ ಮಾಡಿದ್ದಾರೆ.