Kieron Pollard: ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ: ಪೊಲಾರ್ಡ್ ಸೇರಿ 5 ಸ್ಟಾರ್ ಪ್ಲೇಯರ್ ತಂಡದಿಂದ ಔಟ್

| Updated By: Vinay Bhat

Updated on: Nov 13, 2022 | 10:31 AM

IPL 2023 Retention List: ಐಪಿಎಲ್ 2023 ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಸ್ಟಾರ್ ಆಲ್‌ರೌಂಡರ್‌ ಕೈರೊನ್ ಪೊಲಾರ್ಡ್ ಅವರನ್ನು ಕೈಬಿಡಲಾಗಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ 2023ಕ್ಕೆ ಈಗಾಗಲೇ ತಯಾರಿ ಶುರುವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಏರ್ಪಡಿಸಲಾಗಿದ್ದು ಎಲ್ಲ ಫ್ರಾಂಚೈಸಿಗಳು ಸಿದ್ಧತೆಯಲ್ಲಿದೆ. ನವೆಂಬರ್ 15ರ ಒಳಗೆ ಎಲ್ಲಾ 10 ತಂಡಗಳು ತಮ್ಮ ತಂಡದಲ್ಲಿರುವ ಆಟಗಾರರ ಅಂತಿಮ ಪಟ್ಟಿ ಸಲ್ಲಿಸಬೇಕೆಂದು ಬಿಸಿಸಿಐ ಹೇಳಿದೆ.

2 / 8
ಇದರ ಅಂಗವಾಗಿ ಮುಂಬೈ ಇಂಡಿಯನ್ಸ್ ತಂಡ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಮುಂಬೈ ತಂಡಕ್ಕೆ ಅನೇಕ ಬಾರಿ ಏಕಾಂಗಿಯಾಗಿ ನಿಂತು ಗೆಲುವು ತಂದುಕೊಟ್ಟಿದ್ದ ಸ್ಟಾರ್ ಆಲ್‌ರೌಂಡರ್‌ ಕೈರೊನ್ ಪೊಲಾರ್ಡ್ ಅವರನ್ನು ಕೈಬಿಡಲಾಗಿದೆ.

3 / 8
ಐಪಿಎಲ್‌ 2022 ಟೂರ್ನಿಯಲ್ಲಿ ಪೊಲಾರ್ಡ್ ಕಡೆಯಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಈ ಕಾರಣ ಅವರನ್ನು ಹರಾಜಿಗೆ ಬಿಡುಗಡೆ ಮಾಡಿದೆ. 2010ರಲ್ಲಿ ಎಂಐ ತಂಡದ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಇವರು ಒಟ್ಟು 189 ಐಪಿಎಲ್ ಪಂದ್ಯಗಳಾಡಿರುವ ಪೊಲಾರ್ಡ್‌ 3412 ರನ್‌ಗಳು ಹಾಗೂ 69 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

4 / 8
ಇವರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡ ಒಟ್ಟು 10 ಆಟಗಾರರನ್ನು ಉಳಿಸಿಕೊಂಡಿದ್ದು, 5 ಆಟಗಾರರನ್ನು ಬಿಡುಗಡೆ ಮಾಡಿದೆ. ಫ್ಯಾಬಿಯನ್‌ ಆಲೆನ್‌, ಕೈರೊನ್‌ ಪೊಲಾರ್ಡ್‌, ಟೈಮಲ್‌ ಮಿಲ್ಸ್‌, ಮಯಾಂಕ್‌ ಮಾರ್ಕಂಡೆ ಹಾಗೂ ಹೃತಿಕ್‌ ಶೋಕಿನ್‌ ಅವರನ್ನು ಕೈಬಿಡಲಗಿದೆ.

5 / 8
ಅಂತೆಯೆ ರೋಹಿತ್ ಶರ್ಮಾ, ಡೆವಾಲ್ಡ್ ಬ್ರೂವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ತಿಲಕ್ ವರ್ಮಾ ಅವರನ್ನು ಮುಂಬೈ ಉಳಿಸಿಕೊಂಡಿದೆ.

6 / 8
ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ಆಟಗಾರರನ್ನು ಉಳಿಸಿಕೊಂಡಿದ್ದು, 4 ಆಟಗಾರರನ್ನು ಬಿಡುಗಡೆ ಮಾಡಿದೆ. ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮುಖೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್ ಮತ್ತು ದೀಪಕ್ ಚಹಾರ್ ಅವರನ್ನು ಉಳಿಸಿಕೊಂಡಿದೆ. ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಶನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

7 / 8
ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಕೂಡ ಮಹತ್ವದ ಬದಲಾವಣೆ ಮಾಡಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಕೆಲ ಪ್ಲೇಯರ್​ಗಳನ್ನು ಬಿಡುಗಡೆ ಮಾಡಿದೆ. ಜಿಟಿ ಬಿಡುಗಡೆ ಮಾಡಿದ ಆಟಗಾರರು ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಗುರುಕೀರತ್ ಮನ್ ಸಿಂಗ್, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ನೂರ್ ಅಹ್ಮದ್, ಸಾಯಿ ಕಿಶೋರ್ ವರುಣ್ ಆರೋನ್.

8 / 8
ಜಿಟಿ ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ: ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಅಭಿನವ್ ಮನೋಹರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ, ರಹಮಾನುಲ್ಲಾ ಗುರ್ಬಾಜ್.

Published On - 10:31 am, Sun, 13 November 22