Updated on: Jul 03, 2023 | 8:31 PM
ಕ್ರಿಕೆಟ್ ಅಂಗಳದ ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ (AB De Villiers) ಎಲ್ಲಾ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿದ್ದರು. ಅದರಲ್ಲೂ ತಮ್ಮ 360 ಡಿಗ್ರಿ ಬ್ಯಾಟಿಂಗ್ ಮೂಲಕ ವೇಗಿಗಳ ಪಾಲಿಗೆ ದುಃಸ್ವಪ್ನವಾಗಿದ್ದರು.
ಇದಾಗ್ಯೂ ಕೆಲ ಬೌಲರ್ಗಳನ್ನು ಎದುರಿಸಲು ತಾನು ತಿಣಕಾಡಿರುವುದಾಗಿ ಖುದ್ದು ಎಬಿ ಡಿವಿಲಿಯರ್ಸ್ ಒಪ್ಪಿಕೊಂಡಿದ್ದಾರೆ. ಹೀಗೆ ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ಗಳನ್ನು ಎಬಿಡಿ ಪ್ರಸ್ತಾಪಿಸಿದ್ದಾರೆ.
ಚರ್ಚೆವೊಂದರಲ್ಲಿ ಮಾತನಾಡಿದ ಎಬಿಡಿ, ನನ್ನ ಕೆರಿಯರ್ನಲ್ಲಿ ಮೂವರು ಕಠಿಣ ಬೌಲರ್ಗಳನ್ನು ಎದುರಿಸಿದ್ದೆ. ಅವರಲ್ಲಿ ಇಬ್ಬರು ಸ್ಪಿನ್ನರ್ಗಳಾಗಿದ್ದರೆ, ಓರ್ವ ವೇಗದ ಬೌಲರ್. ಈ ಮೂವರನ್ನು ಎದುರಿಸುವುದು ನನ್ನ ಪಾಲಿಗೆ ಸುಲಭವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಹೀಗೆ ಎಬಿಡಿ ಹೆಸರಿಸಿದ ಈ ಮೂವರು ಕಠಿಣ ಬೌಲರ್ಗಳಲ್ಲಿ ವೇಗಿಯಾಗಿ ಕಾಣಿಸಿಕೊಂಡಿರುವುದು ಟೀಮ್ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ಎಂಬುದು ವಿಶೇಷ. ಅಂದರೆ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಅವರ ಎಸೆತಗಳನ್ನು ಎದುರಿಸುವುದು ನನ್ನ ಪಾಲಿಗೆ ಕಠಿಣವಾಗಿತ್ತು ಎಂದು ಖುದ್ದು ಎಬಿಡಿ ಒಪ್ಪಿಕೊಂಡಿದ್ದಾರೆ.
ಹಾಗೆಯೇ ಸ್ಪಿನ್ ಮಾಂತ್ರಿಕ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ಎಸೆತಗಳು ಕೂಡ ನನ್ನ ಪಾಲಿಗೆ ಕಠಿಣವಾಗಿತ್ತು. ಅವರ ಗೂಗ್ಲಿ ಎಸೆತಗಳನ್ನು ಗುರುತಿಸುವುದೇ ಸವಾಲಾಗಿತ್ತು. ಹೀಗಾಗಿಯೇ ಅವರ ಎಸೆತಗಳಲ್ಲಿ ನಾನು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದೆ ಎಂದು ಎಬಿಡಿ ತಿಳಿಸಿದ್ದಾರೆ.
ಇನ್ನು ಎಬಿಡಿಯನ್ನು ಕಾಡಿದ ಮೂರನೇ ಬೌಲರ್ ಅಫ್ಘಾನಿಸ್ತಾನದ ರಶೀದ್ ಖಾನ್. ಸ್ಪಿನ್ ಮೋಡಿಗಾರ ರಶೀದ್ ಖಾನ್ ಎಸೆತಗಳನ್ನು ಎದುರಿಸುವುದು ಕೂಡ ಸುಲಭವಾಗಿರಲಿಲ್ಲ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.