- Kannada News Photo gallery Cricket photos Faf du Plessis IPL 2025 Auction DC buys the South Africa player for the auction price of 2 cr Rupees, details in kannada
Faf du Plessis IPL Auction 2025: ನಾಯಕನನ್ನೇ ಕೈಬಿಟ್ಟ ಆರ್‌ಸಿಬಿ..! ಮೂಲ ಬೆಲೆಗೆ ಡೆಲ್ಲಿ ಪಾಲಾದ ಫಾಫ್
Faf du Plessis Auction Price: ಕಳೆದ ಮೂರು ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ಖರೀದಿಸಲಿಲ್ಲ. ಈ ಆಟಗಾರನನ್ನು ಆರ್‌ಸಿಬಿ ಬಿಡ್ ಮಾಡದಿರುವುದು ದೊಡ್ಡ ವಿಷಯ. ಅಚ್ಚರಿಯ ಸಂಗತಿಯೆಂದರೆ ಡುಪ್ಲೆಸಿಸ್ ತನ್ನ ಮೂಲ ಬೆಲೆಗೆ ಅಂದರೆ ಕೇವಲ 2 ಕೋಟಿ ರೂ.ಗೆ ದೆಹಲಿ ಕ್ಯಾಪಿಟಲ್ಸ್‌ಗೆ ಹೋಗಿದ್ದಾರೆ.
Updated on: Nov 25, 2024 | 5:45 PM

ಐಪಿಎಲ್ ಮೆಗಾ ಹರಾಜಿನಲ್ಲಿ ಇತರ 9 ಫ್ರಾಂಚೈಸಿಗಳಿಗೆ ಹೊಲಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಭಾರಿ ದುಬಾರಿ ಬೆಲೆಗೆ ಹಲವು ಆಟಗಾರರನ್ನು ಖರೀದಿಸುತ್ತಿದ್ದ ಈ ಫ್ರಾಂಚೈಸಿ, ಈ ಬಾರಿ ಹಣ ಖರ್ಚು ಮಾಡಲು ಮುಂದಾಗುತ್ತಿಲ್ಲ.

ಇದರ ಜೊತೆಗೆ ಕಳೆದ ಬಾರಿ ತಂಡದಲ್ಲಿದ್ದ ಹಲವು ಸ್ಟಾರ್ ಆಟಗಾರರನ್ನು ಖರೀದಿಸುವುದಿರಲಿ ಇತ್ತ ಆರ್ಟಿಎಮ್ ಆಯ್ಕೆಯನ್ನೂ ಸಹ ಬಳಸುತ್ತಿಲ್ಲ. ಇದರ ಫಲವಾಗಿ ತಂಡದ ಬೌಲಿಂಗ್ ಜೀವಾಳವಾಗಿದ್ದ ಮೊಹಮ್ಮದ್ ಸಿರಾಜ್, ಇದೀಗ ಬೇರೆ ತಂಡವನ್ನು ಸೇರಿಕೊಂಡಿದ್ದಾರೆ. ಅದರಂತೆ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಕೂಡ ಮತ್ತೆ ಆರ್ಸಿಬಿಗೆ ಸೇರಿಕೊಂಡಿಲ್ಲ.

ವಾಸ್ತವವಾಗಿ ಕಳೆದ ಮೂರು ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ಖರೀದಿಸಲಿಲ್ಲ. ಈ ಆಟಗಾರನನ್ನು ಆರ್‌ಸಿಬಿ ಬಿಡ್ ಮಾಡದಿರುವುದು ದೊಡ್ಡ ವಿಷಯ. ಅಚ್ಚರಿಯ ಸಂಗತಿಯೆಂದರೆ ಡುಪ್ಲೆಸಿಸ್ ತನ್ನ ಮೂಲ ಬೆಲೆಗೆ ಅಂದರೆ ಕೇವಲ 2 ಕೋಟಿ ರೂ.ಗೆ ದೆಹಲಿ ಕ್ಯಾಪಿಟಲ್ಸ್‌ಗೆ ಹೋಗಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಆರ್‌ಸಿಬಿ ಅವರಿಗೆ ಆರ್‌ಟಿಎಂ ಕೂಡ ಬಳಸಿಲ್ಲ.

2022 ರಿಂದ ಬೆಂಗಳೂರು ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್, ಪ್ರತಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. 2022 ರಲ್ಲಿ, ಡು ಪ್ಲೆಸಿಸ್ 31 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 468 ರನ್ ಗಳಿಸಿದ್ದರು. ಹಾಗೆಯೇ 2023 ರಲ್ಲಿ, ಡು ಪ್ಲೆಸಿಸ್ 56 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 730 ರನ್ ಗಳಿಸಿದ್ದರು. ಇದರಲ್ಲಿ 8 ಅರ್ಧ ಶತಕಗಳು ಸೇರಿದ್ದವು. ಕಳೆದ ಋತುವಿನಲ್ಲಿಯೂ ಡುಪ್ಲೆಸಿಸ್ 438 ರನ್ ಗಳಿಸಿದ್ದರು. ಆದರೆ ಅಂತಹ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಆರ್‌ಸಿಬಿ ಅವರ ಮೇಲೆ ಮನಸು ಮಾಡಲಿಲ್ಲ.

ಫಾಫ್ ಡು ಪ್ಲೆಸಿಸ್‌ಗೆ 40 ವರ್ಷ ವಯಸ್ಸಾಗಿರುವ ಕಾರಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳದಿರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಈ ಆಟಗಾರನಿಗೆ ಇತರ ಯುವ ಆಟಗಾರರಿಗಿಂತ ಹೆಚ್ಚು ಚುರುಕುತನವಿದೆ. ಡು ಪ್ಲೆಸಿಸ್ ಅವರ ಫೀಲ್ಡಿಂಗ್ ಇನ್ನೂ ವಿಶ್ವ ದರ್ಜೆಯದ್ದಾಗಿದೆ. ಜತೆಗೆ ಡುಪ್ಲೆಸಿಸ್‌ಗೆ ಅನುಭವವೂ ಇದೆ. ಆದರೂ ಆರ್ಸಿಬಿಗೆ ಅವರನ್ನು ಖರೀದಿಸುವ ಮನಸಾಗಲಿಲ್ಲ.

ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಇದುವರೆಗೆ 145 ಪಂದ್ಯಗಳಲ್ಲಿ ಸುಮಾರು 36 ಸರಾಸರಿಯಲ್ಲಿ 4571 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಡು ಪ್ಲೆಸಿಸ್ 37 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಡುಪ್ಲೆಸಿಸ್ ಈಗ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದು, ಈ ತಂಡಕ್ಕೆ ನಿಜಕ್ಕೂ ಜಾಕ್‌ಪಾಟ್ ಹೊಡೆದಿದೆ ಎಂಬುದು ಸ್ಪಷ್ಟವಾಗಿದೆ.
