Rohit Sharma: ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಪ್ರಶ್ನೆಗಳನ್ನೆತ್ತಿದ ಕಪಿಲ್ ದೇವ್

Updated By: ಝಾಹಿರ್ ಯೂಸುಫ್

Updated on: Feb 23, 2023 | 11:58 PM

Rohit Sharma: ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್​ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್​ನೆಸ್​ನಿಂದ ಕೂಡಿರಬೇಕಾಗುತ್ತದೆ.

1 / 6
ಟೀಮ್ ಇಂಡಿಯಾಗೆ ಆಯ್ಕೆ ಆಗಬೇಕಿದ್ದರೆ ಫಿಟ್​ನೆಸ್ ಹೊಂದಿರುವುದು ಕಡ್ಡಾಯ ಎಂಬುದನ್ನು ಇತ್ತೀಚೆಗಷ್ಟೇ ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಫಿಟ್​ನೆಸ್ ಬಗ್ಗೆ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಪ್ರಶ್ನೆಗಳನ್ನೆತ್ತಿದ್ದಾರೆ.

2 / 6
ಸಂವಾದವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ರೋಹಿತ್ ಶರ್ಮಾ ಅವರನ್ನು ಟಿವಿಯಲ್ಲಿ ನೋಡಿದಾಗ ತೂಕ ಹೆಚ್ಚಿದ್ದಾರೆ ಎಂದೆನಿಸುತ್ತದೆ. ಹೀಗಾಗಿ ಅವರು ಫಿಟ್​ನೆಸ್​ನಲ್ಲಿ ಕಠಿಣ ಪರಿಶ್ರಮ ಹಾಕಬೇಕೆಂದು ಕಪಿಲ್ ದೇವ್ ತಿಳಿಸಿದ್ದಾರೆ.

3 / 6
ಇದೇ ವೇಳೆ ವಿರಾಟ್ ಕೊಹ್ಲಿಯ ಫಿಟ್​ನೆಸ್ ಅನ್ನು ಶ್ಲಾಘಿಸಿರುವ ಕಪಿಲ್ ದೇವ್, ಕೊಹ್ಲಿ ಅದ್ಭುತವಾಗಿ ಫಿಟ್​ನೆಸ್ ಕಾಯ್ದುಕೊಂಡಿದ್ದಾರೆ. ಅವರಿಂದಲೇ ಸ್ಪೂರ್ತಿ ಪಡೆದು ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಗಮನ ಕೊಡಬೇಕು ಎಂದರು.

4 / 6
ಏಕೆಂದರೆ ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರ ಕೂಡ ಫಿಟ್​ ಆಗಿರಬೇಕು. ಅದರಲ್ಲೂ ಮುಖ್ಯವಾಗಿ ನಾಯಕ ಹೆಚ್ಚು ಫಿಟ್​ನೆಸ್​ನಿಂದ ಕೂಡಿರಬೇಕಾಗುತ್ತದೆ. ಕ್ಯಾಪ್ಟನ್​ ಫಿಟ್‌ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ ಮಾರ್ಕ್‌ಗೆ ತಲುಪದಿದ್ದರೆ ಅದು ನಾಚಿಕೆಗೇಡಿನ ಸಂಗತಿ. ಹೀಗಾಗಿ ರೋಹಿತ್ ತಮ್ಮ ಫಿಟ್‌ನೆಸ್‌ಗೆ ಸ್ವಲ್ಪ ಕಠಿಣ ಪರಿಶ್ರಮ ಹಾಕಬೇಕಾಗಿದೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.

5 / 6
ರೋಹಿತ್ ಉತ್ತಮ ಬ್ಯಾಟರ್ ಎಂಬುದನ್ನು ಈಗಲೂ ನಾನು ಒಪ್ಪುತ್ತೇನೆ. ಆದರೆ ಅವರ ದೇಹ ತೂಕ ಫಿಟ್​ನೆಸ್ ಇಲ್ಲ ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ನಾನು ಅವರು ಫಿಟ್ ಆಗಬೇಕೆಂದು ಬಯಸುತ್ತೇನೆ.

6 / 6
. ನೀವು ವಿರಾಟ್ ಕೊಹ್ಲಿ ಅವರನ್ನು ನೋಡಿ, ಆತನನ್ನು ನೋಡಿದಾಗೆಲ್ಲಾ, ಇದಪ್ಪಾ ಫಿಟ್​ನೆಸ್ ಅಂದರೆ ಅಂದುಕೊಳ್ಳುತ್ತೀವಿ. ಅಂತಹ ಫಿಟ್​ನೆಸ್​ ಟೀಮ್ ಇಂಡಿಯಾ ನಾಯಕ ಕೂಡ ಹೊಂದಿರಬೇಕೆಂದು ಕಪಿಲ್ ದೇವ್ ತಿಳಿಸಿದರು.