Sanju Samson: ಶತಕಗಳ ವೀರ ಸಂಜು ಸ್ಯಾಮ್ಸನ್​ಗೆ ಒಲಿದ ನಾಯಕತ್ವ ಪಟ್ಟ

Sanju Samson: ಟೀಂ ಇಂಡಿಯಾದಲ್ಲಿ ಸ್ಥಿರ ಸ್ಥಾನ ಪಡೆಯಲು ಹೆಣಗಾಡುತ್ತಿದ್ದ ಸಂಜು ಸ್ಯಾಮ್ಸನ್, ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ ಅವರು ಈಗ ಟೀಂ ಇಂಡಿಯಾದಲ್ಲಿ ಖಾಯಂ ಆರಂಭಿಕ ಆಟಗಾರರಾಗಿದ್ದಾರೆ. ಇದಲ್ಲದೆ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ.

ಪೃಥ್ವಿಶಂಕರ
|

Updated on: Nov 20, 2024 | 3:25 PM

ಹಲವು ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆಡುತ್ತಿದ್ದರೂ, ಇದುವರೆಗೂ ಖಾಯಂ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌, ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದ ಟಿ20 ತಂಡದಲ್ಲಿ ಖಾಯಂ ಆರಂಭಿಕನಾಗಿ ಸ್ಥಾನ ಪಡೆಯುವುತ್ತ ಹೆಜ್ಜೆ ಇಟ್ಟಿದ್ದಾರೆ. ಆಡಿರುವ ಐದು ಇನ್ನಿಂಗ್ಸ್​ಗಳಲ್ಲಿ 3 ಶತಕ ಸಿಡಿಸಿರುವ ಸಂಜುಗೆ ಭಾರತ ತಂಡದಲ್ಲಿ ಸದ್ಯಕ್ಕೆ ಸ್ಥಾನ ಖಾಯಂ ಆಗಿದೆ.

1 / 5
ಕೆಲವು ದಿನಗಳ ಹಿಂದೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿತ್ತು. ಭಾರತ ತಂಡದ ಈ ಗೆಲುವಿನಲ್ಲಿ ಸಂಜು ಅವರ ಪಾತ್ರ ಅಪಾರವಾಗಿತ್ತು. ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಆಡಿದ 4 ಪಂದ್ಯಗಳಲ್ಲಿ 2 ಭರ್ಜರಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು.

2 / 5
ಇದಲ್ಲದೆ ಸಂಜು ಆಡಿರುವ ಕಳೆದ 5 ಇನ್ನಿಂಗ್ಸ್‌ಗಳಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಸಂಜು ಅವರ ಈ ಅದ್ಭುತ ಫಾರ್ಮ್​ ಅನ್ನು ಗಮನಿಸಿರುವ ಕೇರಳ ಕ್ರಿಕೆಟ್ ಸಂಸ್ಥೆ, ಈ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್​ಗೆ ನಾಯಕತ್ವ ಪಟ್ಟ ನೀಡಿದೆ. ವಾಸ್ತವವಾಗಿ ಸಂಜು 23 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ.

3 / 5
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯು ಇದೇ ನವೆಂಬರ್ 23 ರಿಂದ ಆರಂಭವಾಗಲಿದ್ದು, ಡಿಸೆಂಬರ್ 15 ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಸಂಜು ಕೇರಳ ತಂಡವನ್ನು ಮುನ್ನಡೆಸುವುದನ್ನು ಕಾಣಬಹುದಾಗಿದೆ. ಟೀಂ ಇಂಡಿಯಾ ಮುಂದಿನ ಜನವರಿಯವರೆಗೆ ಯಾವುದೇ ವೈಟ್ ಬಾಲ್ ಪಂದ್ಯವನ್ನು ಆಡುವುದಿಲ್ಲ. ಇದರಿಂದಾಗಿ ಇಡೀ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗೆ ಸ್ಯಾಮ್ಸನ್ ಲಭ್ಯರಿರಲಿದ್ದಾರೆ.

4 / 5
ಕೇರಳ ತಂಡ: ಸಂಜು ಸ್ಯಾಮ್ಸನ್ (ನಾಯಕ), ಸಚಿನ್ ಬೇಬಿ, ರೋಹನ್ ಕುನ್ನುಮಲ್, ಜಲಜ್ ಸಕ್ಸೇನಾ, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್, ಬಾಸಿಲ್ ಥಂಪಿ, ಎಸ್ ನಿಜಾರ್, ಅಬ್ದುಲ್ ಬಸಿತ್, ಎ ಸ್ಕಾರಿಯಾ, ಅಜ್ನಾಸ್ ಇಎಮ್, ಸಿಜೋಮನ್ ಜೋಸೆಫ್, ಮಿಧುನ್ ಎಸ್, ವೈಶಾಖ್ ಚಂದ್ರನ್, ವಿನೋದ್ ಕುಮಾರ್ ಸಿವಿ, ಬಾಸಿಲ್ ಎನ್‌ಪಿ, ಶರಫುದ್ದೀನ್ ಎನ್‌ಎಂ, ನಿಧೀಶ್ ಎಂಡಿ.

5 / 5
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ