ಬುಮ್ರಾ ಬೆಂಡೆತ್ತಿ ಹೊಸ ಇತಿಹಾಸ ರಚಿಸಿದ ಸ್ಯಾಮ್ ಕೊನ್ಸ್ಟಾಸ್
Sam Konstas - Jasprit Bumrah: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 4483 ಎಸೆತಗಳ ಬಳಿಕ ಟೆಸ್ಟ್ನಲ್ಲಿ ಸಿಕ್ಸ್ ಹೊಡೆಸಿಕೊಂಡಿದ್ದಾರೆ. ಅಂದರೆ 2021 ರಿಂದ 28 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಒಮ್ಮೆಯೂ ಸಿಕ್ಸ್ ಚಚ್ಚಿಸಿಕೊಂಡಿರಲಿಲ್ಲ. ಆದರೀಗ ಬುಮ್ರಾ ಅವರ ಬೆಂಡೆತ್ತುವ ಮೂಲಕ ಸ್ಯಾಮ್ ಕೊನ್ಸ್ಟಾಸ್ ಈ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ.
1 / 5
ಜಸ್ಪ್ರೀತ್ ಬುಮ್ರಾ ತಮ್ಮ ಟೆಸ್ಟ್ ಕೆರಿಯರ್ನಲ್ಲಿ 44 ಪಂದ್ಯಗಳನ್ನಾಡಿದ್ದಾರೆ. ಈ 44 ಪಂದ್ಯಗಳಲ್ಲಿ 84 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಎಸೆದಿರುವ ಒಟ್ಟು ಓವರ್ಗಳ ಸಂಖ್ಯೆ 1383, ಅಂದರೆ ಬರೋಬ್ಬರಿ 8298 ಎಸೆತಗಳನ್ನು ಎಸೆದಿದ್ದಾರೆ. ಇದರ ನಡುವೆ ನೀಡಿರುವುದು ಕೇವಲ 7 ಸಿಕ್ಸ್ಗಳು ಮಾತ್ರವಾಗಿತ್ತು. ಆದರೆ ಅದು ಸ್ಯಾಮ್ ಕೊನ್ಸ್ಟಾಸ್ ಬರುವ ಮುಂಚೆ.
2 / 5
ಹೌದು, ಮೆಲ್ಬೋರ್ನ್ನ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲೇ ಸ್ಯಾಮ್ ಕೊನ್ಸ್ಟಾಸ್ ಅಬ್ಬರಿಸಿದ್ದಾರೆ. ಅದು ಕೂಡ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ಸಿಕ್ಸ್ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ.
3 / 5
2021 ರಲ್ಲಿ ಟೆಸ್ಟ್ನಲ್ಲಿ ಕೊನೆಯ ಬಾರಿ ಸಿಕ್ಸ್ ಹೊಡೆಸಿಕೊಂಡ ಬುಮ್ರಾ ಇದೀಗ ಒಂದೇ ಪಂದ್ಯದಲ್ಲಿ 2 ಸಿಕ್ಸ್ ಚಚ್ಚಿಸಿಕೊಂಡಿದ್ದಾರೆ. ಈ ಎರಡೂ ಸಿಕ್ಸ್ಗಳನ್ನು ಬಾರಿಸಿದ್ದು 19ರ ಹರೆಯದ ಸ್ಯಾಮ್ ಕೊನ್ಸ್ಟಾಸ್ ಎಂಬುದು ವಿಶೇಷ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬುಮ್ರಾಗೆ 2 ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಯಾಮ್ ತಮ್ಮದಾಗಿಸಿಕೊಂಡಿದ್ದಾರೆ.
4 / 5
ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಪಂದ್ಯದ 11ನೇ ಓವರ್ನಲ್ಲಿ ಸ್ಯಾಮ್ ಕೊನ್ಸ್ಟಾಸ್ ಒಂದೇ ಓವರ್ನಲ್ಲಿ 18 ರನ್ ಚಚ್ಚಿದ್ದಾರೆ. ಇದು ಸಹ ಜಸ್ಪ್ರೀತ್ ಬುಮ್ರಾ ಅವರ ಓವರ್ನಲ್ಲಿ ಎಂಬುದು ಉಲ್ಲೇಖಾರ್ಹ. ಅಂದರೆ ಬುಮ್ರಾ ಅವರನ್ನೇ ಲೀಲಾಜಾಲವಾಗಿ ಎದುರಿಸಿ ಸ್ಯಾಮ್ ಕೊನ್ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಸಂಚಲನ ಸೃಷ್ಟಿಸಿದ್ದಾರೆ.
5 / 5
ಈ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಸ್ಯಾಮ್ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 60 ರನ್ ಬಾರಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ 2ನೇ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ಸ್ಯಾಮ್ ಕೊನ್ಸ್ಟಾಸ್ ತಮ್ಮದಾಗಿಸಿಕೊಂಡಿದ್ದಾರೆ.