Virat Kohli: ಈ ಬಾರಿಯಾದರೂ ಈಡೇರುತ್ತಾ ಕಿಂಗ್ ಕೊಹ್ಲಿಯ ಕನಸು..!
Virat Kohli: ವಿರಾಟ್ ಕೊಹ್ಲಿ 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ ಅವರ ಟಿ20 ವಿಶ್ವಕಪ್ ಕನಸು ಕನಸಾಗಿಯೇ ಉಳಿದಿದೆ. ಕಳೆದ 5 ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಒಮ್ಮೆಯೂ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಇದೀಗ 6ನೇ ಬಾರಿಯ ಪ್ರಯತ್ನದಲ್ಲಿ ವಿಶ್ವ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.