Devdutt Padikkal IPL Auction 2025: ತವರಿಗೆ ಮರಳಿದ ಕನ್ನಡಿಗ ದೇವದತ್ ಪಡಿಕ್ಕಲ್

Devdutt Padikkal Auction Price: 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ದೇವದತ್ ಪಡಿಕ್ಕಲ್ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ. ಹೀಗಾಗಿ ಅವರ ಖರೀದಿಯಾಗದೆ ಉಳಿದಿದ್ದರು. ಆದರೆ ದಿನದ ಕೊನೆಯಲ್ಲಿ ಮತ್ತೆ ಹರಾಜಿಗೆ ಬಂದ ಪಡಿಕ್ಕಲ್​ರನ್ನು ಆರ್​ಸಿಬಿ ಖರೀದಿಸಿತು.

ಪೃಥ್ವಿಶಂಕರ
|

Updated on: Nov 25, 2024 | 10:02 PM

ಐಪಿಎಲ್ ಮೆಗಾ ಹರಾಜಿನ ಎರಡನೇ ದಿನದ ಕೊನೆಯ ಕ್ಷಣದಂದು ಮತ್ತೊಬ್ಬ ಕನ್ನಡಿಗನನ್ನು ಖರೀದಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ತನ್ನ ಐಪಿಎಲ್ ವೃತ್ತಿಜೀವನವನ್ನು ಆರ್​ಸಿಬಿಯಿಂದಲೇ ಆರಂಭಿಸಿದ್ದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಆರ್​ಸಿಬಿ ಮೂಲ ಬೆಲೆ 2 ಕೋಟಿ ರೂ. ನೀಡಿ ಖರೀದಿಸಿದೆ.

1 / 6
ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಪಡಿಕ್ಕಲ್​ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇದರ ಜೊತೆಗೆ ಸಿಕ್ಕ ಅವಕಾಶಗಳನ್ನು ಅವರು ಸದುಪಯೋಗಪಡಿಸಿಕೊಂಡಿರಲಿಲ್ಲ. ಹೀಗಾಗಿ ಲಕ್ನೋ ಫ್ರಾಂಚೈಸಿ ಪಡಿಕ್ಕಲ್​ರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

2 / 6
ಆದಾಗ್ಯೂ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ದೇವದತ್ ಪಡಿಕ್ಕಲ್ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ. ಹೀಗಾಗಿ ಅವರ ಖರೀದಿಯಾಗದೆ ಉಳಿದಿದ್ದರು. ಆದರೆ ದಿನದ ಕೊನೆಯಲ್ಲಿ ಮತ್ತೆ ಹರಾಜಿಗೆ ಬಂದ ಪಡಿಕ್ಕಲ್​ರನ್ನು ಆರ್​ಸಿಬಿ ಖರೀದಿಸಿತು.

3 / 6
ವಾಸ್ತವವಾಗಿ ದೇವದತ್ ಪಡಿಕ್ಕಲ್​ ಆರ್​ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2020 ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಪಡಿಕ್ಕಲ್, ತನ್ನ ಚೊಚ್ಚಲ ಐಪಿಎಲ್ ಋತುವಿನಲ್ಲಿಯೇ ಐದು ಅರ್ಧ ಶತಕಗಳ ಸಹಾಯದಿಂದ 473 ರನ್ಗಳನ್ನು ಸಿಡಿಸಿದ್ದರು.

4 / 6
ನಂತರದ ಆವೃತ್ತಿಯಲ್ಲೂ ಆರ್​ಸಿಬಿ ಪರ ಅಬ್ಬರಿಸಿದ್ದ ಪಡಿಕ್ಕಲ್, ಒಂದು ಶತಕ ಮತ್ತು ಅರ್ಧಶತಕ ಸೇರಿದಂತೆ ಒಟ್ಟು 411 ರನ್‌ಗಳನ್ನು ಗಳಿಸಿದ್ದರು.ಆರ್​ಸಿಬಿ ಪರ ಆಡಿದ್ದ ಎರಡು ಸೀಸನ್‌ಗಳಲ್ಲಿ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು 2022 ರ ಮೆಗಾ ಹರಾಜಿಗೂ ಮೊದಲು ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿತ್ತು.

5 / 6
ಆ ಬಳಿಕ ರಾಜಸ್ಥಾನ ರಾಯಲ್ಸ್‌ ತಂಡವನ್ನು ಸೇರಿಕೊಂಡಿದ್ದ ಪಡಿಕ್ಕಲ್, ಮೊದಲ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2022 ರ ಐಪಿಎಲ್​ನಲ್ಲಿ 376 ರನ್ ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2023 ರಲ್ಲಿ 261 ರನ್ ಕಲೆಹಾಕಿದ್ದರು. ಆದಾಗ್ಯೂ 2024 ರಲ್ಲಿ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಪಡಿಕ್ಕಲ್ 7 ಪಂದ್ಯಗಳನ್ನು ಆಡಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

6 / 6
Follow us