Riyan Parag: 4 ಸೆಮಿಫೈನಲಿಸ್ಟ್ಗಳನ್ನು ಹೆಸರಿಸಿ ಎಂದರೆ ರಿಯಾನ್ ಪರಾಗ್ ಈ ರೀತಿ ಉತ್ತರ ಕೊಡೋದಾ..!
T20 World Cup 2024: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ರಿಯಾನ್ ಪರಾಗ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಹಲವರು ಹೇಳಿದ್ದರು. ಆದರೆ ಪರಾಗ್ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಸಧ್ಯ ತಮ್ಮ ಅಭ್ಯಾಸದಲ್ಲಿ ನಿರತರಾಗಿರುವ ಪರಾಗ್ ಬಳಿ ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಡುವ ಅಗ್ರ ನಾಲ್ಕು ತಂಡಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ನೀಡಿದ ಉತ್ತರ ಅಚ್ಚರಿ ಮೂಡಿಸಿದೆ.
1 / 7
ಟಿ20 ವಿಶ್ವಕಪ್ ಆರಂಭವಾಗಿ ಈಗಾಗಲೇ 2 ದಿನಗಳು ಕಳೆದಿವೆ. ಅದಾಗ್ಯೂ ಈ ಮಿನಿ ವಿಶ್ವಸಮರದ ಜ್ವರ ಎಲ್ಲಿಯೂ ಕಾವೇರಿದಂತೆ ಕಾಣುತ್ತಿಲ್ಲ. ಪ್ರಮುಖ ತಂಡಗಳು ಇನ್ನು ಅಖಾಡಕ್ಕಿಳಿಯದಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೂ ಲೀಗ್ ಹಂತಕ್ಕೂ ಮುನ್ನವೇ ಸೆಮಿಫೈನಲ್ಗೇರುವ 4 ತಂಡಗಳು ಯಾವುವು ಎಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.
2 / 7
ಹಲವು ಕ್ರಿಕೆಟ್ ಪಂಡಿತರ ಬಳಿ ಈ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅವರೆಲ್ಲರೂ ಈ ಲೀಗ್ನಲ್ಲಿ ಸೆಮಿಫೈನಲ್ ಆಡಬಹುದಾದ ನಾಲ್ಕು ತಂಡಗಳನ್ನು ಈಗಾಗಲೇ ಹೆಸರಿಸಿದ್ದಾರೆ. ಅದರಂತೆ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಅವರನ್ನು ಸಹ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಆದರೆ ಈ ಪ್ರಶ್ನೆಗೆ ಪರಾಗ್ ನೀಡಿದ ಉತ್ತರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
3 / 7
ವಾಸ್ತವವಾಗಿ ಕಳೆದ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ ರಿಯಾನ್ ಪರಾಗ್ ತಂಡದ ಪರ ಹಲವು ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದರು. ಅಲ್ಲದೆ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದರು. ಹೀಗಾಗಿ ಅವರಿಗೆ ಟೀಂ ಇಂಡಿಯಾ ಕದ ಶೀಘ್ರದಲ್ಲೇ ತೆರೆಯಲಿದೆ ಎಂಬ ಕೂಗು ಜೋರಾಗಿದೆ.
4 / 7
ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ರಿಯಾನ್ ಪರಾಗ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಹಲವರು ಹೇಳಿದ್ದರು. ಆದರೆ ಪರಾಗ್ಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಸಧ್ಯ ತಮ್ಮ ಅಭ್ಯಾಸದಲ್ಲಿ ನಿರತರಾಗಿರುವ ಪರಾಗ್ ಬಳಿ ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಡುವ ಅಗ್ರ ನಾಲ್ಕು ತಂಡಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.
5 / 7
ಇದಕ್ಕೆ ಉತ್ತರಿಸಿರುವ ಪರಾಗ್ ಮೊದಲ ಆಯ್ಕೆ ಭಾರತ ಎಂದಿದ್ದಾರೆ. ಆ ಬಳಿಕ ಅವರು ಯಾವ ತಂಡಗಳು ಮೊದಲ ನಾಲ್ಕು ಸ್ಥಾನಗಳನ್ನು ತಲುಪುತ್ತವೆ ಎಂಬುದರ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಟಾಪ್ ನಾಲ್ಕು ತಂಡಗಳ ಬಗ್ಗೆ ಮಾತನಾಡುವುದು ಪಕ್ಷಪಾತವಾಗುತ್ತದೆ.
6 / 7
ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ವಿಶ್ವಕಪ್ ನೋಡುವ ಗೋಜಿಗೆ ಹೋಗುವುದಿಲ್ಲ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡುತ್ತೇನೆ ಮತ್ತು ಸಂತೋಷಪಡುತ್ತೇನೆ. ನಾನು ವಿಶ್ವಕಪ್ ಆಡುವಾಗ ಅಗ್ರ ನಾಲ್ಕು ತಂಡಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
7 / 7
ಇನ್ನು ಐಪಿಎಲ್‌ನಲ್ಲಿ ಪರಾಗ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಲೀಗ್ನಲ್ಲಿ 150 ರ ಸ್ಟ್ರೈಕ್ ರೇಟ್ನಲ್ಲಿ 573 ರನ್ ಕಲೆಹಾಕಿದ ಪರಾಗ್, ಅತ್ಯಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ತಂಡದ ಪರ ಅಜೇಯ ಇನ್ನಿಂಗ್ಸ್ ಆಡಿದ ಪರಾಗ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
Published On - 5:59 pm, Mon, 3 June 24