AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammad Amir: ಐಪಿಎಲ್ 2024 ರಲ್ಲಿ ಆಡಲು ಸಜ್ಜಾದ ಪಾಕಿಸ್ತಾನ ತಂಡದ ಈ ಸ್ಟಾರ್ ಆಟಗಾರ?

ಐಪಿಎಲ್​ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟಿಗರಿಗೆ ಬಿಟ್ಟು ಉಳಿದ ಎಲ್ಲ ದೇಶದ ಆಟಗಾರರಿಗೆ ಅನುಮತಿ ಇದೆ. ಹೀಗಿರುವಾಗ ಪಾಕ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಐಪಿಎಲ್​ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

Vinay Bhat
|

Updated on: Jul 04, 2023 | 10:08 AM

Share
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಬೇಕು ಎಂಬ ಕನಸು ಪ್ರತಿಯೊಬ್ಬ ಕ್ರಿಕೆಟಿಗನಿಗೆ ಇದ್ದೇ ಇದೆ. ಆದರೆ, ಇದರಲ್ಲಿ ಅವಕಾಶ ಸಿಗುವುದು ಅಷ್ಟೊಂದು ಸುಲಭವಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರಷ್ಟೆ ಸ್ಥಾನ ಭದ್ರ.

1 / 7
ಐಪಿಎಲ್​ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟಿಗರಿಗೆ ಬಿಟ್ಟು ಉಳಿದ ಎಲ್ಲ ದೇಶದ ಆಟಗಾರರಿಗೆ ಅನುಮತಿ ಇದೆ. ಪಾಕ್ ಆಟಗಾರರಿಗೆ ಮಾತ್ರ ನಿಷೇಧ ಹೇರಲಾಗಿದೆ.

2 / 7
ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಸಂಬಂಧವು ಸಂಪೂರ್ಣವಾಗಿ ಹದಗೆಟ್ಟ ನಂತರ, ಪಾಕಿಸ್ತಾನದ ಯಾವ ಆಟಗಾರರು ಕೂಡ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಹೀಗಿರುವಾಗ ಪಾಕ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಐಪಿಎಲ್​ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

3 / 7
2016 ರಲ್ಲಿ ಬ್ರಿಟನ್ ಯುವತಿ ನರ್ಜೀಸ್ ಖಾನ್ ಅವರನ್ನು ಮದುವೆಯಾದ ಮೊಹಮ್ಮದ್ ಅಮೀರ್, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. 2020ರಿಂದ ಇಂಗ್ಲೆಂಡ್‌ನಲ್ಲೇ ವಾಸಿಸುತ್ತಿರುವ ಅಮೀರ್, ಮುಂದಿನ ವರ್ಷ ಬ್ರಿಟಿಷ್ ಪೌರತ್ವ ಪಡೆಯಲಿದ್ದಾರೆ. ನಂತರ ಅವರು ಪಾಕಿಸ್ತಾನ ಪ್ರಜೆ ಅಲ್ಲ.

4 / 7
ಬ್ರಿಟಿಷ್ ಪೌರತ್ವ ಪಡೆದ ನಂತರ ಅಮೀರ್ ಐಪಿಎಲ್​ನಲ್ಲಿ ಆಡುವ ಅವಕಾಶ ಹೊಂದಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಬ್ರಿಟಿಷ್ ಪ್ರಜೆಯಾದ ಬಳಿಕ ನಾನು ಇಂಗ್ಲೆಂಡ್ ತಂಡಕ್ಕೆ ಆಡುವುದಿಲ್ಲ. ಬದಲಾಗಿ ಐಪಿಎಲ್ ಟೂರ್ನಿ ಬಗ್ಗೆ ಯೋಚಿಸುತ್ತೇನೆ. ಅನೇಕ ಲೀಗ್ ಪಂದ್ಯಗಳಲ್ಲಿ ಆಡುವ ಬಯಕೆ ಇದೆ. ಇದಕ್ಕಾಗಿ ಎಲ್ಲಾ ಬಾಗಿಲು ತೆರಿದಿಟ್ಟಿರುತ್ತೇನೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.

5 / 7
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದೇನೆ. ಮತ್ತೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದಿಲ್ಲ. ನಾನು ಒಂದೊಂದೇ ಹೆಜ್ಜೆ ಇಡಲು ಬಯಸುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗಿನಿಂದಲೇ ಐಪಿಎಲ್ 2024ರಲ್ಲಿ ಆಡಬೇಕು ಎಂದು ಕನಸು ಕಾಣುವುದು ಸರಿಯಲ್ - ಮೊಹಮ್ಮದ್ ಅಮೀರ್.

6 / 7
ಮೊಹಮ್ಮದ್ ಅಮೀರ್ ಪಿಸಿಬಿ ಅಧಿಕಾರಿಗಳೊಂದಿಗಿನ ಜಗಳದ ನಂತರ 2020ರ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೆ 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಐದು ವರ್ಷಗಳ ಕಾಲ ಕ್ರಿಕೆಟ್​ನಿಂದ ಬ್ಯಾನ್ ಕೂಡ ಆಗಿದ್ದರು.

7 / 7
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ