ಭರ್ಜರಿ ಸೆಂಚುರಿ: ಟೆಸ್ಟ್​​ನಲ್ಲೂ ರಿಂಕು ಸಿಂಗ್ ಕಮಾಲ್

Updated on: Oct 18, 2025 | 2:32 PM

Rinku Singh Century: ಭಾರತ ಟಿ20 ತಂಡ ಫಿನಿಶರ್ ರಿಂಕು ಸಿಂಗ್ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಉತ್ತರ ಪ್ರದೇಶ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಾನ್ಪುರದಲ್ಲಿ ನಡೆಯುತ್ತಿರುವ ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ರಿಂಕು ಸಿಂಗ್ ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ.

1 / 5
ರಣಜಿ ಟೂರ್ನಿಯ ಎಲೈಟ್ ಎ ಗ್ರೂಪ್ ಪಂದ್ಯದಲ್ಲಿ ರಿಂಕು ಸಿಂಗ್ (Rinku Singh) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಉತ್ತರ ಪ್ರದೇಶ್ ಹಾಗೂ ಆಂಧ್ರ ಪ್ರದೇಶ್ ತಂಡಗಳು ಮುಖಾಮುಖಿಯಾಗಿವೆ.

2 / 5
ಈ ಮ್ಯಾಚ್​ನಲ್ಲಿ ಆಂಧ್ರ ಪ್ರದೇಶ್ ತಂಡದ ನಾಯಕ ರಿಕಿ ಭುಯಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಆಂಧ್ರ ಪರ ಶ್ರೀಕರ್ ಭರತ್ (142) ಹಾಗೂ ಶೇಖ್ ರಶೀದ್ (136) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಆಂಧ್ರ ಪ್ರದೇಶ್ ತಂಡವು ಮೊದಲ ಇನಿಂಗ್ಸ್​ನಲ್ಲಿ 470 ರನ್​ಗಳಿಸಿ ಆಲೌಟ್ ಆಯಿತು.

3 / 5
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ್ ಪರ ಆರಂಭಿಕ ದಾಂಡಿಗ ಮಾಧವ್ ಕೌಶಿಕ್ 54 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್ಯನ್ ಜುಯಲ್ 66 ರನ್​ ಸಿಡಿಸಿದರು. ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

4 / 5
ತಾಳ್ಮೆಯುತ ಬ್ಯಾಟಿಂಗ್​ಗೆ ಒತ್ತು ನೀಡಿದ ರಿಂಕು ಸಿಂಗ್ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅಲ್ಲದೆ 180 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಶತಕ ಪೂರೈಸಿದರು. ಈ ಅಜೇಯ ಶತಕದೊಂದಿಗೆ ಉತ್ತರ ಪ್ರದೇಶ್ ತಂಡದ ಸ್ಕೋರ್​ 125 ಓವರ್​ಗಳ ಮುಕ್ತಾಯದ ವೇಳೆಗೆ 332 ರನ್ ಕಲೆಹಾಕಿದೆ.

5 / 5
ಸದ್ಯ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವ ರಿಂಕು ಸಿಂಗ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಹೀಗಾಗಿ ಉತ್ತರ ಪ್ರದೇಶ್​ ತಂಡದ ಮೂರನೇ ಪಂದ್ಯಕ್ಕೆ ರಿಂಕು ಸಿಂಗ್ ಅಲಭ್ಯರಾಗಲಿದ್ದಾರೆ.

Published On - 2:31 pm, Sat, 18 October 25