Kieron Pollard: ಕೀರನ್ ಪೊಲಾರ್ಡ್​ನ ರಿಲೀಸ್ ಮಾಡಿದ MI ಕೇಪ್​ ಟೌನ್

|

Updated on: Aug 17, 2024 | 10:15 AM

Kieron Pollard: ಕೀರನ್ ಪೊಲಾರ್ಡ್ 2022 ರಲ್ಲಿ ಐಪಿಎಲ್​ಗೆ ವಿದಾಯ ಹೇಳಿದ್ದರು. ಇದಾಗ್ಯೂ ಅವರು ಸೌತ್ ಆಫ್ರಿಕಾ ಟಿ20 ಲೀಗ್, ಇಂಟರ್​ನ್ಯಾಷನಲ್ ಲೀಗ್ ಟಿ20 ಹಾಗೂ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂದುವರೆದಿದ್ದರು. ಆದರೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಕೇಪ್​ ಟೌನ್ ತಂಡದಿಂದ ಕೀರನ್ ಪೊಲಾರ್ಡ್​ಗೆ ಗೇಟ್ ಪಾಸ್ ನೀಡಲಾಗಿದೆ.

1 / 5
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ತಂಡಗಳ ಖಾಯಂ ಸದಸ್ಯರಾಗಿದ್ದ ಕೀರನ್ ಪೊಲಾರ್ಡ್ ಅವರನ್ನು MI ಕೇಪ್ ಟೌನ್​ ತಂಡದಿಂದ ಕೈ ಬಿಟ್ಟಿದ್ದಾರೆ. ಸೌತ್ ಆಫ್ರಿಕಾ ಟಿ20 ಲೀಗ್ ಸೀಸನ್-3 ಹರಾಜಿಗೂ ಮುನ್ನ ಎಂಐ ಕೇಪ್​ ಟೌನ್ ಒಟ್ಟು 14 ಆಟಗಾರರನ್ನು ಉಳಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಪೊಲಾರ್ಡ್ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.

2 / 5
ಕಳೆದ ಸೀಸನ್​ನಲ್ಲಿ ಎಂಐ ಕೇಪ್​ ಟೌನ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕೀರನ್ ಪೊಲಾರ್ಡ್ ಅವರನ್ನು ಉಳಿಸಿಕೊಳ್ಳಲು ಈ ಬಾರಿ ಎಂಐ ಕೇಪ್​ ಟೌನ್ ನಿರಾಸಕ್ತಿ ತೋರಿದೆ. ಹೀಗಾಗಿ ಸೌತ್ ಆಫ್ರಿಕಾ ಟಿ20 ಲೀಗ್​ನ ಈ ಬಾರಿಯ ಹರಾಜಿನಲ್ಲಿ 37 ವರ್ಷದ ಪೊಲಾರ್ಡ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

3 / 5
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಯುಎಇ ನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಲೀಗ್​ನಲ್ಲಿ ಕೀರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ​ MI ಎಮಿರೇಟ್ಸ್‌ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಮುಂದಿನ ILT20 ಸೀಸನ್​ಗಾಗಿ ಎಂಐ ಎಮಿರೇಟ್ಸ್‌ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಹೆಸರು ಕೂಡ ಇದೆ. ಇದಾಗ್ಯೂ ಸೌತ್ ಆಫ್ರಿಕಾ ಟಿ20 ಲೀಗ್​ನಿಂದ ಅವರನ್ನು ಕೈ ಬಿಟ್ಟಿದ್ದೇಕೆ ಎಂಬುದೇ ಈಗ ಕುತೂಹಲ.

4 / 5
ಇನ್ನು ಕೀರನ್ ಪೊಲಾರ್ಡ್ ಅವರನ್ನು ಕೈ ಬಿಟ್ಟಿರುವ ಎಂಐ ಕೇಪ್ ಟೌನ್ ತಂಡವು ಆ ಸ್ಥಾನದಲ್ಲಿ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಇದೇ ಮೊದಲ ಬಾರಿಗೆ ಸ್ಟೋಕ್ಸ್​ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮುಂದಿನ ಸೀಸನ್​ಗಾಗಿ ಟ್ರೆಂಟ್ ಬೌಲ್ಟ್ ಕೂಡ ಎಂಐ ಕೇಪ್ ಟೌನ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

5 / 5
ಎಂಐ ಕೇಪ್​ ಟೌನ್ ತಂಡದ ರಿಟೈನ್ ಆಟಗಾರರು: ಬೆನ್ ಸ್ಟೋಕ್ಸ್, ರಶೀದ್ ಖಾನ್, ಟ್ರೆಂಟ್ ಬೌಲ್ಟ್, ಅಝ್ಮತುಲ್ಲಾ ಒಮರ್​ಝೈ, ನುವಾನ್ ತುಷಾರ, ಕ್ರಿಸ್ ಬೆಂಜಮಿನ್, ಕಗಿಸೊ ರಬಾಡ, ಡೆವಾಲ್ಡ್ ಬ್ರೆವಿಸ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ರಿಕೆಲ್ಟನ್, ಜಾರ್ಜ್ ಲಿಂಡೆ, ಡೆಲಾನೊ ಪೊಟ್ಗೀಟರ್, ಥಾಮಸ್ ಕಬರ್ ಮತ್ತು ಕಾನರ್ ಎಸ್ಟರ್‌ಹುಯಿಜೆನ್.