- Kannada News Photo gallery Cricket photos sourav ganguly mobile phone stolen from his kolkata house register a complaint
ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನ; ಬೆಲೆ ಎಷ್ಟು ಲಕ್ಷ ಗೊತ್ತಾ?
Sourav Ganguly: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳ್ಳತನವಾಗಿದೆ. ಹೀಗಾಗಿ ಕಳುವಾಗಿರುವ ಮೊಬೈಲ್ ಅನ್ನು ಪತ್ತೆ ಮಾಡುವಂತೆ ಗಂಗೂಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Updated on:Feb 11, 2024 | 3:14 PM

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳ್ಳತನವಾಗಿದೆ. ಹೀಗಾಗಿ ಕಳುವಾಗಿರುವ ಮೊಬೈಲ್ ಅನ್ನು ಪತ್ತೆ ಮಾಡುವಂತೆ ಗಂಗೂಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಳುವಾಗಿರುವ ಮೊಬೈಲ್ನಲ್ಲಿ ಬಹುಮುಖ್ಯವಾದ ವೈಯಕ್ತಿಕ ಡೇಟಾಗಳಿದ್ದು, ಅವುಗಳನ್ನು ರಕ್ಷಿತವಾಗಿರಿಸಲು ಗಂಗೂಲಿ ಠಾಕುರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಶನಿವಾರ ಬೆಳಿಗ್ಗೆ 11.30 ರ ಸುಮಾರಿಗೆ ಗಂಗೂಲಿ ತಮ್ಮ ಫೋನ್ ಅನ್ನು ಕೊನೆಯದಾಗಿ ನೋಡಿದ್ದರು.

ಆ ನಂತರ ಮೊಬೈಲ್ ಕಳ್ಳತನವಾಗಿದೆ. ಪ್ರಸ್ತುತ ಗಂಗೂಲಿ ಅವರ ಬೆಹಲಾ ಚೌರಸ್ತಾದಲ್ಲಿರುವ ಮನೆಗೆ ಬಣ್ಣ ಬಳಿಯಲಾಗುತ್ತಿದೆ. ಹೀಗಾಗಿ ಪೊಲೀಸರು ಬಣ್ಣ ಬಳಿಯುವ ಕೆಲಸಕ್ಕೆ ಬಂದಿದ್ದ ಕೆಲವು ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಗಂಗೂಲಿ ಕಳೆದುಕೊಂಡಿರುವ ಮೊಬೈಲ್ 1.6 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಎಂದು ವರದಿಯಾಗಿದೆ. ಆದರೆ ಗಂಗೂಲಿಗೆ ಮೊಬೈಲ್ ಕಳುವಾಗಿರುವುದಕ್ಕಿಂತ ಅದರಲ್ಲಿರುವ ವೈಯಕ್ತಿಕ ಡೇಟಾ ಸೋರಿಕೆಯಾಗಬಹುದೆಂಬ ಚಿಂತೆ ಕಾಡಲಾರಂಭಿಸಿದೆ.

ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಂಗೂಲಿ, ನನ್ನ ಫೋನ್ ಮನೆಯಿಂದ ಕಳ್ಳತನವಾಗಿದೆ. ನಾನು ಜನವರಿ 19 ರಂದು ಬೆಳಿಗ್ಗೆ 11:30 ರ ಸುಮಾರಿಗೆ ಫೋನ್ ಅನ್ನು ಕೊನೆಯದಾಗಿ ನೋಡಿದೆ. ಆ ನಂತರ ಫೋನ್ ಮಿಸ್ ಆಗಿದೆ. ಹೀಗಾಗಿ ನಾನು ಹಲವು ಕಡೆ ಫೋನ್ ಹುಡುಕಿದೆ ಆದರೆ ಅದು ಸಿಗಲಿಲ್ಲ.

ನನ್ನ ಫೋನ್ ಕಳೆದುಹೋಗಿರುವುದು ನನ್ನನ್ನು ಚಿಂತೆಗೀಡುಮಾಡಿದೆ. ಏಕೆಂದರೆ ಆ ಫೋನ್‌ನಲ್ಲಿ ಹಲವರ ನಂಬರ್ಗಳಿವೆ. ಹಾಗೆಯೇ ವೈಯಕ್ತಿಕ ಮಾಹಿತಿಯೊಂದಿಗೆ ಬ್ಯಾಂಕ್ ಅಕೌಂಟ್ ಮಾಹಿತಿಯೂ ಅದರಲ್ಲಿದೆ. ಹೀಗಾಗಿ ನನ್ನ ಫೋನ್ ಅನ್ನು ಬೇಗ ಪತ್ತೆಹಚ್ಚಬೇಕೆಂದು ಗಂಗೂಲಿ, ಪೊಲೀಸರ ಬಳಿ ವಿನಂತಿಸಿದ್ದಾರೆ.

ತನ್ನ ಫೋನ್‌ನಲ್ಲಿ ಹಲವು ವೈಯಕ್ತಿಕ ಡೇಟಾ ಇದ್ದು, ಅದು ಸೋರಿಕೆಯಾದಲ್ಲಿ ನನಗೆ ಸಮಸ್ಯೆಗಲಿದೆ ಹೀಗಾಗಿ ಮೊಬೈಲ್ ಅನ್ನು ಬೇಗನೇ ಪತ್ತೆ ಹಚ್ಚಿ ಎಂದು ಪೊಲೀಸ್ ಠಾಣೆಯಲ್ಲಿ ಗಂಗೂಲಿ ದೂರು ನೀಡಿದ್ದಾರೆ. ದೂರಿನನ್ವಯ ಕೋಲ್ಕತ್ತಾ ಪೊಲೀಸರು ಫೋನ್ ಪತ್ತೆ ಹಚ್ಚವು ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಇದುವರೆಗೆ ಕಳ್ಳ ಪತ್ತೆಯಾಗಿಲ್ಲ.
Published On - 3:12 pm, Sun, 11 February 24




