AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಈ ಬಾರಿಯಾದರೂ ಈಡೇರುತ್ತಾ ಕಿಂಗ್ ಕೊಹ್ಲಿಯ ಕನಸು..!

Virat Kohli: ವಿರಾಟ್ ಕೊಹ್ಲಿ 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ ಅವರ ಟಿ20 ವಿಶ್ವಕಪ್ ಕನಸು ಕನಸಾಗಿಯೇ ಉಳಿದಿದೆ. ಕಳೆದ 5 ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ ಒಮ್ಮೆಯೂ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಇದೀಗ 6ನೇ ಬಾರಿಯ ಪ್ರಯತ್ನದಲ್ಲಿ ವಿಶ್ವ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಝಾಹಿರ್ ಯೂಸುಫ್
|

Updated on:Jun 03, 2024 | 12:57 PM

Share
ಟಿ20 ವಿಶ್ವಕಪ್ ಶುರುವಾಗಿ 16 ವರ್ಷಗಳು ಕಳೆದಿವೆ. ಈ ಹದಿನಾರು ವರ್ಷಗಳಲ್ಲಿ ಟೀಮ್ ಇಂಡಿಯಾ 8 ಟಿ20 ವಿಶ್ವಕಪ್​​ಗಳನ್ನು ಆಡಿದೆ. ಈ ಎಂಟು ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ 5 ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಅವರಿಗೆ ಟ್ರೋಫಿಗೆ ಮುತ್ತಿಕ್ಕುವ ಭಾಗ್ಯ ಮಾತ್ರ ದೊರೆತಿಲ್ಲ.

1 / 6
ಅಂದರೆ ಕಳೆದ 5 ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿದರೂ ಕಿಂಗ್ ಕೊಹ್ಲಿ ಒಮ್ಮೆಯೂ ಚಾಂಪಿಯನ್ಸ್ ತಂಡದ ಭಾಗವಾಗಿಲ್ಲ. 2012 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಿದ್ದ ಕೊಹ್ಲಿ 5 ಪಂದ್ಯಗಳಲ್ಲಿ 185 ರನ್ ಬಾರಿಸಿದ್ದರು.

2 / 6
ಇನ್ನು 2014 ರ ಟಿ20 ವಿಶ್ವಕಪ್​ನಲ್ಲಿ 6 ಇನಿಂಗ್ಸ್​ಗಳಿಂದ 319 ರನ್ ಬಾರಿಸಿ ಅಬ್ಬರಿಸಿದ್ದರು. ಪರಿಣಾಮ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದರೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನುಭವಿಸಿತು. ಇದರಿಂದ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವ ವಿರಾಟ್ ಕೊಹ್ಲಿಯ ಕನಸು ಕೂಡ ನುಚ್ಚು ನೂರಾಯಿತು.

3 / 6
ಇದಾದ ಬಳಿಕ 2016 ರಲ್ಲಿ ವಿರಾಟ್ ಕೊಹ್ಲಿ 6 ಪಂದ್ಯಗಳಲ್ಲಿ 273 ರನ್ ಬಾರಿಸಿ ಮಿಂಚಿದ್ದರು. ಆದರೆ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ ಹೊರಬಿದ್ದಿತು. ಇನ್ನು 2021 ರಲ್ಲಿ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಯಿತು.

4 / 6
ಇನ್ನು 2022 ರ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ 6 ಇನಿಂಗ್ಸ್​ಗಳಿಂದ 296 ರನ್ ಬಾರಿಸಿ ಮಿಂಚಿದ್ದರು. ಆದರೆ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು.

5 / 6
ಇದೀಗ ವಿರಾಟ್ ಕೊಹ್ಲಿ 6ನೇ ಬಾರಿ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಲ್ಲದೆ ಇದು ಅವರ ಕೊನೆಯ ಟಿ20 ವಿಶ್ವಕಪ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿಯಾದರೂ ವಿರಾಟ್ ಕೊಹ್ಲಿಯ ಟಿ20 ವಿಶ್ವಕಪ್ ಕನಸು ನನಸಾಗಲಿದೆಯಾ ಕಾದು ನೋಡಬೇಕಿದೆ.

6 / 6

Published On - 12:54 pm, Mon, 3 June 24

ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ

ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು

ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ

ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು

ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್

ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ

ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್