
ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂಧ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡವನ್ನು 89 ರನ್ಗಳಿಂದ ಸೋಲಿಸುವ ಮೂಲಕ ಐಡೆನ್ ಮಾರ್ಕ್ರಾಮ್ ಪಡೆ 2ನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿದೆ.

ಇದಕ್ಕೂ ಮುನ್ನ 2023 ರಲ್ಲಿ ನಡೆದ ಸೌತ್ ಆಫ್ರಿಕಾ ಟಿ20 ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಸನ್ರೈಸರ್ಸ್ ಶೈನ್ ಆಗಿದ್ದಾರೆ. ಈ ಚಾಂಪಿಯನ್ ಪಟ್ಟದೊಂದಿಗೆ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿಳಿನಂತಿದೆ...

ವಿನ್ನರ್ಸ್ ಬಹುಮಾನ ಮೊತ್ತ: ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ 3.25 ಕೋಟಿ ರಾಂಡ್ ಪ್ರೈಝ್ ಮೊತ್ತವಾಗಿ ನೀಡಲಾಗುತ್ತದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ 14.21 ಕೋಟಿ ರೂ. ಬಹುಮಾನ ಮೊತ್ತವನ್ನು ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಪಡೆದುಕೊಂಡಿದೆ.

ರನ್ನರ್ಸ್ ಬಹುಮಾನ ಮೊತ್ತ: ಈ ಲೀಗ್ನಲ್ಲಿ ರನ್ನರ್ಸ್ ತಂಡಕ್ಕೆ ಸಿಗುವ ಮೊತ್ತ 1.62 ಕೋಟಿ ರಾಂಡ್. ಅಂದರೆ ಭಾರತೀಯ ಮೌಲ್ಯ 7.2 ಕೋಟಿ ರೂ. ಇದೀಗ ರನ್ನರ್ಸ್ ಆಗಿರುವ ಡರ್ಬನ್ ಸೂಪರ್ ಜೈಂಟ್ಸ್ ಬಹುಮಾನ ಮೊತ್ತವಾಗಿ 7.2 ಕೋಟಿ ರೂ. ಪಡೆದುಕೊಂಡಿದೆ.

ಇದಲ್ಲದೆ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ (4.37 ಲಕ್ಷ ರೂ) ಪ್ರಶಸ್ತಿ ಕೂಡ ಲಭಿಸಿದೆ. ಇನ್ನು ಹೆನ್ರಿಕ್ ಕ್ಲಾಸೆನ್ಗೆ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ (8.74 ಲಕ್ಷ ರೂ.) ಹಾಗೂ ಒಟ್ನಿ ಬಾರ್ಟ್ಮ್ಯಾನ್ಗೆ ಬೆಸ್ಟ್ ಬೌಲರ್ ಪ್ರಶಸ್ತಿ (8.74 ಲಕ್ಷ ರೂ.) ಲಭಿಸಿದೆ.

ಹಾಗೆಯೇ 2024ರ ಸೌತ್ ಆಫ್ರಿಕಾ ಟಿ20 ಲೀಗ್ನ ಅತ್ಯುತ್ತಮ ಆಟಗಾರ ಪ್ರಶಸ್ತಿ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಆಟಗಾರ ಹೆನ್ರಿಕ್ ಕ್ಲಾಸೆನ್ಗೆ ಸಿಕ್ಕಿದ್ದು, ಇದರ ಜೊತೆಗೆ 15.30 ಲಕ್ಷ ರೂ. ಬಹುಮಾನ ಮೊತ್ತವನ್ನು ಪಡೆದುಕೊಂಡಿದ್ದಾರೆ.