- Kannada News Photo gallery Cricket photos Rohit Sharma's first reaction goes viral after the birth of his son
ವಿಭಿನ್ನ ಪೋಸ್ಟ್ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡ ರೋಹಿತ್ ಶರ್ಮಾ
Rohit Sharma: ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕುಟುಂಬದ ಅನಿಮೇಟೆಡ್ ಫೋಟೋವನ್ನು ಹಂಚಿಕೊಂಡಿರುವ ರೋಹಿತ್ ಶರ್ಮಾ, ನಮ್ಮದು ನಾಲ್ವರು ಸದಸ್ಯರಿರುವ ಕುಟುಂಬ ಎಂದು ಬರೆದುಕೊಂಡಿದ್ದಾರೆ. ರೋಹಿತ್ ಹಂಚಿಕೊಂಡಿರುವ ಈ ಅನಿಮೇಟೆಡ್ ಫೋಟೋದಲ್ಲಿ, ಸೋಫಾದಲ್ಲಿ ಕುಳಿತು ದಂಪತಿಗಳಿಬ್ಬರು ನಗುತ್ತಿದ್ದರೆ, ಒಂದು ಚಿಕ್ಕ ಹುಡುಗಿ ತನ್ನ ಮಡಿಲಲ್ಲಿ ನವಜಾತ ಶಿಶುವನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.
Updated on: Nov 16, 2024 | 4:48 PM

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮನೆಯಲ್ಲಿ ಮತ್ತೊಮ್ಮೆ ಸಂತಸ ಮನೆ ಮಾಡಿದೆ. ಅವರ ಪತ್ನಿ ರಿತಿಕಾ ಸಜ್ದೇ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರ ಚಿಕ್ಕ ಕುಟುಂಬಕ್ಕೆ ನೂತನ ಸೇರ್ಪಡೆಯಾಗಿದೆ. 2015 ರ ಡಿಸೆಂಬರ್ 13 ರಂದು ವೈವಾಹೀಕ ಜೀವನಕ್ಕೆ ಕಾಲಿರಿಸಿದ್ದ ರೋಹಿತ್ ಮತ್ತು ರಿತಿಕಾ ಅವರಿಗೆ 2018 ರಲ್ಲಿ ಸಮೈರಾ ಎಂಬ ಮಗಳು ಜನಿಸಿದ್ದಳು.

ಇದೀಗ ರೋಹಿತ್ ಕುಟುಂಬಕ್ಕೆ ಮರಿ ಹಿಟ್ಮ್ಯಾನ್ ಆಗಮನವಾಗಿದೆ. ಇದೀಗ ಮಗನ ಜನನದ ನಂತರ ಸಂತಸದ ಅಲೆಯಲ್ಲಿ ತೇಲುತ್ತಿರುವ ರೋಹಿತ್ ಶರ್ಮಾ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕುಟುಂಬದ ಅನಿಮೇಟೆಡ್ ಫೋಟೋವನ್ನು ಹಂಚಿಕೊಂಡಿರುವ ರೋಹಿತ್ ಶರ್ಮಾ, ನಮ್ಮದು ನಾಲ್ವರು ಸದಸ್ಯರಿರುವ ಕುಟುಂಬ ಎಂದು ಬರೆದುಕೊಂಡಿದ್ದಾರೆ. ರೋಹಿತ್ ಹಂಚಿಕೊಂಡಿರುವ ಈ ಅನಿಮೇಟೆಡ್ ಫೋಟೋದಲ್ಲಿ, ಸೋಫಾದಲ್ಲಿ ಕುಳಿತು ದಂಪತಿಗಳಿಬ್ಬರು ನಗುತ್ತಿದ್ದರೆ, ಒಂದು ಚಿಕ್ಕ ಹುಡುಗಿ ತನ್ನ ಮಡಿಲಲ್ಲಿ ನವಜಾತ ಶಿಶುವನ್ನು ಹಿಡಿದಿರುವುದನ್ನು ಕಾಣಬಹುದಾಗಿದೆ.

ರೋಹಿತ್ ಅವರ ಈ ಪೋಸ್ಟ್ಗೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ತಮ್ಮದೇ ಶೈಲಿಯಲ್ಲಿ ರೋಹಿತ್ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವರದಿಯ ಪ್ರಕಾರ, ಮುಂಬೈನ ಸ್ಥಳೀಯ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ರೋಹಿತ್ ಅವರ ಪತ್ನಿ ಮಗನಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಈ ಸರಣಿ ಆರಂಭವಾಗಲು ಇನ್ನೂ 6 ಬಾಕಿ ಇದೆ. ಹೀಗಿರುವಾಗ ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆಡುವ ಸಾಧ್ಯತೆ ಹೆಚ್ಚಿ




