ರಿಷಭ್ ಪಂತ್ ಕಂಬ್ಯಾಕ್ ಮಾಡಿದರೂ ಕೆಲ ಕಾಲ ವಿಕೆಟ್ ಕೀಪಿಂಗ್ ಮಾಡುವುದು ಡೌಟ್..!

| Updated By: ಝಾಹಿರ್ ಯೂಸುಫ್

Updated on: Jul 03, 2023 | 10:58 PM

Rishabh Pant: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಕಂಬ್ಯಾಕ್ ಮಾಡಲು ಮತ್ತಷ್ಟು ತಿಂಗಳುಗಳನ್ನು ತೆಗೆದುಕೊಳ್ಳಲಿದ್ದಾರೆ.

1 / 5
ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಚೇತರಿಕೆಯ ಹಾದಿಯಲ್ಲಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ ಪಂತ್ ಏಕದಿನ ವಿಶ್ವಕಪ್​​ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆಯಿಲ್ಲ.

2 / 5
ಏಕೆಂದರೆ ಅವರು ಕಂಬ್ಯಾಕ್ ಮಾಡಿದರೂ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಸದ್ಯ ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಕಳೆದ 8 ತಿಂಗಳುಗಳಿಂದ ಮೈದಾನದಿಂದ ಹೊರಗುಳಿದಿರುವ ಪಂತ್ ಮತ್ತೆ ಗ್ಲೌಸ್ ತೊಟ್ಟು ವಿಕೆಟ್ ಕೀಪಿಂಗ್​​ ಪುನರಾರಂಭಿಸಲು ಕನಿಷ್ಠ 6 ತಿಂಗಳಾದರೂ ಬೇಕು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3 / 5
ರಸ್ತೆ ಅಪಘಾತದಲ್ಲಿ ಪಂತ್ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಆ ಬಳಿಕ ನಡೆದ ಶಸ್ತ್ರ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಾಗ್ಯೂ ಅವರು ವಿಕೆಟ್ ಕೀಪಿಂಗ್​ನಲ್ಲಿ ಚುರುಕುತನ ಸಾಧಿಸಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ಪಂತ್ ತಂಡಕ್ಕೆ ಮರಳಿದರೂ ಕೀಪಿಂಗ್ ಗ್ಲೌಸ್ ತೊಡುವುದು ಅನುಮಾನ ಎಂದು ವರದಿಯಾಗಿದೆ.

4 / 5
ಸದ್ಯ ರಿಷಭ್ ಪಂತ್​ಗೆ ಕೇವಲ 25 ವರ್ಷ. ಹೀಗಾಗಿ ಅವರು ಸಂಪೂರ್ಣ ಫಿಟ್​ನೆಸ್ ಸಾಧಿಸಿದ ಬಳಿಕ ತಂಡಕ್ಕೆ ಮರಳಬಹುದು. ಅಂದರೆ ಐದಾರು ತಿಂಗಳುಗಳ ಕಾಲ ವಿಕೆಟ್ ಕೀಪಿಂಗ್​ ಅಭ್ಯಾಸ ನಡೆಸಿ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5 / 5
ಹೀಗಾಗಿ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್ ಕೀಪರ್​ ಆಗಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಅಲ್ಲದೆ ವಿಕೆಟ್ ಕೀಪರ್-ಬ್ಯಾಟರ್​ ಆಗಿ ಕಂಬ್ಯಾಕ್ ಮಾಡಲು ಬಯಸಿದರೆ ಮುಂದಿನ ಐಪಿಎಲ್​ ವೇಳೆ ಮತ್ತೆ ಕಣಕ್ಕಿಳಿಯಬಹುದು.