AB de Villiers: ಆರ್ಸಿಬಿಗೆ ಡಿವಿಲಿಯರ್ಸ್ ಎಂಟ್ರಿ ಖಚಿತ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸಿ..!
TV9 Web | Updated By: ಪೃಥ್ವಿಶಂಕರ
Updated on:
Nov 19, 2022 | 12:51 PM
RCB: ಡಿವಿಲಿಯರ್ಸ್ ಸದ್ಯದಲ್ಲೇ ಆರ್‌ಸಿಬಿ ತಂಡಕ್ಕೆ ಮರಳಲಿದ್ದಾರೆ ಎಂಬ ವಿಚಾರವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
1 / 5
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಒಂದು ವರ್ಷವಾಗಿದೆ. 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಎಬಿಡಿ ಟಿ20 ಲೀಗ್ಗಳಲ್ಲಿ ಆಡುತ್ತಿದ್ದರು. ಆದರೆ ಕಳೆದ ವರ್ಷ ನವೆಂಬರ್ 19 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.
2 / 5
ಎಬಿಡಿ ನಿವೃತ್ತಿ ಆರ್‌ಸಿಬಿ ಅಭಿಮಾನಿಗಳಿಗೆ ಸಡನ್ ಶಾಕ್ ನೀಡಿತ್ತು. ಏಕೆಂದರೆ ಆರ್‌ಸಿಬಿ ಆಪತ್ಬಾಂಧವ ಎಂದಲೇ ಪ್ರಸಿದ್ಧರಾಗಿದ್ದ ಡಿವಿಲಿಯರ್ಸ್ ಆರ್‌ಸಿಬಿ ಪರವಾಗಿ ಅದೇಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಬಿಡಿಯ ವಿಶೇಷ ವೀಡಿಯೊವನ್ನು ಹಂಚಿಕೊಂಡು ಅವರಿಗೆ ವಿದಾಯ ಹೇಳಿತ್ತು.
3 / 5
ಆದರೆ ಈ ವರ್ಷ ಹೊಸ ಅಪ್ಡೇಟ್ ನೀಡಿರುವ ಆರ್‌ಸಿಬಿ, ಡಿವಿಲಿಯರ್ಸ್ ಸದ್ಯದಲ್ಲೇ ಆರ್‌ಸಿಬಿ ತಂಡಕ್ಕೆ ಮರಳಲಿದ್ದಾರೆ ಎಂಬ ವಿಚಾರವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
4 / 5
ತಂಡಕ್ಕೆ ಮತ್ತೆ ಎಂಟ್ರಿಕೊಡುತ್ತಿರುವ ಡಿವಿಲಿಯರ್ಸ್ ತಂಡದ ಸಹಾಯಕ ಸಿಬ್ಬಂದಿಯಾಗಿ ಕಾಣಿಸಿಕೊಳ್ಳಬಹುದು ಎಂಬ ವರದಿಗಳಿವೆ. ವಾಸ್ತವವಾಗಿ, ಎಬಿಡಿ ತನ್ನ ನಿವೃತ್ತಿಯನ್ನು ಘೋಷಿಸುವ ಸಮಯದಲ್ಲಿ, 2023 ರ ಸೀಸನ್ನಲ್ಲಿ ಮತ್ತೆ RCB ಗೆ ಮರುಸೇರ್ಪಡೆಯಾಗುವುದಾಗಿ ಹೇಳಿದ್ದರು.
5 / 5
ಡಿವಿಲಿಯರ್ಸ್ ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದು ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ ಸಾಕಷ್ಟು ವರ್ಷ ಆರ್‌ಸಿಬಿ ಪರ ಆಡಿದ ಎಬಿಡಿಗೆ ಆರ್‌ಸಿಬಿ ಹಾಲ್ ಈ ವರ್ಷ ಆಫ್ ಫೇಮ್ ಗೌರವ ನೀಡಿ ಸತ್ಕರಿಸಿತ್ತು.
Published On - 12:51 pm, Sat, 19 November 22