Sam Curran IPL Auction 2025: 18.50 ಕೋಟಿ ವೀರನಿಗೆ ಈ ಬಾರಿ ಸಿಕ್ಕಿದ್ದು ಕೇವಲ 2.40 ಕೋಟಿ
Sam Curran Auction Price: ಈ ಬಾರಿಯ ಮೆಗಾ ಹರಾಜಿನಲ್ಲಿ ಅನೇಕ ಆಟಗಾರರು ಭರ್ಜರಿ ಮೊತ್ತಕ್ಕೆ ಮಾರಾಟವಾದರೆ, ಕೆಲವು ಆಟಗಾರರು ಭಾರೀ ನಷ್ಟವನ್ನು ಅನುಭವಿಸಿದ್ದಾರೆ. ಅವರಲ್ಲಿ ಕಳೆದ ಸೀಸನ್ ವರೆಗೆ ಪ್ರತಿ ವರ್ಷ 18.50 ಕೋಟಿ ರೂಪಾಯಿ ಪಡೆಯುತ್ತಿದ್ದ ಸ್ಯಾಮ್ ಕರನ್ ಈಗ 16.10 ಕೋಟಿ ರೂಪಾಯಿ ನಷ್ಟದೊಂದಿಗೆ ಕೇವಲ 2.40 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ.
1 / 5
ಒಂದೆಡೆ, ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರು ಭರ್ಜರಿ ಹಣ ಪಡೆದರೆ, ಮತ್ತೊಂದೆಡೆ ಕಳೆದ ಬಾರಿ ಕೋಟಿ ಕೋಟಿ ಪಡೆದಿದ್ದ ಅನೇಕ ಆಟಗಾರರು ಈ ಬಾರಿ ಅಲ್ಪ ಮೊತ್ತಕ್ಕೆ ಹರಾಜಾಗಿದ್ದಾರೆ.
2 / 5
ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಕೇವಲ 2.40 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಈ ಮೂಲಕ ಸ್ಯಾಮ್ ಕರನ್ ಬರೋಬ್ಬರಿ 16.10 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಕಳೆದ ಸೀಸನ್ ವರೆಗೆ ಪ್ರತಿ ವರ್ಷ 18.50 ಕೋಟಿ ರೂಪಾಯಿ ಪಡೆಯುತ್ತಿದ್ದ ಕರನ್ ಈಗ 16.10 ಕೋಟಿ ರೂಪಾಯಿ ನಷ್ಟದೊಂದಿಗೆ ಕೇವಲ 2.40 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ.
3 / 5
ಸ್ಯಾಮ್ ಕರನ್ ವಿಶ್ವ ಚಾಂಪಿಯನ್ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. 2022 ರಲ್ಲಿ, ಅವರು ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಜೊತೆಗೆ ಸರಣಿಯ ಆಟಗಾರನಾಗಿಯೂ ಆಯ್ಕೆಯಾಗಿದ್ದರು. ಅದಕ್ಕಾಗಿಯೇ ಅವರನ್ನು ಐಪಿಎಲ್‌ನಲ್ಲಿ ದೊಡ್ಡ ಮೊತ್ತವನ್ನು ನೀಡಿ ಪಂಜಾಬ್ ಖರೀದಿಸಿತ್ತು.
4 / 5
ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಕರನ್ 270 ರನ್ ಬಾರಿಸಿದ್ದರೆ, 16 ವಿಕೆಟ್‌ಗಳನ್ನು ಸಹ ಪಡೆದರು. ಆದರೆ ಅವರ ಎಕಾನಮಿ ದರವು ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಹೀಗಾಗಿ ಕರನ್ ಅವರು ಪಡೆದ ಬೆಲೆಗೆ ತಕ್ಕಂತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಪಂಜಾಬ್ ಅವರನ್ನು ಬಿಡ್ ಮಾಡಲಿಲ್ಲ.
5 / 5
ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಇದುವರೆಗೆ 59 ಪಂದ್ಯಗಳಲ್ಲಿ 25 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 883 ರನ್ ಗಳಿಸಿದ್ದಾರೆ. ಜೊತೆಗೆ ಅವರ ಸ್ಟ್ರೈಕ್ ರೇಟ್ ಕೂಡ 136ಕ್ಕಿಂತ ಹೆಚ್ಚಿದೆ. ಇದಲ್ಲದೇ ಕರನ್ 58 ವಿಕೆಟ್ ಕಬಳಿಸಿದ್ದಾರೆ.