ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ತೂಕ ಇಳಿಸಲು ಮುಂದಾದ ರೋಹಿತ್ ಶರ್ಮಾ; ಫೋಟೋ ನೋಡಿ
Rohit Sharma: ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್ ಬಾಂಗ್ಲಾದೇಶ ಪ್ರವಾಸದೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಅಲ್ಲಿ ಟೀಂ ಇಂಡಿಯಾ ಆತಿಥೇಯ ಬಾಂಗ್ಲಾದೇಶದೊಂದಿಗೆ 3 ಏಕದಿನ ಮತ್ತು 2 ಟೆಸ್ಟ್ ಸರಣಿಗಳನ್ನು ಆಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳೊಂದಿಗೆ ಪ್ರವಾಸಕ್ಕೆ ಹಾರಿದ್ದಾರೆ. ಈ ವೇಳೆ ರಾಹುಲ್ ಕೂಡ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ.
1 / 5
ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಈ ದಿನಗಳಲ್ಲಿ ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಬಲಿಷ್ಠ ಪುನರಾಗಮನಕ್ಕೆ ಸಿದ್ಧತೆ ನಡೆಸಿದ್ದಾರೆ.
2 / 5
ವಾಸ್ತವವಾಗಿ, ನವೆಂಬರ್ 10 ರಂದು ಟೀಂ ಇಂಡಿಯಾ ಇಂಗ್ಲೆಂಡ್ ಎದುರು 10 ವಿಕೆಟ್‌ಗಳಿಂದ ಸೋತು ವಿಶ್ವಕಪ್‌ನಿಂದ ಹೊರಹೋಗಿತ್ತು. ಇದಾದ ನಂತರ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಜೊತೆಗೆ ನಾಯಕ ರೋಹಿತ್ ತೂಕ ಹೆಚ್ಚಾದ ಕಾರಣ ಮಾಜಿ ಆಟಗಾರರು ಅವರನ್ನು ಟೀಕಿಸಿದ್ದರು.
3 / 5

4 / 5
ಸದ್ಯ ವಿಶ್ರಾಂತಿಯಲ್ಲಿರುವ ರೋಹಿತ್ ಬಾಂಗ್ಲಾದೇಶ ಪ್ರವಾಸದೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಅಲ್ಲಿ ಟೀಂ ಇಂಡಿಯಾ ಆತಿಥೇಯ ಬಾಂಗ್ಲಾದೇಶದೊಂದಿಗೆ 3 ಏಕದಿನ ಮತ್ತು 2 ಟೆಸ್ಟ್ ಸರಣಿಗಳನ್ನು ಆಡಲಿದೆ.