Sanju Samson: ಬಡ ಪ್ರತಿಭೆಗಳಿಗಾಗಿ 2 ಕೋಟಿ ರೂ. ಮೀಸಲಿಟ್ಟ ಸಂಜು ಸ್ಯಾಮ್ಸನ್
TV9 Web | Updated By: ಝಾಹಿರ್ ಯೂಸುಫ್
Updated on:
Jun 22, 2023 | 9:24 PM
Sanju Samson: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಿಂದ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ 2 ಕೋಟಿ ರೂ. ಅನ್ನು ಬಡ ಪ್ರತಿಭೆಗಳಿಗಾಗಿ ಮೀಸಲಿಟಿದ್ದಾರೆ
1 / 7
ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸ್ಯಾಮ್ಸನ್ ಸುದ್ದಿಯಾಗಿರುವುದು ಅವರ ಮಾನವೀಯ ಗುಣಗಳಿಂದ ಎಂಬುದು ವಿಶೇಷ.
2 / 7
ಹೌದು, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 15 ಕೋಟಿ ರೂ. ಈ ಹದಿನೈದು ಕೋಟಿಯಲ್ಲಿ 2 ಕೋಟಿ ರೂ. ಅನ್ನು ಬಡ ಪ್ರತಿಭೆಗಳಿಗಾಗಿ ಮೀಸಲಿಟಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.
3 / 7
ಈ ವಿಚಾರವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ರಾಜಸ್ಥಾನ್ ರಾಯಲ್ಸ್ ತಂಡದ ಫಿಟ್ನೆಸ್ ತರಬೇತುದಾರ ರಾಜಮಣಿ ಪ್ರಭು. ಈ ಬಗ್ಗೆ ಮಾತನಾಡಿರುವ ಪ್ರಭು, ಸಂಜು ಸ್ಯಾಮ್ಸನ್ಗೆ ಹಲವು ಫ್ರಾಂಚೈಸಿಗಳಿಂದ ಆಫರ್ ಬಂದಿತ್ತು. ಇದಾಗ್ಯೂ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಲು ನಿರ್ಧರಿಸಿದ್ದರು.
4 / 7
ಅವರು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮತ್ತೆ ಚಾಂಪಿಯನ್ ಮಾಡುವ ಕನಸು ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ಯಾವುದೇ ರೀತಿಯ ಆಫರ್ ಬಂದರೂ ಅವರು ಸ್ವೀಕರಿಸಿಲ್ಲ. ಇದೀಗ ರಾಜಸ್ಥಾನ್ ರಾಯಲ್ಸ್ ಅವರಿಗೆ 15 ಕೋಟಿ ರೂ. ಪಾವತಿಸುತ್ತಿದೆ.
5 / 7
ಆದರೆ ಈ ಹದಿನೈದು ಕೋಟಿ ರೂ. ಮೊತ್ತದಲ್ಲಿ 2 ಕೋಟಿ ರೂ. ಅನ್ನು ಸ್ಯಾಮ್ಸನ್ ಬಡ ಪ್ರತಿಭೆಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಯುವ ಪ್ರತಿಭಾವಂತ ಕ್ರಿಕೆಟಿಗರಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ.
6 / 7
ಅಲ್ಲದೆ ಪ್ರತಿಭಾವಂತ ಮಕ್ಕಳಿಗೂ ಸಂಜು ಸ್ಯಾಮ್ಸನ್ ನೆರವಿನ ಹಸ್ತ ಚಾಚುತ್ತಿದ್ದಾರೆ. ಇದನ್ನು ಅವರು ಎಲ್ಲೂ ಕೂಡ ಹೇಳಿಕೊಂಡಿಲ್ಲ. ಯಾರಿಗೂ ಗೊತ್ತಾಗದಂತೆ ತಮ್ಮ ವೇತನದಿಂದಲೇ ಹಲವರ ನೆರವಿಗೆ ನಿಂತಿದ್ದಾರೆ ಎಂದು ರಾಜಮಣಿ ಪ್ರಭು ತಿಳಿಸಿದ್ದಾರೆ.
7 / 7
ಇದೀಗ ಸಂಜು ಸ್ಯಾಮ್ಸನ್ ಅವರ ಮಾನವೀಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇವೆಲ್ಲದರ ಈ ಬಾರಿಯಾದರೂ ಭಾರತ ತಂಡದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ ಯುವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್.