- Kannada News Photo gallery Cricket photos IPL 2025 Royal Challengers Bengaluru Best probable playing 11 for 2025 season
IPL 2025: 2025 ರ ಐಪಿಎಲ್ಗೆ ಆರ್ಸಿಬಿಯ ಬಲಿಷ್ಠ ಪ್ಲೇಯಿಂಗ್ 11
RCB playing 11, IPL 2025: 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ಕಟ್ಟುವಲ್ಲಿ ಯಶಸ್ವಯಾಗಿವೆ. ಎಲ್ಲಾ ಫ್ರಾಂಚೈಸಿಗಳಂತೆ ಆರ್ಸಿಬಿ ಕೂಡ ಈ ಬಾರಿ ಅಳೆದು ತೂಗಿ ಹಲವು ಸ್ಟಾರ್ ಕ್ರಿಕೆಟಿಗರನ್ನು ಖರೀದಿಸಿದೆ. ಅವರಲ್ಲಿ ಯಾರು ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ನೋಡುವುದಾದರೆ..
Updated on: Nov 25, 2024 | 11:04 PM

ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ಕಟ್ಟುವಲ್ಲಿ ಯಶಸ್ವಯಾಗಿವೆ. ಎಲ್ಲಾ ಫ್ರಾಂಚೈಸಿಗಳಂತೆ ಆರ್ಸಿಬಿ ಕೂಡ ಈ ಬಾರಿ ಅಳೆದು ತೂಗಿ ಹಲವು ಸ್ಟಾರ್ ಕ್ರಿಕೆಟಿಗರನ್ನು ಖರೀದಿಸಿದೆ. ಅವರಲ್ಲಿ ಯಾರು ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ನೋಡುವುದಾದರೆ..

ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರ ಸೃಷ್ಟಿಸಿದ್ದ ಇಂಗ್ಲೆಂಡ್ನ ಸ್ಟಾರ್ ವಿಕೆಟ್ಕೀಪರ್ ಪಿಲ್ ಸಾಲ್ಟ್, ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತವಗಿದೆ. ಇದರ ಜೊತೆಗೆ ಸಾಲ್ಟ್ ವಿಕೆಟ್ ಕೀಪರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಎಂದಿನಂತೆ ವಿರಾಟ್ ಕೊಹ್ಲಿ, ಈ ಬಾರಿಯೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಕೆಲವು ಆವೃತ್ತಿಗಳಿಂದ ಆರಂಭಿಕನಾಗಿ ಯಶಸ್ವಿಯಾಗಿರುವ ಕೊಹ್ಲಿ ಆರಂಭಿಕ ಜವಬ್ದಾರಿಯ ಜೊತೆಗೆ ನಾಯಕನಾಗಿಯೂ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ಈಗಾಗಲೇ ತಂಡದಲ್ಲಿ ಉಳಿದುಕೊಂಡಿದ್ದ ಭಾರತದ ಆಟಗಾರ ರಜತ್ ಪಾಟೀದರ್, ಮುಂದಿನ ಆವೃತ್ತಿಯಲ್ಲೂ ಆರ್ಸಿಬಿ ಪರ ಕಣಕ್ಕಿಳಿಯಲಿದ್ದು, ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಇಂಗ್ಲೆಂಡ್ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ಈ ಬಾರಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರನಾಗಿರುವ ಲಿವಿಂಗ್ಸ್ಟೋನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಬೌಲಿಂಗ್ನಲ್ಲೂ ನೆರವಾಗಲಿದ್ದಾರೆ.

ಲಿಯಾಮ್ ಲಿವಿಂಗ್ಸ್ಟೋನ್ರಂತೆ ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಗಳಿವೆ. ವಿಕೆಟ್ ಕೀಪರ್ ಆಗಿ ಪಿಲ್ ಸಾಲ್ಟ್ ಇರುವ ಕಾರಣ, ಜಿತೇಶ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮತ್ತೆ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದು, ಎಂದಿನಂತೆ ಅವರ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಆರನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಆಡಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಆರ್ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅವರು 7ನೇ ಕ್ರಮಾಂದಲ್ಲಿ ಕಣಕ್ಕಿಳಿಯಲಿದ್ದಾರೆ.

ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ 14 ವರ್ಷಗಳ ನಂತರ ಮತ್ತೆ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಅವರು ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸುವುದರ ಜೊತೆಗೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ತಂಡದ ಪ್ರಮುಖ ವಿದೇಶಿ ಬೌಲರ್ಗಳಲ್ಲಿ ಒಬ್ಬರಾಗಿದ್ದು, ಅವರು ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಅವರು 9ನೇ ಕ್ರಮಾಂಕದಲ್ಲಿ ಆಡಬಹುದು.

ಇನ್ನು ಈ ಮೊದಲೇ ಆರ್ಸಿಬಿ ತಂಡದಲ್ಲಿರುವ ಭಾರತದ ಯುವ ವೇಗದ ಬೌಲರ್ ಯಶ್ ದಯಾಳ್ ತಂಡದಲ್ಲಿ ಆಡುವುದು ಖಚಿತವಾಗಿದ್ದು, ಅವರು 10ನೇ ಕ್ರಮಾಂಕದಲ್ಲಿ ಆಡಬಹುದು.

11ನೇ ಆಟಗಾರನಾಗಿ ಸುಯೇಶ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಸುಯೇಶ್ ತಮ್ಮ ಗೂಗ್ಲಿ ಸ್ಪಿನ್ ದಾಳಿಯ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.



















