IPL 2023: ಐಪಿಎಲ್​ನಲ್ಲಿ ಹೊಸ ತಂಡದ ಖರೀದಿಗೆ ನಟ ರಾಮ್ ಚರಣ್ ಪ್ಲ್ಯಾನ್..?

| Updated By: ಝಾಹಿರ್ ಯೂಸುಫ್

Updated on: May 12, 2023 | 8:30 PM

IPL 2023 Kannada: ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ.

1 / 6
ಸೌತ್ ಸಿನಿರಂಗದ ಸೂಪರ್ ಸ್ಟಾರ್ ರಾಮ್ ಚರಣ್ ತೇಜ ಐಪಿಎಲ್​ ತಂಡವನ್ನು ಖರೀದಿಸಲಿದ್ದಾರಾ? ಟಾಲಿವುಡ್​ ಅಂಗಳದಲ್ಲಿ ಇಂತಹದೊಂದು ಟಾಕು ಶುರುವಾಗಿದೆ. ಇದನ್ನು ಪುಷ್ಠೀಕರಿಸುವಂತೆ ಕೆಲ ಮಾಧ್ಯಮಗಳು ಕೂಡ ಯಂಗ್ ಮೆಗಾಸ್ಟಾರ್ ಐಪಿಎಲ್​ನತ್ತ ಮುಖ ಮಾಡಲಿದ್ದಾರೆ ಎಂದು ವರದಿ ಮಾಡಿದೆ.

2 / 6
ಈ ವರದಿಗಳ ಪ್ರಕಾರ, ರಾಮ್ ಚರಣ್ ಆಂಧ್ರ ಪ್ರದೇಶವನ್ನು ಕೇಂದ್ರೀಕರಿಸಿ ಐಪಿಎಲ್ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಇರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಪರಿಚಯಿಸಲು ರಾಮ್ ಚರಣ್ ಬಯಸಿದ್ದಾರೆ ಎಂದು ವರದಿಯಾಗಿದೆ.

3 / 6
ಇದಕ್ಕಾಗಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುವ ವೈಝಾಗ್ ವಾರಿಯರ್ಸ್ ಹೆಸರಿನ ಹೊಸ ತಂಡವನ್ನು ಐಪಿಎಲ್‌ನಲ್ಲಿ ಪರಿಚಯಿಸಲು ರಾಮ್ ಚರಣ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್​ಗೆ ಲಗ್ಗೆಯಿಡಲು ಮೆಗಾ ಸ್ಟಾರ್ ಕುಡಿ ಬಯಸಿದ್ದಾರಂತೆ.

4 / 6
ಇತ್ತ ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

5 / 6
ಆದರೆ ಈಗಾಗಲೇ 10 ತಂಡಗಳನ್ನು ಹೊಂದಿರುವ ಐಪಿಎಲ್​ನಲ್ಲಿ ಮತ್ತೊಂದು ಫ್ರಾಂಚೈಸಿಗೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ನೀಡಿದ್ರು 2 ತಂಡಗಳನ್ನು ಪರಿಚಯಿಸಬಹುದು. ಆದರೆ ಕಳೆದ ಸೀಸನ್​ನಲ್ಲಿ 2 ತಂಡಗಳನ್ನು ಅವಕಾಶ ನೀಡಿದ್ದ ಬಿಸಿಸಿಐ ಇದೀಗ ಮತ್ತೆರಡು ಹೊಸ ತಂಡಗಳನ್ನು ಕಣಕ್ಕಿಳಿಸುವುದು ಕೂಡ ಅನುಮಾನ.

6 / 6
ಇದಾಗ್ಯೂ ಐಪಿಎಲ್​ನಲ್ಲಿ ರಾಮ್ ಚರಣ್ ಅವರ ಮಾಲೀಕತ್ವದಲ್ಲಿ ತಂಡವೊಂದು ಸೇರ್ಪಡೆಯಾಗಲಿದೆ ಎಂಬ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ರಾಮ್ ಚರಣ್ ತೇಜ ಈಗಾಗಲೇ ಪೋಲೋ ಕ್ಲಬ್ ತಂಡವನ್ನು ಹೊಂದಿದ್ದಾರೆ. ಇತ್ತ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಮುಂದೊಂದು ಐಪಿಎಲ್​ನಲ್ಲಿ ಫ್ರಾಂಚೈಸಿ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.